ಬೆಂಗಳೂರು:ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಶಶಿಕಲಾ ಜೊಲ್ಲೆ ಅವರು 25 ನಿಮಿಷ ತಡವಾಗಿ ಆಗಮಿಸಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಶಾಸಕರು ಸೇರ್ಪಡೆಗೊಂಡಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಕಾರ್ಯಕ್ರಮ ಆರಂಭವಾದರೂ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಶಶಿಕಲಾ ಜೊಲ್ಲೆ ಬಂದದ್ದು ಮಾತ್ರ ತಡವಾಗಿ!
ಆರಂಭದಲ್ಲಿ ಪೂರ್ಣಿಮಾ ಶ್ರೀನಿವಾಸ್​ ಅವರಿಗೆ ಸಚಿವೆ ಸ್ಥಾನ ಸಿಗಲಿದೆ, ಜೊಲ್ಲೆಯನ್ನು ಕೈಬಿಡಲಾಗುತ್ತೆ ಎಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಜೊಲ್ಲೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ‘ನೀವು ಸಚಿವರಾಗಿ ಆಯ್ಕೆಯಾಗಿದ್ದೀರಿ’ ಎಂದು ಸಿಎಂ ಅವರಿಂದ ಇಂದು ಬೆಳಗ್ಗೆ ಮೊಬೈಲ್​ ಕರೆ ಹೋಗುತ್ತಿದ್ದಂತೆ ಜೊಲ್ಲೆ ಬೆಂಗಳೂರಿಗೆ ವಿಮಾನ ಮೂಲಕ ಆಗಮಿಸಿದರು. ಪತಿ ಅಣ್ಣಾಸಾಹೇಬ ಕೂಡ ಜೊಲ್ಲೆ ಜತೆಯಲ್ಲಿದ್ದರು. ಶಶಿಕಲಾ ಜೊಲ್ಲೆ ಆಗಮನಕ್ಕಾಗಿ ಏರ್​ಪೋರ್ಟ್​ನಿಂದ ರಾಜಭವನದವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಉನ್ನತ ಅಧಿಕಾರಿಗಳ ಆದೇಶದಂತೆ ಸಂಚಾರಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಅಂತೂ 25 ನಿಮಿಷ ತಡವಾಗಿ ಆಗಮಿಸಿದ ಜೊಲ್ಲೆ, ಪ್ರಮಾಣವಚನ ಸ್ವೀಕರಿಸಿ ಗೆಲುವಿನ ನಗೆ ಬೀರಿದರು.
ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಬೊಮ್ಮಾಯಿ ಸಂಪುಟ ಹೊಸಬರು- ಹಳಬರ ಮಿಶ್ರಣ: 29 ಸಚಿವರಿಂದ ಪ್ರಮಾಣವಚನ

ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದವರಿಗೆ ಶಾಕ್​! ಪಟ್ಟಿಯಲ್ಲಿ ವಿಜಯೇಂದ್ರ ಹೆಸರೂ ಇಲ್ಲ

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − seven =
Remember me
