ಹುಬ್ಬಳ್ಳಿ:ಶೆಟ್ಟರ್ ಸಾಹೇಬ್ರ ಸಿಬಿಟಿ ಖಾಲಿ ಐತ್ರಿ. ಕೋವಿಡ್ ಕೇರ್ ಸೆಂಟರ್ ಮಾಡ್ರಿಪಾ…
ಸಾರ್ವಜನಿಕರಿಂದ ಹೀಗೊಂದು ಭಿನ್ನಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಗರದಲ್ಲಿ 4 ಅಂತಸ್ತಿನ ಸಿಬಿಟಿ ಕಟ್ಟಡವನ್ನು ನಿರ್ವಿುಸಲಾಗಿದೆ. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.
ಈಗೀಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯ 7 ಸರ್ಕಾರಿ ಹಾಗೂ 30 ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಕಾಡಲಾರಂಭಿಸಿದೆ. ಇಂತಹ ದೊಡ್ಡ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡುವುದರಿಂದ ರೋಗಿಗಳ ಆರೈಕೆ ಸುಗಮವಾಗಿ ನಡೆಯಲಿದೆ. ಅಲ್ಲದೆ ಕಟ್ಟಡವೂ ಬಳಕೆಯಾಗಲಿದೆ. ಇಲ್ಲವಾದರೆ, ಇದ್ದ ಕಟ್ಟಡವೂ ನಿರ್ವಹಣೆ ಕೊರತೆಯಿಂದ ಮತ್ತಷ್ಟು ಹಾಳಾಗಲಿದೆ ಎಂಬುದು ಸಾರ್ವಜನಿಕರ ಆಕ್ರೋಶ.
ಬೆಡ್​ಗಳಿಲ್ಲದೆ ಜನರು ಬೀದಿಗೆ ಬೀಳುವ ಮುನ್ನ ಸಚಿವ ಜಗದೀಶ ಶೆಟ್ಟರ್ ಅವರು ಎಚ್ಚೆತ್ತುಕೊಳ್ಳಬೇಕು. ಇಂತಹ ಕಟ್ಟಡ ಬಳಕೆಗೆ ಶೀಘ್ರವೇ ಆದೇಶ ಮಾಡಬೇಕು. ಇಲ್ಲವಾದರೆ ನಿಮ್ಮ ಆಡಳಿತ ದುರಾವಸ್ಥೆಗೆ ಹಿಡಿದ ಕೈಗನ್ನಡಿಯಾಗಲಿದೆ ಎಂದು ಸಾರ್ವಜನಿಕರು ಸಿಟ್ಟು ಹೊರಹಾಕಿದ್ದಾರೆ.
VIDEO| ಕಾರಿನ ಮುಂದೆ ‘ಕೋವಿಡ್ ಡ್ಯೂಟಿ’ ಬೋರ್ಡ್​, ಒಳಗೆ ಇದ್ದದ್ದು ಮಾತ್ರ ಅರ್ಚಕರು!

ಅಪ್ಪ-ಅಮ್ಮ ಕೋವಿಡ್​ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ

ಲಾಕ್​ಡೌನ್ ಇದ್ರೂ ಕಾಲೇಜು ಓಪನ್! ಒಳಗೆ ಲೆಕ್ಚರರ್​ನ ಬಿಟ್ಟು ಗೇಟ್​ ಮುಂದೆ ನಿಂತ ಪ್ರಿನ್ಸಿಪಾಲ್​

ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
