ಶಿವಮೊಗ್ಗ:ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದ ತನಿಖೆ ಪೊಲೀಸರಿಗೆ ತಲೆನೋವಾಗಿದ್ದರೆ ರಾಜಕೀಯ ಪಕ್ಷಗಳಿಗೆ ರಾಜಕಾರಣಕ್ಕೆ ಒಂದು ಟೀಕೆ ಮಾಡಲು ಅಸ್ತ್ರ ಸಿಕ್ಕಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಹರ್ಷನ ಸಹೋದರಿ ಅಶ್ವಿನಿಗೆ ಬಿಜೆಪಿ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷದಿಂದ ಕ್ಯಾಂಡಿಡೇಟ್ ಹಾಕುವುದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಕೆಣಕಿದ್ದರೆ, ಹಿಂಬಾಗಿಲ ರಾಜಕಾರಣ ಬಿಟ್ಟು, ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸಿ ಹರಿಪ್ರಸಾದ್ ಗೆದ್ದುಬರಲಿ. ಆ ನಂತರ ಸವಾಲು ಹಾಕಲಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ಈಶ್ವರಪ್ಪನವರೇ ಕ್ಷೇತ್ರ ಬಿಟ್ಟುಕೊಡುತ್ತೀರಾ?: ಹರ್ಷನ ಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕೆಣಕಿರುವ ಹರಿಪ್ರಸಾದ್, ಹರ್ಷನ ಹತ್ಯೆಗೆ ನ್ಯಾಯ ಕೊಡಿಸಲು ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಹರ್ಷನ ಕುಟುಂಬದ ಸದಸ್ಯರಿಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯನ್ನೇ ಹಾಕುವುದಿಲ್ಲ. ಹರ್ಷನ ಸಹೋದರಿಯನ್ನು ಕಣಕ್ಕೆ ಇಳಿಸಿದರೆ ಅವಿರೋಧವಾಗಿ ಆಯ್ಕೆ ಮಾಡಲು ಕಾಂಗ್ರೆಸ್ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.
ಜಸ್ಟೀಸ್ ಫಾರ್ ಹರ್ಷ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದ್ದು, ಹಿಂದು ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ವಾದ ಬಲವಾಗುತ್ತಿದೆ. ಈ ವಾದಕ್ಕೆ ಬೆಂಬಲ ಎನ್ನುವಂತೆ ಈಶ್ವರಪ್ಪ ಅವರನ್ನು ಕೆಣಕಿರುವ ಹರಿಪ್ರಸಾದ್, ಸಾಂತ್ವನ-ನೆರವಿನ ಬದಲು ಹರ್ಷನ ಸಹೋದರಿಗೆ ಈಶ್ವರಪ್ಪ ಕ್ಷೇತ್ರ ಬಿಟ್ಟುಕೊಡುತ್ತಾರಾ? ಒಂದು ವೇಳೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯನ್ನೇ ಹಾಕುವುದಿಲ್ಲ. ಹರ್ಷನ ಕುಟುಂಬಕ್ಕೆ ಸಾಕಷ್ಟು ಬೆಂಬಲ ನೀಡಿರುವ ಈಶ್ವರಪ್ಪ ಅವರು, ಹಿಂದುತ್ವಕ್ಕೆ ಪ್ರಾಣ ಬಿಟ್ಟಿರುವ ಕುಟುಂಬಕ್ಕೆ ಕ್ಷೇತ್ರ ತ್ಯಾಗ ಮಾಡಲಿ. ಇದು ಕಾಂಗ್ರೆಸ್​ ಪಕ್ಷದ ಸವಾಲ್ ಎಂದಿದ್ದಾರೆ.
ಕೊಲೆಯಾಗೋದಕ್ಕೆ, ಜೈಲಿಗೆ ಹೋಗೋದಕ್ಕೆ ಹಿಂದು ಕಾರ್ಯಕರ್ತರು ಬೇಕು. ಟಿಕೆಟ್ ಮಾತ್ರ ನಾಯಕರಿಗೆ ಬೇಕು. ಮೃತನ ಕುಟುಂಬಕ್ಕೆ ಬಿಜೆಪಿ ಮುಖಂಡರು ಆರ್ಥಿಕ ನೆರವು ಘೋಷಣೆ ಮಾಡುತ್ತಿದ್ದಾರೆ. ಅದು ಬೇರೆ ಪ್ರಶ್ನೆ. ಕ್ಷೇತ್ರ ಬಿಟ್ಟು ಕೊಡುತ್ತಾರಾ? ಎಂದು ಹರಿಪ್ರಸಾದ್ ಕುಟುಕಿದ್ದಾರೆ.
ಜನರಿಂದ ಆಯ್ಕೆಯಾಗಿ ಬಂದು ಸವಾಲು ಹಾಕಿ:ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೆಣಕಿರುವ ಬಿ.ಕೆ. ಹರಿಪ್ರಸಾದ್‌ಗೆ ಬಿಜೆಪಿ ತಿರುಗೇಟು ನೀಡಿದ್ದು, ಹಿಂಬಾಗಿಲ ರಾಜಕಾರಣ ಬಿಟ್ಟು ಮೊದಲು ಜನರಿಂದ ಆಯ್ಕೆಯಾಗಿ ಬಂದು ನಂತರ ಸವಾಲು ಹಾಕಿ ಎಂದು ಹೇಳಿದೆ. ಜನರಿಂದ ಆಯ್ಕೆಯಾಗಿ ಬರುವ ಸಾಮರ್ಥ್ಯ ಇಲ್ಲದ ನೀವು ಹಿಂಬಾಗಿಲಿನಿಂದ ಅಧಿಕಾರ ಹಿಡಿಯುತ್ತಿದ್ದೀರಿ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ ಹಿಂದುತ್ವದ ಸಿದ್ಧಾಂತಕ್ಕೆ ಜಯ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್‌ನಿಂದ ನಕಲಿ ಗಾಂಧಿ ಕುಟುಂಬದವರು ಬಂದು ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿದರೂ ಸೋಲು ಖಚಿತ ಎಂದು ಹೇಳಿದೆ.
ಬರಲಿರುವ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮತ್ತೆ ಕಾಂಗ್ರೆಸ್ ಸೋಲುವುದು ಖಚಿತವಾಗಿರುವುದರಿಂದ ಹರ್ಷನ ಕುಟುಂಬಕ್ಕೆ ಕ್ಷೇತ್ರ ಬಿಟ್ಟುಕೊಡುತ್ತೀರಾ? ಎಂಬ ಸವಾಲು ಹಾಕಿದ್ದೀರಿ. ಹರ್ಷನ ಕುಟುಂಬದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗೆಲ್ಲಿದೆ? ದೇಶದ ಮೂಲೆ ಮೂಲೆಯಿಂದ ಹಿಂದುಗಳು ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳುವುದಷ್ಟೇ ಅಲ್ಲ. ಧನಸಹಾಯ ಮಾಡುತ್ತಿದ್ದಾರೆ. ಮೊದಲು ಹರ್ಷನ ಕುಟುಂಬ ಹಾಗೂ ಹಿಂದುಗಳು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಕುಟುಕಿದ್ದಾರೆ.
ಹರಿಪ್ರಸಾದ್ ಅವರೇ ನಿಮಗೆ ಶಿವಮೊಗ್ಗದ ಹಿಂದುಗಳ ಇತಿಹಾಸ ಗೊತ್ತಿಲ್ಲ. ಹಿಂದುಗಳು ಮಚ್ಚು ಹಿಡಿಯುವುದನ್ನು ಬಿಟ್ಟ ಮೇಲೆ ಬೇರೆಯವರು ಚಿಗುರಿದ್ದಾರೆ. ಹರ್ಷನ ಸಾವಿನ ದಿನದಿಂದ ಇಂದಿನವರೆಗೆ ಅವರ ಕುಟುಂಬದ ಹೆಗಲಿಗೆ ಹೆಗಲು ಕೊಟ್ಟದ್ದು ಹಿಂದು ಸಮಾಜ, ಸಂಘಟನೆ ಕಾರ್ಯಕರ್ತರು ಹಾಗೂ ಈಶ್ವರಪ್ಪ ಅವರ ಕುಟುಂಬ.ಹರ್ಷ ಸಾವಿಗೀಡಾದ ಐದಾರು ದಿನಗಳ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಕೆಲ ಮುಖಂಡರು ಸಾಂತ್ವನ ಹೇಳಲು ಬರುತ್ತಾರೆ. ನಿಮ್ಮ ಪಕ್ಷದ ಮಾಜಿ ಶಾಸಕರಿಗೆ ಹಿಂದುಗಳು ಬೇಡವೇ? ಹಿಂದುಗಳ ಸಾವಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದೆ.
ಸಾವಿನಲ್ಲೂ ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಿಸಿ. ಹರ್ಷನ ಹತ್ಯೆ ಅಧಿಕಾರದ ವಿಚಾರದಲ್ಲಿ ಆಗಿದ್ದಲ್ಲ , ಹಿಂದುತ್ವ ಪ್ರತಿಪಾದನೆ ಮಾಡಿದ್ದಕ್ಕಾಗಿ ಆತನನ್ನು ಹತ್ಯೆ ಮಾಡಲಾಗಿದೆ. ಸಾಂತ್ವನ ಹೇಳಲು ಯೋಗ್ಯದ ಇಲ್ಲದ ನಿಮಗೆ ಹರ್ಷನ ಕುಟುಂಬದ ಬಗ್ಗೆ ಮಾತನಾಡವ ಹಕ್ಕಿಲ್ಲ. ಸಾವಿನಲ್ಲಿ ರಾಜಕೀಯ ಮಾಡುವ ನೀವು ಮೊದಲು ಜನರಿಂದ ಆಯ್ಕೆಯಾಗಿ ಬಂದು ನಂತರ ಸವಾಲು ಹಾಕಿ ಎಂದು ತಿರುಗೇಟು ನೀಡಿದೆ.
ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ: ಪೊಲೀಸ್​ ಪೇದೆ ಸಾವು

ಟೂತ್​ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು! ದಕ್ಷಿಣ ಕನ್ನಡ ಜಿಲ್ಲೇಲಿ ದುರಂತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + eighteen =
Remember me
