ಉಡುಪಿ:ಸೆಲ್ಫಿ ಗೀಳಿಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆ ಮಲ್ಪೆ ಸೇಂಟ್​ ಮೇರೀಸ್​ ದ್ವೀಪದಲ್ಲಿ ಸೋಮವಾರ ಸಂಭವಿಸಿದೆ. 10 ದಿನಗಳ ಅಂತರದಲ್ಲಿ ಒಟ್ಟು ಐವರು ಸೆಲ್ಫಿಗೆ ಬಲಿಯಾಗಿದ್ದಾರೆ.
ಹಾವೇರಿಯ ಸತೀಶ್​ ನಂದಿಹಳ್ಳಿ(21) ಮತ್ತು ಬಾಗಲಕೋಟೆಯ ಸತೀಶ್​ ಕಲ್ಯಾಣ್​ ಶೆಟ್ಟಿ (21) ಮೃತರು. ಬೆಂಗಳೂರು ಯಲಹಂಕದ ಜಿಕೆವಿಕೆ ಕೃಷಿ ವಿದ್ಯಾನಿಲಯದ 68 ವಿದ್ಯಾರ್ಥಿಗಳು ಮಲ್ಪೆ ಸೇಂಟ್​ ಮೇರಿಸ್​ಗೆ ಪ್ರವಾಸ ಬಂದಿದ್ದರು. ಇವರಲ್ಲಿ ಇಬ್ಬರು ಲೈಫ್​ ಗಾರ್ಡ್​ ಸಿಬ್ಬಂದಿಯ ಸೂಚನೆ ಮೀರಿ ಅಪಾಯಕಾರಿ ಸ್ಥಳದಲ್ಲಿ ಹಾಕಲಾದ ಕಬ್ಬಿಣದ ಪಟ್ಟಿಯನ್ನು ದಾಟಿ ಸಮುದ್ರ ತಟದಲ್ಲಿರುವ ಕಲ್ಲುಗಳ ಮೇಲೇರಿ ಮೊಬೈಲ್​ ಫೋನ್​ ಮೂಲಕ ಸೆಲ್ಫಿ ತೆಗೆಯಲು ಮುಂದಾದರು. ಈ ಸಂದರ್ಭ ಕಾಲು ಜಾರಿ ಸಮುದ್ರಕ್ಕೆ ಬಿದ್ದು, ಅಬ್ಬರದ ತೆರೆಯ ಹೊಡೆತಕ್ಕೆ ಕೊಚ್ಚಿ ಹೋದರು. \
ಜೀವರಕ್ಷಕ ತಂಡ ಸತೀಶ್​ ನಂದಿಹಳ್ಳಿ ಅವರನ್ನು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಮುಳುಗು ತಜ್ಞರ ಸತತ ಪ್ರಯತ್ನದ ಬಳಿಕ ಸತೀಶ್​ ಕಲ್ಯಾಣ್​ ಶೆಟ್ಟಿ ಮೃತದೇಹ ಸಾಯಂಕಾಲ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ದಿನಗಳ ಅಂತರದಲ್ಲಿ ಐವರು ಸಾವು!:ಮಲ್ಪೆ ಸಮುದ್ರ ತೀರಕ್ಕೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಭೌಗೋಳಿಕ ಸ್ಥಿತಿಗತಿ ಅರಿಯದೆ ಲೈಫ್​ ಗಾರ್ಡ್​ ಸಿಬ್ಬಂದಿಯ ಸೂಚನೆಯನ್ನೂ ಪಾಲಿಸದೆ ಜೀವ ಕಳೆದುಕೊಳ್ಳುತ್ತಿದ್ದಾರೆ. 10 ದಿನಗಳ ಅಂತರದಲ್ಲಿ 5 ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಏ.7ರಂದು ಕೇರಳದ ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿಗಳು ಮಲ್ಪೆ ಸೇಂಟ್​ ಮೇರಿಸ್​ ದ್ವೀಪಕ್ಕೆ ಪ್ರವಾಸಕ್ಕೆ ಬಂದು ಅಪಾಯಕಾರಿ ಪ್ರದೇಶದಲ್ಲಿ ಸೆಲ್ಫಿ ತೆಗೆಯಲು ಮುಂದಾಗಿ ಮೂವರು ನೀರುಪಾಲಾಗಿದ್ದರು. ಘಟನೆ ಮನಸ್ಸಿನಿಂದ ಮಾಸುವ ಮುನ್ನ ಮತ್ತೊಂದು ಅನಾಹುತ ಸಂಭವಿಸಿದೆ.
ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ

ಹರ್ಷನ ಹತ್ಯೆ ಪ್ರತೀಕಾರಕ್ಕೆ ಕೊಲೆ ಸಂಚು! ಆರೋಪಿಗಳ ಪಟ್ಟಿಯಲ್ಲಿದೆ ಹಿಂದು ಹರ್ಷ ಟ್ರಸ್ಟ್‌ನ ಕಾರ್ಯದರ್ಶಿ ಹೆಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
