ಬೆಂಗಳೂರು:ರಾಜ್ಯ ರಾಜ್ಯಧಾನಿ ಬೆಂಗಳೂರಲ್ಲಿ ಜ.29ರ ವರೆಗೂ ಶಾಲಾ-ಕಾಲೇಜು ಓಪನ್​ ಆಗಲ್ಲ. ಜ.29ರಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದು ಶಿಕ್ಷಣ ಸಚಿವ ನಾಗೇಶ್​ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರೊನಾ ಮಾರ್ಗಸೂಚಿ ಕುರಿತು ಶುಕ್ರವಾರ ನಡೆದ ಮಹತ್ವದ ಸಭೆ ಬಳಿಕ ಮಾತನಾಡಿದ ಸಚಿವರು, ಬೆಂಗಳೂರು ಹೊರತುಪಡಿಸಿ ಇತರೆಡೆ ಶಾಲೆ-ಕಾಲೇಜುಗಳು ಆರಂಭ ಆಗಲಿವೆ. ಬೆಂಗಳೂರಿನಲ್ಲಿ ಶಾಲೆ-ಕಾಲೇಜು ಓಪನ್​ ಮಾಡುವ ಕುರಿತು ಜ.29ರ ‌ಬಳಿಕ ನಿರ್ಧಾರ ಮಾಡಲಾಗುತ್ತೆ ಎಂದು ವಿವರಿಸಿದರು.
ಇನ್ಮುಂದೆ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಸೋಂಕು ಪ್ರಕರಣಗಳ ಆಧಾರದಲ್ಲಿ ತಾಲೂಕು ಅಧಿಕಾರಿಗಳ ಜತೆ ಚರ್ಚಿಸಿ ಆಯಾ‌ ಜಿಲ್ಲಾಧಿಕಾರಿಗಳು ರಜೆ ಘೋಷಣೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾಗೇಶ್​ ಹೇಳಿದರು.
ಇನ್ನು ನಾಳೆಯಿಂದಲೇ (ಜ.22) ವೀಕೆಂಡ್​ ಕರ್ಫ್ಯೂ ರದ್ದಾಗಿದ್ದು, ಎಂದಿನಂತೆ ನೈಟ್​ ಕರ್ಫ್ಯೂ ಮುಂದುವರಿಯಲಿದೆ. ಆಸ್ಪತ್ರೆಗೆ ಸೇರುವವರ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗುತ್ತೆ ಎಂದು ಅಶೋಕ್​ ಎಚ್ಚರಿಸಿದರು. ರಾತ್ರಿ ಕರ್ಫ್ಯೂ ಸೇರಿದಂತೆ ಉಳಿದ ನಿರ್ಬಂಧಗಳು ಮುಂದುವರಿಕೆ ಆಗಲಿವೆ. ಧರಣಿ, ಪ್ರತಿಭಟನೆ, ರ್ಯಾಲಿ ನಡೆಸುವಂತಿಲ್ಲ. ಇದು ಇಡೀ ಕರ್ನಾಟಕಕ್ಕೆ ಅನ್ವಯ ಎಂದರು.
ರಾಜ್ಯಾದ್ಯಂತ ನಾಳೆಯಿಂದಲೇ ವೀಕೆಂಡ್​ ಕರ್ಫ್ಯೂ ರದ್ದು! ನೈಟ್​ ಕರ್ಫ್ಯೂ ಮುಂದುವರಿಕೆ

ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 4 =
Remember me
