ಹಾವೇರಿ:ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೇ ಶರವೇಗದಲ್ಲಿ ಏರುತ್ತಲೇ ಇದೆ. ಇದೀಗ ಈ ಸೋಂಕಿಗೆ ಒಂದೇ ದಿನ ತಾಯಿ-ಮಗ ಬಲಿಯಾಗಿದ್ದು, ಒಂದೇ ಚಿತೆಯಲ್ಲಿ ಇವರಿಬ್ಬರ ಅಂತ್ಯಸಂಸ್ಕಾರ ನೆರವೇರಿಸಿದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಇಂದು ಸಂಭವಿಸಿದೆ.
ನಾಗರಾಜ್ ಬನ್ನಿಹಟ್ಟಿ ಮತ್ತು ಇವರ ತಾಯಿ ಲಲಿತವ್ವ ಬನ್ನಿಹಟ್ಟಿ ಮೃತ ದುರ್ದೈವಿಗಳು. ನಾಗರಾಜ್​ ಅವರು ಚಿಕ್ಕಣಜಿ ಗ್ರಾಮದ ಹೆಸ್ಕಾಂ ನೌಕರನಾಗಿದ್ದ. ಇವರಿಬ್ಬರಿಗೂ ಇತ್ತೀಚಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ತಾಯಿಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾವಣಗೇರಿ ಆಸ್ಪತ್ರೆಯಲ್ಲಿ ಮಗ ಚಿಕಿತ್ಸೆ ಪಡೆಯುತ್ತಿದ್ದ.ಇದನ್ನೂ ಓದಿರಿಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!
ಚಿಕಿತ್ಸೆ ಫಲಿಸದೆ ತಾಯಿ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಇತ್ತ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗನೂ ಡಾವಣಗೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇಂದು(ಶನಿವಾರ) ಬೆಳಗ್ಗೆ ಇವರಿಬ್ಬರ ಮೃತದೇಹವನ್ನು ಸ್ವಗ್ರಾಮದಲ್ಲಿ ಒಂದೇ ಚಿತೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ. ಆ ಮೂಲಕ ತಾಯಿ-ಮಗ ಸಾವಲ್ಲೂ ಒಂದಾಗಿದ್ದಾರೆ.
ತಾಯಿ-ಮಗ ಇಬ್ಬರೂ ಒಳ್ಳೆತನದಿಂದಲೇ ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು. ಇವರಿಬ್ಬರ ಸಾವಿನ ಸುದ್ದಿ ಕೇಳಿ ಗ್ರಾಮಕ್ಕೆ ಗ್ರಾಮವೇ ಶೋಕದಲ್ಲಿ ಮುಳುಗಿದಂತಿದೆ.(ದಿಗ್ವಿಜಯ ನ್ಯೂಸ್, ಹಾವೇರಿ)
ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಪ್ಪಲಿ ಹಾರ ಹಾಕಿ ತಲೆ ಬೋಳಿಸಿ ಮೆರವಣಿಗೆ!

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ಬೆಂಗಳೂರಲ್ಲಿ ಗ್ಯಾಂಗ್​ ರೇಪ್​, ಗುಪ್ತಾಂಗಕ್ಕೆ ಬಿಯರ್​ ಬಾಟಲಿ ಇಟ್ಟು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸರಿಂದ ಗುಂಡೇಟು!

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
