ಶಿವಮೊಗ್ಗ:ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ರೂಪಿಸಿದ್ದ ಕೊಲೆ ಸಂಚು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಗಳ ಪಟ್ಟಿಯಲ್ಲಿ ಹಿಂದು ಹರ್ಷ ಟ್ರಸ್ಟ್‌ನ ಕಾರ್ಯದರ್ಶಿ ಹೆಸರೂ ಸೇರಿದೆ.
ಹತ್ಯೆ ಯತ್ನ ವಿಫಲಗೊಳಿಸಿರುವ ದೊಡ್ಡಪೇಟೆ ಠಾಣೆ ಪೊಲೀಸರು, 13 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಆರು ಮಂದಿಯನ್ನು ಬಂಧಿಸಿದ್ದಾರೆ. 7 ಮಂದಿ ತಲೆಮರೆಸಿಕೊಂಡಿದ್ದಾರೆ. ಅದರಲ್ಲಿ ಹಿಂದು ಹರ್ಷ ಟ್ರಸ್ಟ್‌ನ ಕಾರ್ಯದರ್ಶಿ ಸಚಿನ್ ರಾಯ್ಕರ್ ಕೂಡ ಸೇರಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗೊಂಡಿದೆ. ಸಚಿನ್ ರಾಯ್ಕರ್ ಈ ಪ್ರಕರಣದಲ್ಲಿ 9ನೇ ಆರೋಪಿಯಾಗಿದ್ದಾನೆ.
ಫೆ.20ರಂದು ರಾತ್ರಿ ಹರ್ಷ ಕೊಲೆಯಾಗಿದ್ದು, ಮರುದಿನ ಅಂದರೆ ಫೆ.21ರ ಬೆಳಗ್ಗೆ 11.30ರ ವೇಳೆಗೆ ಸೀಗೆಹಟ್ಟಿ ಸಮೀಪದ ಲಾಲ್ ಬಂದ್ ವಾಡಿಯ ಮುಸ್ಲಿಂ ಯುವಕನ ಕೊಲೆಗೆ 13 ಮಂದಿ ಸಂಚು ರೂಪಿಸಿ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕಿ ಅಲಿಯಾಸ್ ಕುಳ್ಳ ರಾಕಿಯನ್ನು ಬಂಧಿಸಿದ್ದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ 12 ಜನರ ಹೆಸರನ್ನು ಬಾಯ್ಬಿಟ್ಟಿದ್ದ ಎನ್ನಲಾಗಿದೆ.
ಬಂಕ್ ಬಾಲು ಪ್ರಕರಣದಲ್ಲಿ ಪ್ರವೀಣ್‌ಗೆ ಜಾಮೀನು:ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಪ್ರವೀಣ್ ಅಲಿಯಾಸ್ ಕುಲ್ಡಾ ಇತ್ತಿಚೇಗಷ್ಟೆ ಶಿವಮೊಗ್ಗ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದ. ಹೆಬ್ಬೆಟ್ ಮಂಜನ ಗ್ಯಾಂಗ್‌ನಲ್ಲಿ ಗುರುತಿಸಿಕೊಡಿದ್ದ, ಈತನನ್ನು ಕೂಡ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹರ್ಷನ ಕೊಲೆಗೆ ಖಾಸಿಫ್ ಮತ್ತು ಅವರ ಟೀಂ ವ್ಯವಸ್ಥಿತವಾಗಿ ಸಂಚು ರೂಪಿಸಿದ ಮಾದರಿಯಲ್ಲೇ ಇವರು ಗ್ಯಾಂಗ್ ಕಟ್ಟಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಈ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಲು 30 ಸಾವಿರ ರೂ. ಕೊಟ್ಟು ಹಳೆಯ ಕಾರನ್ನು ಖರೀದಿಸಿತ್ತು ಎಂಬುದು ವಿಚಾರಣೆ ವೇಳೆ ಬಯಲಾಗಿದೆ.
ಯಾರೆಲ್ಲ ಆರೋಪಿಗಳು?:ರಾಕಿ ಎ-1 ಆರೋಪಿಯಾಗಿದ್ದು, ವಿಶ್ವಾಸ್ ಅಲಿಯಾಸ್ ಜೆಟ್ಲಿ, ನಿತಿನ್ ಅಲಿಯಾಸ್ ವಾಸನೆ, ಯಶವಂತ್ ಅಲಿಯಾಸ್ ಬೆಂಗಳೂರು, ಕಾರ್ತಿಕ್ ಅಲಿಯಾಸ್ ಕಟ್ಟೆ, ಅಕಾಶ್ ಅಲಿಯಾಸ್ ಕೋತಿ, ಪ್ರವೀಣ್ ಅಲಿಯಾಸ್ ಕುಲ್ಡಾ, ಸುಹಾಸ್ ಅಲಿಯಾಸ್ ಅಪ್ಪು, ಸಚಿನ್ ರಾಯ್ಕರ್, ಸಂಕೇತ್ ಅಲಿಯಾಸ್ ದಿಟ್ಟಾ, ರಘು ಅಲಿಯಾಸ್ ಬೊಂಡಾ, ಮಂಜು, ವಿಶಾಲ್ ಅಲಿಯಾಸ್ ಕುಟ್ಟಾ.
ನಾನು ಶಾಸಕ, ಸಚಿವ, ಡಿಸಿಎಂ ಆಗಿದ್ದೀನಿ… ಆದ್ರೆ ನನ್ನನ್ನು ಈಗಲೂ ದೇವಸ್ಥಾನಕ್ಕೆ ಸೇರಿಸಲ್ಲ: ಡಾ.ಪರಮೇಶ್ವರ್

ಗುತ್ತಿಗೆದಾರನ​ ಸಾವಿಗೂ ಮುನ್ನ ಲಾಡ್ಜ್​ಗೆ ಬಂದಿದ್ದನೇ ರಾಜೇಶ್​? ಯಾರೀತ? ಈ ಕೇಸ್​ಗೆ ಮತ್ತೊಂದು ತಿರುವು

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
