ಮಂಡ್ಯ:ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರನಿಗೆ ಆಕೆಯ ಗಂಡ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ದೃಶ್ಯ ವೈರಲ್​ ಆಗಿದೆ.
ಮಂಡ್ಯದ ಹೊಸಹಳ್ಳಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ. ಹರ್ಷಿತಾ ಮತ್ತು ಈಕೆಯ ಪ್ರಿಯಕರ ಚೇತನ್​ಗೆ ಹಲ್ಲೆಗೊಳಗಾಗಿದ್ದಾರೆ. ರೌಡಿಶೀಟರ್​ ನಾಗೇಂದ್ರ ಅಲಿಯಾಸ್​ ಕುಳ್ಳನಾಗನ ಪತ್ನಿ ಹರ್ಷಿತಾ. ಪ್ರೀತಿಸಿ ಮದುವೆಯಾಗಿದ್ದ ಹರ್ಷಿತಾ ಹಾಗೂ ಕುಳ್ಳನಾಗ ದಂಪತಿಗೆ 8 ವರ್ಷದ ಮಗನಿದ್ದಾನೆ.ಇದನ್ನೂ ಓದಿರಿಮರಕ್ಕೆ ಕಾರು ಡಿಕ್ಕಿ, ಮೂವರು ಯುವಕರ ದುರ್ಮರಣ
ತನ್ನ ಮನೆಯಲ್ಲೇ ಪತ್ನಿ ಹರ್ಷಿತಾ ಮತ್ತು ಈಕೆಯ ಪ್ರಿಯಕರ ಇಬ್ಬರೂ ಒಟ್ಟಿಗೆ ಸಿಕ್ಕಿಬಿದದ್ದಿದ್ದು, ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ದೋಸೆ ತವದಲ್ಲಿ ಚೇತನ್ ಮೇಲೆ ಕುಳ್ಳನಾಗ ಎಂದು ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಲು ರೌಡಿಶೀಟರ್ ಕುಳ್ಳನಾಗನಿಗೆ ಸ್ನೇಹಿತ ಯೋಗೇಶ್ ಅಲಿಯಾಸ್​ ಕಟ್ಟೆ ಯೋಗೇಶ್ ಸಾಥ್ ನೀಡಿದ್ದಾನೆ.
ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಆರೋಪಿಗಳಾದ ಕುಳ್ಳನಾಗ ಮತ್ತು ಯೋಗೇಶ್​ನನ್ನು ಬಂಧಿಸಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಕುಳ್ಳನಾಗನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಪರ್ಮನೆಂಟ್ ಜಾಬ್​ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್​

ಮರಕ್ಕೆ ಕಾರು ಡಿಕ್ಕಿ, ಮೂವರು ಯುವಕರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
