ಶಿವಮೊಗ್ಗ:ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣ ಮಾಸುವ ಮುನ್ನವೇ ಕೊಂಚಮಟ್ಟಿಗೆ ತಣ್ಣಗಾಗಿದ್ದ ಕೋಮುದೊಳ್ಳುರಿ ಶಿವಮೊಗ್ಗದಲ್ಲಿ ಮತ್ತೆ ಶುರುವಾಗುವ ಲಕ್ಷಣ ಗೋಚರಿಸಿದೆ. ಸೋಮವಾರ ತಡರಾತ್ರಿ ರಾಜೀವ್‌ಗಾಂಧಿ ಬಡಾವಣೆಯಲ್ಲಿ ಬಜರಂಗ ದಳದ ಸಹ ಸಂಚಾಲಕ, ಬಿಜೆಪಿ ಬೂತ್ ಅಧ್ಯಕ್ಷ ಕಾಂತರಾಜ್(27) ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅದೃಷ್ಟವಶಾತ್ ದುಷ್ಕರ್ಮಿಗಳ ಕೈಯಲ್ಲಿದ್ದ ಮಚ್ಚು ಕಿತ್ತುಕೊಂಡ ಕಾಂತರಾಜ್, ಹಲ್ಲೆಕೋರರಿಂದ ತಪ್ಪಿಸಿಕೊಂಡಿದ್ದಾರೆ.
ರಾತ್ರಿ 10.20ರ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಬಂದ ಕಾಂತರಾಜ್ ಮೇಲೆ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹಳೇ ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ದಾಳಿ ವೇಳೆ ಎರಡೂ ಕೈಗಳು ಸೇರಿ ದೇಹದ ಹಲವೆಡೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕೋಟೆ ಠಾಣೆ ಪೊಲೀಸರು ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆಯಾದರೂ ಮಾಹಿತಿ ಸ್ಪಷ್ಟವಾಗಿಲ್ಲ.
ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂತರಾಜ್, ರಾತ್ರಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ನಾಲ್ಕೈದು ಮಂದಿ ನನ್ನ ಮೇಲೆ ದಾಳಿ ಮಾಡಿದರು. ನನ್ನನ್ನು ಕೆಳಕ್ಕೆ ಬೀಳಿಸಿ ಹಲ್ಲೆ ಮಾಡಿದರು. ಅಷ್ಟರಲ್ಲಿ ಅವರ ಕೈಯಲ್ಲಿದ್ದ ಮಚ್ಚನ್ನು ಕಸಿದುಕೊಂಡು ಮನೆಗೆ ಓಡಿ ಬಂದೆ. ಫೋನ್ ಮಾಡಿ ಹುಡುಗರನ್ನು ಕರೆಸಿಕೊಂಡೆ. ಅಷ್ಟೊತ್ತಿಗೆ ಅವರೆಲ್ಲಾ ತಪ್ಪಿಸಿಕೊಂಡು ಹೋದರು. ಹರ್ಷನ ಅಂತಿಮಯಾತ್ರೆ ವೇಳೆ ಮೆರವಣಿಗೆಯಲ್ಲಿದ್ದೆ. ಈತನೂ ಇದ್ದಾನಲ್ಲ ಎಂಬ ಹಳೇ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆ ಎಂದರು.
ಏನಿದು ಘಟನೆ?:ಕಳೆದ ಫೆ.20ರಂದು ಭಾರತಿ ಕಾಲನಿಯಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷನ ಬರ್ಬರ ಹತ್ಯೆಯಾಗಿತ್ತು. ಮರುದಿನ ಶಿವಮೊಗ್ಗದಲ್ಲಿ ಶವಯಾತ್ರೆ ವೇಳೆ ಸೀಗೆಹಟ್ಟಿ, ಗಾಂಧಿಬಜಾರ್ ಸೇರಿ ಹಲವೆಡೆ ಕಲ್ಲು ತೂರಾಟವಾಗಿತ್ತು. ಅದೇ ರಾಜೀವ್‌ಗಾಂಧಿ ಬಡಾವಣೆಯಲ್ಲೂ ಗಲಭೆಯಾಗಿತ್ತು. ಈ ವೇಳೆ ಸ್ಥಳೀಯನಾಗಿದ್ದ ಕಾಂತರಾಜ್ ಕೂಡ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದ. ಅದೇ ದ್ವೇಷದಿಂದ ಸೋಮವಾರ ರಾತ್ರಿ ಮನೆಯಿಂದ ಹೊರಬಂದ ಕಾಂತರಾಜ್ ಮೇಲೆ ಅನ್ಯಧರ್ಮದ ನಾಲ್ಕೈದು ಮಂದಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ

ಬಾಲಕಿಗೆ ವೈದ್ಯನಿಂದ ಲೈಂಗಿಕ ಕಿರುಕುಳ: ಬೇರೊಬ್ಬಳ ಜತೆ ಮದ್ವೆಯಾದರೂ ಹಿಂಸಿಸುತ್ತಿದ್ದವನ ಬಂಧನ

ಕಾರು ಹೊಳೆಗೆ ಬಿದ್ದ ಪ್ರಕರಣ: ನಾಪತ್ತೆಯಾಗಿದ್ದ ಯುವಕರಿಬ್ಬರು ಶವವಾಗಿ 3 ದಿನದ ಬಳಿಕ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 12 =
Remember me
