ಚಿಕ್ಕಬಳ್ಳಾಪುರ:ಮೈಸೂರಿನ ಶಕ್ತಿಧಾಮದ 150 ಮಕ್ಕಳು ನಂದಿಬೆಟ್ಟಕ್ಕೆ ಪ್ರವಾಸ ಬಂದಿದ್ದು, ಮಕ್ಕಳೊಂದಿಗೆ ನಟ ಶಿವರಾಜ್​ಕುಮಾರ್​ ದಂಪತಿ ಕೆಲ ಸಮಯ ಕಳೆದರು.
ನಂದಿ ಬೆಟ್ಟ ನೋಡಬೇಕೆಂದು ಶಕ್ತಿಧಾಮದ ಮಕ್ಕಳಿ ಆಸೆ ವ್ಯಕ್ತಪಡಿಸಿದ ಹಿನ್ನೆಲೆ ಗುರುವಾರ ಅವರನ್ನು ಇಲ್ಲಿಗೆ ಕರೆತರಲಾಯಿತು. ನಂದಿ ಬೆಟ್ಟದ ಪ್ರಾಕೃತಿಕ ಸೊಬಗು ಕಂಡು ಬೆರಗಾದ ಮಕ್ಕಳು ಖುಷಿಯಿಂದಲೇ ಹೆಜ್ಜೆ ಇಟ್ಟರು. ನಂದಿಯ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದರು. ದೇವರ ದರ್ಶನದ ನಂತರ ಮಕ್ಕಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ತಿಂಡಿ ತಿನ್ನುವ ವೇಳೆ ಗೀತಾ ಶಿವರಾಜ್​ಕುಮಾರ್​ ಮಕ್ಕಳು ಸಿಹಿ ತಿನ್ನಿಸಿ ಸಂತಸ ಪಟ್ಟರು. ಅಪ್ಪು ಅಭಿನಯದ ‘ರಾಜಕುಮಾರ’ ಸಿನಿಮಾದ ಹಾಡು ಹಾಡುತ್ತಾ ಮಕ್ಕಳು ಹೆಜ್ಜೆ ಇಡುತ್ತಿದ್ದ ದೃಶ್ಯ ನೋಡುಗರನ್ನ ಭಾವುಕರನ್ನಾಗಿಸಿತು.

ತಂದೆ-ತಾಯಿ ಸ್ಥಾಪಿಸಿದ ತಾಯಿಬೇರಿನ ಸಂಸ್ಥೆಯಾದ ಶಕ್ತಿಧಾಮದ ಮಕ್ಕಳೊಂದಿಗೆ ಕಾಲ ಕಳೆಯುವ ಸಂತೋಷ ವಿಭಿನ್ನ. ಪುನೀತ್ ಇಲ್ಲದ ನೋವು ಯಾವುತ್ತೂ ಹೋಗಲ್ಲ. ಅದರಲ್ಲೇ ನಾವೇ ಬದುಕುಬೇಕು. ಅಪ್ಪುನಾ ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ನಮ್ಮ ತಂದೆ-ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆ ಶಕ್ತಿಧಾಮ. ಸಾಕಷ್ಟು ಟ್ರಸ್ಟಿಗಳು ಸೇರಿ ಆರಂಭ ಮಾಡಿದ ಸಂಸ್ಥೆ. ಶಕ್ತಿಧಾಮ ಸಂಸ್ಥೆಯಲ್ಲಿ 150 ಮಕ್ಕಳಿದ್ದಾರೆ. ಈ ವರ್ಷ 200 ಮಕ್ಕಳು ಆಗಲಿದ್ದಾರೆ. ಅವರಿಗೆ ಊಟ, ವಸತಿ, ಶಾಲೆ ಎಲ್ಲ ಜವಾಬ್ದಾರಿ ನಮ್ಮದು. ಪ್ರವಾಸಿತಾಣಗಳ ಬಗ್ಗೆ ಮಾಹಿತಿ ಇರಲಿ ಅಂತ ಪ್ರವಾಸ ಕೈಗೊಂಡಿದ್ದೇವೆ ಎಂದು ಶಿವರಾಜ್​ಕುಮಾರ್​ ಹೇಳಿದರು.
ಪುನೀತ್​ ರಾಜ್​ಕುಮಾರ್​ ಮನೆಗೆ ನಟ ಅಲ್ಲು ಅರ್ಜುನ್ ಭೇಟಿ ಹಿನ್ನೆಲೆ ನಂದಿಗ್ರಾಮದಿಂದ ಬೆಂಗಳೂರಿಗೆ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಿದರು.
ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಬಿದ್ದ ಕಾರು! ಗಂಡನ ಕಣ್ಣೆದುರಲ್ಲೇ ಪತ್ನಿ ದುರ್ಮರಣ, ಬೆಚ್ಚಿಬಿದ್ದ ಸ್ಥಳೀಯರು

ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
