ಶಿವಮೊಗ್ಗ:ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಮಾಡಿದವರಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿ ಸೋಮವಾರ ಹಿಂದು ಕಾರ್ಯಕರ್ತರು ಜಿಲ್ಲಾಧಿಕಾರಿ‌ ಕಚೇರಿ ಎದುರು ಹೆಜ್ಜೇನು ದಾಳಿ ನಡುವೆಯೂ ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದ ದಳದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ‌ ಸಭೆ ಆಯೋಜಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಹೆಜ್ಜೇನು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿತು. ಆದರೂ ಬೆದರದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿ ತಾವು ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದರು.
ಹೆಜ್ಜೇನು ದಾಳಿಯಿಂದ ಹತ್ತಾರು ಹಿಂದು ಕಾರ್ಯಕರ್ತರು, ವಿದ್ಯಾರ್ಥಿಗಳು, ಪತ್ರಕರ್ತರೂ ಗಾಯಗೊಂಡರು. ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿ(ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು) ಪ್ರತಿಭಟನೆ ಮುಂದುವರಿಸಿದರು. ವಿಎಚ್​ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ ಮಾತನಾಡಿ, ಹರ್ಷದ ಹತ್ಯೆ ಪ್ರಕರಣದಲ್ಲಿ ಪಾತ್ರಧಾರಿಗಳ ಬಂಧನವಾಗಿದೆ. ಸೂತ್ರಧಾರಿಗಳನ್ನೂ ಬಂಧಿಸಿ ಗಲ್ಲಿಗೇರಿಸಬೇಕು ಆಗ್ರಹಿಸಿದರು.
ಆರ್​ಎಸ್​ಎಸ್ ಮುಖಂಡ ಮಧುಕರ್ ಮಾತನಾಡಿ, ಇನ್ಮುಂದೆ ಒಬ್ಬೇ ಒಬ್ಬ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೂ ಸಹಿಸುವುದಿಲ್ಲ.‌ ಇದು ಇಲ್ಲಿಗೆ ಕೊನೇ ಆಗಬೇಕು. ಇಲ್ಲದವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಲವ್​ ಮಾಡಿದ್ದೇ ತಪ್ಪಾ? ಚಿತ್ರಹಿಂಸೆ ಕೊಡ್ತಿದ್ದಾರೆ.. ಪ್ಲೀಸ್​ ನಮ್ಮನ್ನು ಕಾಪಾಡಿ.. ಬೆಂಗಳೂರಲ್ಲಿ ಸಚಿವರ ಪುತ್ರಿ ಕಣ್ಣೀರು

ಬಾಳೆಹಣ್ಣು ಕೊಟ್ಟ ಆಟೋ ಡ್ರೈವರ್​ನ​ ಬೆನ್ನೇರಿದ ಕೋತಿ! ಎಲ್ಲೇ ಹೋದ್ರೂ ಬಿಡ್ತಿಲ್ಲ… ಮನೆಗೇ ಬರುತ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
