ಮೈಸೂರು:ನಟ ದರ್ಶನ್​ ವಿರುದ್ಧ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಮಾಡಿದ್ದ ಗಂಭೀರ ಆರೋಪ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ‘ಸಂದೇಶ್ ದಿ ಪ್ರಿನ್ಸ್ ಹೋಟೆಲ್’ನಲ್ಲಿ ಸಿಬ್ಬಂದಿ ಮೇಲೆ ದರ್ಶನ್​ ಹಲ್ಲೆ ನಡೆಸಿದ್ದಾರೆ ಎನ್ನಲಾದ ಕುರಿತು ಆ ಹೋಟೆಲ್​ ಮಾಲೀಕ ನಾಗರಾಜ್​ ಅವರ ಪುತ್ರ ಸಂದೇಶ್​ ಮಹತ್ವದ ಮಾಹಿತಿ ನೀಡಿದ್ದಾರೆ.
ಘಟನೆಯಿಂದ ನಮಗೂ, ನಮ್ಮ ಹೋಟೆಲ್‌ಗೂ ತೊಂದರೆಯಾಗಿದೆ. ಲಾಕ್‌ಡೌನ್‌ಗೂ ನಾಲ್ಕು ದಿನ ಮುಂಚೆ ಈ ಘಟನೆ ರಾತ್ರಿ 12ರ ಸುಮಾರಿಗೆ ನಡೆದಿದೆ‌. ಹೋಟೆಲ್ ಸಿಬ್ಬಂದಿಯನ್ನು ಅವರು ಬೈದಿದ್ದು ನಿಜ, ಆದರೆ ಹಲ್ಲೆಯಾಗಿಲ್ಲ‌‌‌. ಹೋಟೆಲ್ ಸಿಬ್ಬಂದಿ ಮಹಾರಾಷ್ಟ್ರ ಮೂಲದ ಟ್ರೈನಿ. ಆತ ಹಿಂದಿಯಲ್ಲಿ ಮಾತನಾಡುತ್ತಿದ್ದ. ಸರ್ವೀಸ್ ವಿಚಾರದಲ್ಲಿ ನಟ ದರ್ಶನ್ ಅವರು ಸಿಬ್ಬಂದಿಗೆ ಬೈದ ಅಷ್ಟೆ. ಅವತ್ತು ಘಟನೆ ನಡೆದ ದಿನ 20ಕ್ಕೂ ಹೆಚ್ಚು ಜನ ಇದ್ರು. ಅವತ್ತು ರಾಕೇಶ್ ಪಾಪಣ್ಣ ಇದ್ರು. ಹರ್ಷ ಮೆಲಾಂಟ, ಪವಿತ್ರಾ ಗೌಡ ಕೂಡ ಅವತ್ತು ಇದ್ದಿರಬಹುದು. ಆ ವೇಳೆ ಆತ ನನ್ನ ಹೋಟೆಲ್ ಸಿಬ್ಬಂದಿ. ಆತನಿಗೆ ಬೈಯೋದು ಬೇಡ ಅಂತಾ ದರ್ಶನ್​ಗೂ ನಾನು ಸಮಾಧಾನ ಮಾಡಿದ್ದೇನೆ‌ ಎಂದರು.
ನನ್ನ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ ನಾನು ಸುಮ್ಮನೆ ಬಿಡ್ತೀನಾ? ಯಾವ ಹಲ್ಲೆಯೂ ನಡೆದಿಲ್ಲ, ಆದ್ರೆ ಬೈದದ್ದು ನಿಜ. ಹಲ್ಲೆಯಾಗಿದ್ರೆ ನಾನೇ ಪೊಲೀಸರಿಗೆ ಕಂಪ್ಲೈಟ್ ಕೊಡ್ತಿದ್ದೆ. ಸಿಸಿಟಿವಿ ಫೂಟೇಜ್ ನಾಶ ಮಾಡುವ ಉದ್ದೇಶ ಇಲ್ಲ. ಹತ್ತು ದಿನಗಳವರೆಗೆ ಫೂಟೇಜ್ ಇರುತ್ತೆ. ಬಳಿಕ ವಿಡಿಯೋ ಆಟೋ ಡಿಲೀಟ್ ಆಗುತ್ತದೆ ಎಂದು ಸಂದೇಶ್ ನಾಗರಾಜ್​ ಹೇಳಿದರು.
ಕರೊನಾ ಲಾಕ್​ಡೌನ್​ನಿಂದಾಗಿ ಹೋಟೆಲ್​ ಉದ್ಯಮ ನಷ್ಟದಲ್ಲಿದೆ. ಗ್ರಾಹಕರೇ ನಮಗೆ ದೇವರು. ಅವರು ಹೇಳಿದ್ದನ್ನು ನಾವು ಕೊಡಬೇಕಾಗುತ್ತೆ. ದರ್ಶನ್​ದ್ದು ಮಾಮೂಲಿ. ಸ್ವಲ್ಪ ಹೆಚ್ಚು ಕಮ್ಮಿ ಆದ್ರೆ ರಾತ್ರಿ ವೇಳೆ ಕಿರುಚಾಡುತ್ತಾನೆ, ಬೈತಿರ್ತಾನೆ. ಗಲಾಟೆ ವಿಚಾರ ಹೊರಗೆ ಬಂದ್ರೆ ದರ್ಶನ್ ಇಮೇಜಿಗೆ ಧಕ್ಕೆ ಆಗ್ತಿತ್ತು. ಅಷ್ಟೇ ಅಲ್ಲ ಹೋಟೆಲ್ ಇಮೇಜಿಗೂ ಧಕ್ಕೆ ಬರುತ್ತಿತ್ತು. ಇದು ಹೋಟೆಲ್ ಸಿಬ್ಬಂದಿ ಮೇಲೆ ಪರಿಣಾಮ ಬೀರುತ್ತಿತ್ತು. ದಯವಿಟ್ಟು ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಬೇಕು ಎಂದು ಸಂದೇಶ್ ಹೇಳಿದರು.
ಅಂದು ಗಲಾಟೆ ನಡೆದಾಗ ನಾನು ನನ್ನ ಸಿಬ್ಬಂದಿಗೆ ಬೈಯ್ಯಬೇಡ ಅಂದಿದ್ದು ನಿಜ. ಅದಕ್ಕೆ ಅವನು ಕೋಪ ಮಾಡಿಕೊಂಡ. ಬೇರೆಯವರು ಆರೋಪ ಮಾಡಿದಂತೆ ದರ್ಶನ್​ ಸಿಬ್ಬಂದಿ ಮೇಲೆ ದರ್ಶನ್​ ಹಲ್ಲೆ ಮಾಡಿಲ್ಲ. ನನ್ನ ಕಡೆ 200ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ನನ್ನ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದರೆ ನಾನು ಬಿಡುತ್ತಿರಲಿಲ್ಲ. ಹಲ್ಲೆ ಮಾಡಿದ್ದಾರೆ ಎಂಬ ಆರೋಪವೇ ಸುಳ್ಳು ಎಂದರು.
ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

ಕಾರಿನಲ್ಲಿ ಕೂತು ನಟ ದರ್ಶನ್ ಮಹಿಳೆಗೆ ಕಿರುಕುಳಕೊಟ್ಟರು​: ಇಂದ್ರಜಿತ್​ ಲಂಕೇಶ್​ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
