ಹುಬ್ಬಳ್ಳಿ:ಭೌತಿಕ ಸುಖ, ವೈಭೋಗಗಳಿಗೆ ವಿದಾಯ ಹೇಳಿ ಲೋಕ ಕಲ್ಯಾಣಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳಲು ಮುಂದಾಗಿರುವ ಶಿವಮೊಗ್ಗ ಮೂಲದ 14 ವರ್ಷದ ಬಾಲಕಿ ಸಿದ್ದಿ ವಿನಾಯಕಿಯಾ ಏ. 21ರಂದು ನಗರದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಶ್ರೀಜೈನ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾರೆ.
ಶಿವಮೊಗ್ಗದ ಶಾಂತಿಲಾಲ ಹಾಗೂ ಸಂತೋಷದೇವಿ ಅವರ ಪುತ್ರಿ ಸಿದ್ದಿ ವಿನಾಯಕಿಯಾ ಈಗಾಗಲೇ ತಮ್ಮ ಪರಿವಾರದಲ್ಲಿ ದೀಕ್ಷೆ ಪಡೆದಿರುವ ಅತ್ತೆ ಧರ್ಮಶೀಲಾಜಿ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ. “ಮನೆಗೆ ಬರುತ್ತಿದ್ದ ಸಾಧು-ಸಂತರನ್ನು ನೋಡಿ ಅವರಂತೆ ಆಗಬೇಕೆಂದು ಅಂದುಕೊಳ್ಳುತ್ತಿದ್ದೆ. ಜಗದ ಮೋಹ ತ್ಯಾಗ ಮಾಡಿ ಧಾರ್ಮಿಕ ಸೆಳೆತಕ್ಕೆ ಒಳಗಾಗಿರುವೆ. ಇಲ್ಲಿ ವಯಸ್ಸು ಮಹತ್ವದ್ದಾಗುವುದಿಲ್ಲ” ಎಂದು ವಿನಾಯಕಿಯಾ ತಿಳಿಸಿದರು.
ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿ ಜೈನ ಭಗವತಿ ದೀಕ್ಷಾ ಸಮಾರಂಭ ಆಯೋಜಿಸಲಾಗಿದೆ. ರಾಷ್ಟ್ರ ಸಂತ ಶ್ರೀ ನರೇಶ ಮುನಿಜಿ, ಶ್ರೀ ಶಾಲಿಭದ್ರ ಮುನಿಜಿ, ದಕ್ಷಿಣ ದೀಪಿಕಾ, ಗುರುಣಿ ಮೈಯ್ಯಾ, ಶ್ರೀ ಸತ್ಯಪ್ರಭಾಜಿ, ಮಹಾಸತಿ ಸಾಧ್ವಿಶ್ರೀ, ಮಹಾಸತಿ ದರ್ಶನಪ್ರಭಾಜಿ ಹಾಗೂ ವಿವಿಧ ಸಾಧು ಸಂತರ ದಿವ್ಯ ಸಾನ್ನಿಧ್ಯದಲ್ಲಿ ಬಾಲಕಿಯು ದೀಕ್ಷೆ ಸ್ವೀಕರಿಸುವಳು. ಇಮೇಲ್​, ಇಂಟರ್​ನೆಟ್​, ವಾಟ್ಸ್​ಆ್ಯಪ್​ ಇತ್ಯಾದಿ ಆಧುನಿಕ ತಂತ್ರಜ್ಞಾನಗಳನ್ನು ಬದಿಗಿಟ್ಟು ಶ್ವೇತವರ್ಣದ ವಸ್ತ್ರಧಾರಣೆ ಮಾಡಿ ಸತ್ಯ, ಅಹಿಂಸಾ, ಮಾನವೀಯ ಏಕತೆ, ತ್ಯಾಗ, ಬಾಳು ಬಾಳಲು ಬಿಡು ಎಂಬ ದಿವ್ಯ ಸಂದೇಶವನ್ನು ವಿಶ್ವಕ್ಕೆ ಸಾರುವ ಕಾರ್ಯದಲ್ಲಿ ತೊಡಗುವಳು ಎಂದು ದೀಕ್ಷಾ ಸಮಿತಿ ಅಧ್ಯಕ್ಷ ಮಹೇಂದ್ರ ಸಿಂಘಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ

ಕೆಜಿಎಫ್-2 ಸಿನಿಮಾ ನೋಡುವಾಗ ಥಿಯೇಟರ್​ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್​

ತಮಕೂರಲ್ಲಿ ಟಿ.ಬಿ. ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಗೆ ಮಾಜಿ ಸಚಿವ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
