ಶಿವಮೊಗ್ಗ:ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ಆರೋಪಿ ಖಾಸಿಫ್​ಗೆ ಇದೆ ಕರಾಳ ಹಿತಿಹಾಸ. ಈತನ ಇಡೀ ಕುಟುಂಬವೇ ಕ್ರಿಮಿನಲ್ ಹಿನ್ನೆಲೆಯುಳ್ಳದ್ದಾಗಿದ್ದು, ಖಾಸಿಫ್​ನ ಸಹೋದರ ಸದ್ಯ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದಾನೆ.
ಖಾಸಿಫ್​ನ ಹೆಸರು ಕೂಡ ಕಳ್ಳತನ, ದೊಂಬಿ ಕೇಸ್​ಗಳಲ್ಲಿದೆ. ಲಾರಿ ಕ್ಲೀನರ್ ಆಗಿದ್ದ ಖಾಸಿಫ್, ಲಾರಿ ಕ್ಲೀನರ್ ಕೆಲಸಕ್ಕಿಂತಲೂ ಕಳ್ಳತನ- ದೊಂಬಿಯಲ್ಲಿ ಗುರುತಿಸಿಕೊಂಡಿದ್ದೇ ಹೆಚ್ಚು. ಈತನ ವಿರುದ್ಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ.
ಖಾಸಿಫ್​ನ ಮೂಲ ಸೀಗೆಹಟ್ಟಿ ಪಕ್ಕದ ಏರಿಯಾ ಇಮಾಮ್ ಬಾಡ. ಹಿಂದುಪರ ಸಂಘಟನೆಗಳ ನೇತೃತ್ವ ವಹಿಸುತ್ತಿದ್ದ ಹರ್ಷ, ಹಿಂದುಗಳ ಪರವಾಗಿ ನಿಲ್ಲುತ್ತಿದ್ದ. ಅತ್ತ ಖಾಸಿಫ್, ಮುಸ್ಲಿಮರ ಪರವಾಗಿ ನಿರಂತರವಾಗಿ ಗಲಾಟೆ ನಡೆಸುತ್ತಿದ್ದ. ಇದೇ ಕಾರಣಕ್ಕೆ ಹರ್ಷ‌ ಮತ್ತು ಖಾಸಿಫ್ ನಡುವೆ ವೈರತ್ವ ಬೆಳೆದಿತ್ತು ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಹಿಜಾಬ್ ವಿವಾದದ ವೇಳೆ‌ ಹರ್ಷ ಕೇಸರಿ ಶಾಲು ಹಂಚಿದ್ದಾನೆ ಎಂದು ಖಾಸಿಫ್ ಕೆರಳಿದ್ದ. ಜತೆಗೆ ಈ ಹಿಂದೆ ಹರ್ಷ ತನ್ನ ಫೇಸ್​ಬುಕ್ ಪೇಜ್​ನಲ್ಲಿ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದರಿಂದ ಹಲವರು ಕೆರಳಿದ್ದರು‌ ಎಂಬುದು ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿ.
ಇಷ್ಟೆಲ್ಲಾ ಘಟನೆಗಳಿಂದ ರೊಚ್ಚಿಗೆದ್ದ ಖಾಸಿಫ್, ಹರ್ಷನ ಕೊಲೆಗೆ ಪ್ಲಾನ್ ರೂಪಿಸಿದ್ದನೇ ಅಥವಾ ಸುಫಾರಿ ಪಡೆದು ಕೊಲೆ ಮಾಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತಿದ್ದಾರೆ. ಇನ್ನು ಹರ್ಷನ ಕೊಲೆ ಪ್ರಕರಣದಲ್ಲಿ ಖಾಸಿಫ್ ಜತೆ ಭಾಗಿಯಾದವರೆಲ್ಲರೂ ಕ್ರಮಿನಲ್ ಹಿನ್ನೆಲೆಯುಳ್ಳವರು ಎನ್ನಲಾಗಿದ್ದು, ಎಲ್ಲರೂ ಖಾಸಿಫ್​ನ ಸಹಚರರು ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.(ದಿಗ್ವಿಜಯ ನ್ಯೂಸ್​, ಶಿವಮೊಗ್ಗ)
‘ಶಿವಮೊಗ್ಗದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋದ… ಹುಡುಗಿ ಜತೆ ಹೋದ… ಕೇಸ್ ಇಲ್ಲ’

ಹರ್ಷನ ಕುರಿತು ಮನದನೋವು ಬಿಚ್ಚಿಟ್ಟ ಅಕ್ಕ-ಅಪ್ಪ, 3ನೇ ದಿನದ ಕಾರ್ಯದಲ್ಲೂ ಮುಗಿಲುಮುಟ್ಟಿದೆ ಆಕ್ರಂದನ

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಮೇಲೂ ದಾಖಲಾಗಿತ್ತು 4 ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − sixteen =
Remember me
