ಬೆಂಗಳೂರು:ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ, ಹಿರಿಯ ಪತ್ರಕರ್ತ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ನಿಧನರಾದರು. ಇವರ ಅಗಲಿಕೆ ಸುದ್ದಿ ಕೇಳಿ ಕಂಬನಿ ಮಿಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ನಾಗರಬಾವಿಯಲ್ಲಿ ಗುರುಲಿಂಗ ಸ್ವಾಮಿ ಹೊಳಿಮಠ ಅವರಿಗೆ ಅಂತಿಮ ನಮನ ಸಲ್ಲಿಸಿ, ಮೃತರ ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದರು.
ಗುರುಲಿಂಗಸ್ವಾಮಿ ನನ್ನ ಯುವ ಸ್ನೇಹಿತ. ಇವರ ಅಕಾಲಿಕ ಮರಣ ದುಃಖ ತಂದಿದೆ. ನನಗೆ 20 ವರ್ಷದಿಂದ ಇವನ ಪರಿಚಯ. ರಾಮದುರ್ಗದ ಹಳ್ಳಿಯವರು. ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮದಲ್ಲಿ ಕೆಲಸ ಪಡೆದುಕೊಂಡ. ಪತ್ರಿಕಾ ದಿನದ ಆರಂಭದಿನದಿಂದ ನನಗೆ ಪರಿಚಯ. ಟಿವಿ ಮಾಧ್ಯಮದಲ್ಲೂ ಕೆಲಸ ಮಾಡಿದ್ದರು. ಅತ್ಯಂತ ಕ್ರಿಯಾಶೀಲ ಪತ್ರಕರ್ತ. ವರದಿಯ ನಿಖರತೆ ಪಡೆದುಕೊಂಡು ಮುಂದುವರಿಯುವ ಜವಾಬ್ದಾರಿಯುತ ಪತ್ರಕರ್ತ. ಅವನೊಬ್ಬನೇ ಬೆಳೆಯಲಿಲ್ಲ, ತನ್ನ ಜೊತೆ ಇತರರನ್ನೂ ಬೆಳೆಸಿದ್ದ. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ನಾನು ಗೃಹ ಸಚಿವರಾಗಿದ್ದಾಗಿನಿಂದ ನನ್ನ ಜೊತೆ ಇದ್ದ. ಪ್ರತಿ ದಿನ ಹಲವರಿಗೆ ಸಹಾಯ ಮಾಡುತ್ತಿದ್ದ. ಸಿಎಂ ಫಂಡ್ ಫೈಲಿಗೆ ಸಹಿ ಹಾಕಿಸಿ ಸಹಾಯ ಮಾಡ್ತಿದ್ದ. ನಿನ್ನೆ 8 ಗಂಟೆಗೆ ಮನೆಗೆ ಹೋಗ್ತೀನಿ ಅಂದ. ಬೆಳಗ್ಗೆ ಎದ್ದ ಬಳಿಕ ಇಂತಹ ಸುದ್ದಿ ಬರುತ್ತೆ ಅಂತ ಅನಿಸಿರಲಿಲ್ಲ. ನಾಗರಾಜ್ ಜಮಖಂಡಿ ಜೊತೆ ಜತೆಯಲ್ಲೇ ಇವನು ಹೋದ. ಪ್ರತೀ ವರ್ಷ ಜಮಖಂಡಿ ಅವರ ಕಾರ್ಯಕ್ರಮ ಇವನೇ ನಿಂತು ಮಾಡುತ್ತಿದ್ದ ಎನ್ನುತ್ತಲೇ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ, ಇವನ ಕ್ರಿಯಾಶೀಲತೆ ಇತರರಿಗೂ ಮಾದರಿಯಾಗಲಿ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು.
‘ಆತ್ಮೀಯ ಕಿರಿಯ ಮಿತ್ರ, ಕಳೆದ ಹಲವಾರು ವರ್ಷಗಳಿಂದ ನನ್ನ ಜೊತೆ ಒಡನಾಟ ಹೊಂದಿ, ನನ್ನ ಮಾಧ್ಯಮ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಗುರುಲಿಂಗಸ್ವಾಮಿ ಹೊಳಿಮಠ ಅವರು ಇಂದು ಅಕಾಲಿಕ ನಿಧನರಾದ ವಿಷಯ ತಿಳಿದು ತೀವ್ರ ಆಘಾತ ಹಾಗೂ ದುಃಖಿತನಾಗಿದ್ದೇನೆ. ಒಬ್ಬ ದಕ್ಷ ಹಾಗೂ ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಲವು ಸಾಧನೆಗೈದು ಇನ್ನೂ ಹೆಚ್ಚಿನದನ್ನು ಸಾಧಿಸಲು ಹಂಬಲ ಹೊಂದಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ’ ಎಂದು ಟ್ವೀಟ್​ ಮೂಲಕವೂ ಸಿಎಂ ಸಂತಾಪ ಸೂಚಿಸಿದ್ದಾರೆ.
ಇಂದು ನಿಧನರಾದ ನನ್ನ ಮಾಧ್ಯಮ ಸಂಯೋಜಕರಾದ ಶ್ರೀ ಗುರುಲಿಂಗಸ್ವಾಮಿ ಹೊಳಿಮಠ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನಗಳನ್ನು ಸಲ್ಲಿಸಿ ಕುಟಂಬದ ಸದಸ್ಯರಿಗೆ ಸಾಂತ್ವನ ತಿಳಿಸಲಾಯಿತು.pic.twitter.com/P40Yxr5BBq
— Basavaraj S Bommai (@BSBommai)August 22, 2022

ಗುರುಲಿಂಗಸ್ವಾಮಿ ಹೊಳಿಮಠ ಅವರ ಅಂತಿಮ ದರ್ಶನ ಪಡೆಯಲು ಸಿಎಂ ಜತೆ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ತೋಟಗಾರಿಕಾ ಸಚಿವ ಮುನಿರತ್ನ ಇತರರು ಆಗಮಿಸಿದ್ದರು. ಮಾಧ್ಯಮ ಕ್ಷೇತ್ರದ ಹಿರಿಯರು, ಕಿರಿಯ ಸಹೋದ್ಯೋಗಿಗಳೂ ಗುರುಲಿಂಗಸ್ವಾಮಿ ಹೊಳಿಮಠ ಅವರ ನಿಧನದ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಗುರುಲಿಂಗಸ್ವಾಮಿ ಅವರ ಅಂತ್ಯಕ್ರಿಯೆ ನಾಳೆ(ಮಂಗಳವಾರ) ಬೆಳಗ್ಗೆ 10 ಗಂಟೆಗೆ ಬೆಳಗಾವಿ ಜಿಲ್ಲೆಯ ರಾಮದರ್ಗ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.
ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ನಿಧನ

ಬೆಳಗಾವಿಯಲ್ಲಿ ಆಪರೇಷನ್ ಚಿರತೆ ಮತ್ತೆ ವಿಫಲ: ಕಣ್ಣೆದುರೇ ಹೋದರೂ ಬಲೆಗೆ ಬೀಳದ ಚಿರತೆ…

ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್! ಉತ್ತರ ಕನ್ನಡದಲ್ಲಿ ವಿಚಿತ್ರ ಪ್ರಕರಣ ಬೇಧಿಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
