ಬೆಂಗಳೂರು:ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್ ದುರಂತ ಅಂತ್ಯ ಕಂಡ ಬೆನ್ನಲ್ಲೇ ಮತ್ತೊಂದು ಅವಾಂತರ ಸಂಭವಿಸಿದೆ. ದಂತ ಚಿಕಿತ್ಸೆಗೆ ಹೋದ ನಟಿಯ ಮುಖವನ್ನೇ ವಿರೂಪಗೊಳಿಸಲಾಗಿದ್ದು, ದಂತ ವೈದ್ಯೆಯ ಯಡವಟ್ಟಿನಿಂದ ನಟಿಗೆ ಅವಕಾಶಗಳೇ ಇಲ್ಲದಂತಾಗುತ್ತಿದೆ. ನಟಿಯ ಮುಖ ನೋಡಿ ಇನ್ಮುಂದೆ ಕೆಲಸಕ್ಕೆ ಬರಬೇಡಮ್ಮ ಅಂದಿದ್ದಾರಂತೆ ಹಲವರು. ಸಿನಿಮಾದಲ್ಲಿ ನಟಿಸಲೂ ಆಗದೆ, ವಾಯ್ಸ್​ ಡಬ್ಬಿಂಗ್​ ಮಾಡಲೂ ಆಗದೆ ಸದ್ಯ ಕೆಲಸವಿಲ್ಲದೇ ಕಂಗಾಲಾಗಿರು ನಟಿ, ನನಗಾದ ಗತಿ ಮತ್ಯಾರಿಗೂ ಬರೋದು ಬೇಡ ಎಂದು ಕಣ್ಣೀರಿಟ್ಟಿದ್ದಾರೆ.
ಎಫ್ಐಆರ್ 6 ಟು 6 ಸೇರಿ ಹಲವು ಸಿನಿಮಾದಲ್ಲಿ ನಟಿಸಿರುವ ಸ್ವಾತಿ, ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಿದ್ದಾರೆ. ಹಲ್ಲಿನ ರೂಟ್ ಕ್ಯಾನಲ್​ ಮಾಡಿಸಿಕೊಳ್ಳಲೆಂದು ಸಮೀಪದ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸ್ವಾತಿ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡಿತ್ತು. ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಚಿಕಿತ್ಸೆ ಕೊಟ್ಟ ವೈದ್ಯೆ ಹೇಳಿದ್ದರು. 20 ದಿನ ಕಳೆದರೂ ಮುಖ ಮೊದಲಿನಂತೆ ಆಗಿಲ್ಲ. ಮುಖ ಊತ ಹಾಗೇ ಇದ್ದು, ಒಂದು ಕಣ್ಣು ಮುಚ್ಚಿದಂತಾಗಿದೆ. ತುಟಿಯೂ ಊದಿದೆ. ಆಸ್ಪತ್ರೆಗೆ ಹೀಗಾಗಿದೆ ಅಂತ ಕಾಲ್ ಮಾಡಿದ್ರೆ, ‘ನಾನು ಮುಂಬೈಲ್ಲಿ ಇದ್ದೀನಿ’ ಅಂತಿದ್ದಾರಂತೆ ವೈದ್ಯರು.

ಮುಖ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ತೊಂದರೆ ಅನುಭವಿಸುತ್ತಿರೋ ನಟಿ, ಕೆಲಸವನ್ನೂ ಕಳೆದುಕೊಂಡಿದ್ದಾರೆ. ನಟಿಯ ಮುಖ ನೋಡಿ ಇನ್ಮುಂದೆ ಕೆಲಸಕ್ಕೆ ಬರಬೇಡಮ್ಮ ಅಂದಿದ್ದಾರಂತೆ ಹಲವರು. ಸಿನಿಮಾದಲ್ಲಿ ನಟಿಸಲೂ ಆಗದೆ, ವಾಯ್ಸ್​ ಡಬ್ಬಿಂಗ್​ ಮಾಡಲೂ ಆಗದೆ ಸದ್ಯ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ‘ನನಗಾದ ಗತಿ ಬೇರೆ ಯಾರಿಗೂ ಆಗೋದು ಬೇಡ. ದಯವಿಟ್ಟು ಓರಿಕ್ಸ್ ಡೆಂಟಲ್ ಕ್ಲಿನಿಕ್​ಗೆ ಹೋಗಬೇಡಿ’ ನಟಿ ಮನವಿ ಮಾಡಿದ್ದಾರೆ. ಸದ್ಯ ಬೇರೆ ಕಡೆ ಸ್ವಾತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಸೊಂಟದ ಭಾಗದಲ್ಲಿ ಕೀವು ತುಂಬಿದೆ… ನಟಿ ಚೇತನಾ ರಾಜ್ ಸಾವಿನ ಬೆನ್ನಲ್ಲೇ ಮತ್ತೊಂದು ಫ್ಯಾಟ್​ ಸರ್ಜರಿ ಪ್ರಕರಣ ಬೆಳಕಿಗೆ!

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 1 =
Remember me
