|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿರುವ ಸಣ್ಣ ಸಣ್ಣ ಕುಶಲಕರ್ವಿುಗಳಿಗೆ ಆರ್ಥಿಕ ನೆರವು ಕಲ್ಪಿಸುವ ಮೂಲಕ ಸಂಕ್ರಾಂತಿ ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯ ಕರಕುಶಲ ನಾಡೆಂದು ಹೆಸರು ಪಡೆದಿದೆ. ರಾಜ್ಯದ ಉದ್ದಗಲಕ್ಕೂ ಸಾವಿರಾರು ಸಂಖ್ಯೆಯಲ್ಲಿ ಕುಲಶಕರ್ವಿುಗಳು ವಿವಿಧ ಕಲೆಗಳನ್ನು ಜೀವನೋಪಾಯಕ್ಕೆ ನೆಚ್ಚಿಕೊಂಡಿದ್ದಾರೆ. ಆದರೆ, ಇವರೆಲ್ಲ ಆರ್ಥಿಕ ಭದ್ರತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಶಲ
ಕರ್ವಿುಗಳಿಗೆ ದುಡಿಯುವ ಬಂಡವಾಳ ಮತ್ತು ತಮ್ಮ ಕೌಶಲದ ಚಟುವಟಿಕೆಗಳನ್ನು ಮುಂದುವರಿಸಲು ಆರ್ಥಿಕ ಉತ್ತೇಜನದ ಕೊರತೆ ಇರುವುದರಿಂದ ಬಹಳಷ್ಟು ಜನ ಕಸುಬಿನಿಂದ ಹಿಂದೆ ಸರಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕರಕುಶಲಕರ್ವಿುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕಚ್ಚಾ ಪದಾರ್ಥಗಳನ್ನು ಖರೀದಿಸುವುದು ಬಡತನದಲ್ಲಿಯೇ ಇರುವ ಕುಶಲಕರ್ವಿುಗಳಿಂದ ಸಾಧ್ಯ ವಾಗುತ್ತಿಲ್ಲ. ಹೀಗಾಗಿ ಕಲೆ ನಶಿಸಿ ಹೋಗ ಬಾರದೆಂಬ ಕಾರಣ ದಿಂದಲೇ ಸರ್ಕಾರ ಇಂತಹ ಮಹತ್ವದ ತೀರ್ವನಕ್ಕೆ ಬಂದಿದೆ. ಸಿಎಂ ಬೊಮ್ಮಾಯಿ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿಯೂ ಕುಶಲಕರ್ವಿುಗಳಿಗೆ ನೆರವು ನೀಡು ವುದನ್ನು ಪ್ರಸ್ತಾಪಿಸಿದ್ದರು. ಸಣ್ಣ ಕೈಗಾರಿಕಾ ಇಲಾಖೆ ಇದೀಗ ಯೋಜನೆ ಸಿದ್ಧಪಡಿಸಿಕೊಂಡಿದೆ.
ಸಮಸ್ಯೆಗಳು:ಕುಶಲಕರ್ವಿುಗಳು ಐದು ರೀತಿಯ ಸಮಸ್ಯೆ ಎದುರಿಸುತ್ತಿರುವುದನ್ನು ಸಣ್ಣ ಕೈಗಾರಿಕೆ ಇಲಾಖೆ ಗುರುತಿಸಿದೆ. ಅದರಲ್ಲಿ ಪ್ರಮುಖವಾಗಿ ಹಣಕಾಸಿನ ಲಭ್ಯತೆ, ದುಡಿಯುವ ಬಂಡವಾಳ, ಸಾಲಸೌಲಭ್ಯ, ಹೊಸ ವಿನ್ಯಾಸ ಹಾಗೂ ಮಾರುಕಟ್ಟೆ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡುತ್ತಿದೆ. ಕರಕುಶಲ ನಿಗಮದ ಕಾವೇರಿ ಎಂಪೋರಿಯಮ್ಲ್ಲಿ ಮಾರಾಟದ ಜತೆಗೆ ಹೆಚ್ಚು ಹೆಚ್ಚು ಮೇಳಗಳನ್ನು ನಡೆಸುವ ಮೂಲಕ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸಲಿದೆ.
ಉದ್ಯೋಗ ಸೃಷ್ಟಿ:ಬಹುತೇಕ ಕುಶಲಕರ್ವಿುಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಇವರಿಗೆ ದುಡಿಯುವ ಬಂಡವಾಳ ಹಾಗೂ ಮಾರುಕಟ್ಟೆ ಸೌಲಭ್ಯ ನೀಡಿದರೆ ಅದರಿಂದ ಪರೋಕ್ಷವಾಗಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ಆದರೆ, ಸೃಷ್ಟಿಯಾಗುವ ಉದ್ಯೋಗಗಳ ಸಂಖ್ಯೆ ಎಷ್ಟು ಎಂಬುದನ್ನು ಸದ್ಯಕ್ಕೆ ಹೇಳಲಾಗದು ಎಂದು ಮೂಲಗಳು ಅಭಿಪ್ರಾಯಪಡುತ್ತವೆ.
ವಿನಾಯ್ತಿ:ಯೋಜನೆಯ ಫಲ ಪಡೆಯುವ ಕುಶಲಕರ್ವಿುಗಳಿಗೆ ಬ್ಯಾಂಕ್​ಗಳಲ್ಲಿ ದಾಖಲಾತಿ ಶುಲ್ಕ, ಪ್ರಕ್ರಿಯೆ ಶುಲ್ಕ, ಮುಂಗಡ ಶುಲ್ಕಗಳಿಂದ ವಿನಾಯ್ತಿ ನೀಡಲಾಗುತ್ತದೆ.
ಎಷ್ಟು ನೆರವು?:ಪ್ರತಿ ಕುಶಲಕರ್ವಿುಗೆ ತಲಾ 50 ಸಾವಿರ ರೂ.ಗಳ ದುಡಿಯುವ ಬಂಡವಾಳ ನೀಡಲಿದೆ. ಅದರಲ್ಲಿ ಸರ್ಕಾರ 15 ಸಾವಿರ ರೂ.ಗಳ ಸಹಾಯಧನ ನೀಡುತ್ತದೆ. ಉಳಿದ 35 ಸಾವಿರ ರೂ.ಗಳನ್ನು ಬ್ಯಾಂಕ್​ಗಳ ಮೂಲಕ ಸಾಲ ಕೊಡಿಸಲಿದೆ. ಸಾಲ ಇದ್ದಲ್ಲಿ ಕುಶಲಕರ್ವಿುಗಳಿಗೂ ಬದ್ಧತೆ ಇರುತ್ತದೆ. ಪಡೆದ ಸಾಲಕ್ಕೆ ಉತ್ತರದಾಯಿತ್ವ ಇರುತ್ತದೆ ಎಂಬ ಕಾರಣದಿಂದಲೇ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಬ್ಯಾಂಕ್ ಪ್ರಕ್ರಿಯೆಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಫೆಬ್ರವರಿ 1ಕ್ಕೆ ಕುಶಲಕರ್ವಿುಗಳ ಕೈಯಲ್ಲಿ ದುಡಿಯುವ ಬಂಡವಾಳ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ನಿರ್ಧಾರವಾಗಿದೆ. ಅಧಿಕಾರಿಗಳಿಗೂ ಅದೇ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ.
ಕುಶಲಕರ್ವಿುಗಳ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ಅವರ ಸಮಗ್ರ ಬೆಳವಣಿಗೆಯಾಗಬೇಕು ಎಂಬುದು ಸಿಎಂ ಉದ್ದೇಶವಾಗಿದೆ. ಕುಶಲಕರ್ವಿು ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುಕೂಲಕರ ವಾತಾವರಣ ನಿರ್ವಣ, ಬೆಂಬಲಕ್ಕೆ ಪೂರಕ ವಾಗುವಂತಹ ಯೋಜನೆ ರೂಪಿಸಲಾಗಿದೆ.
|ಎಂ.ಟಿ.ಬಿ. ನಾಗರಾಜುಸಣ್ಣ ಕೈಗಾರಿಕೆ ಸಚಿವ
ಯಾರಿಗೆ ಅನುಕೂಲ?:ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯಲ್ಲಿ ನೋಂದಾಯಿಸಿ ಕೊಂಡಿರುವ 30 ಸಾವಿರ ಕುಶಲಕರ್ವಿುಗಳು ರಾಜ್ಯದಲ್ಲಿದ್ದಾರೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಲ್ಲಿ 2,500 ಜನ ನೋಂದಾಯಿಸಿ ಕೊಂಡಿದ್ದಾರೆ. ಭೌಗೋಳಿಕ ಸೂಚಕಗಳ ಗುರುತು ಹೊಂದಿರುವ ಕುಶಲಕರ್ವಿುಗಳೂ ಇದ್ದಾರೆ. ಎರಡೂ ಕಡೆ ನೋಂದಾಯಿಸಿಕೊಳ್ಳದ ಕುಶಲಕರ್ವಿುಗಳು ಎಲೆಮರೆಯ ಕಾಯಿಯಂತೆ ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
