ಶಿವಮೊಗ್ಗ:ಅಜ್ಜಿ ಮನೆಗೆ ಬಂದಾಗ ಅವಳ ಪರಿಚಯ ಆಯ್ತು, ಸ್ನೇಹ ಬೆಳೆಸಿದ, ಅವಳ ಹೃದಯಕ್ಕೆ ಹತ್ತಿರವಾದ. ನಂತರ ನೀನೇ ನನ್ನ ಬಾಳ ಬಂಗಾರ ಎಂದು ದಾವಣಗೆರೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಅವಳ ಕೈ ಹಿಡಿದ. ಸ್ವಲ್ಪ ದಿನ ಬಿಟ್ಟು ನಿನ್ನನ್ನು ಬೆಂಗಳೂರಿನ ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೋದ. ಆದರೀಗ ವರಸೆ ಬದಲಿಸಿದ್ದಾನೆ… ಗಂಡನ ಕಾಟ ಸಹಿಸಲಾಗದೆ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.
ಏನಿದು ಪ್ರಕರಣ?ದಾವಣಗೆರೆ ತಾಲೂಕು ಕಾರಿಗನೂರು ಗ್ರಾಮದ ಚೇತನ್ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದು, ಭದ್ರಾವತಿ ತಾಲೂಕಿನ ಸೀತಾರಾಮಪುರಕ್ಕೆ ಅಜ್ಜಿ ಮನೆಗೆ ಬಂದಾಗ ಅಂಜು ಪರಿಚಯ ಆಗಿತ್ತು. ಸಿನಿಮಾ ಕತೆಯಂತೆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿತ್ತು. 2020ರಲ್ಲಿ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲೇ ಸಪ್ತಪದಿ ತುಳಿದು ನೋಂದಣಿ ಮಾಡಿಸಿಕೊಂಡಿದ್ದರು. ಈ ವಿಷಯವನ್ನು ಚೇತನ್ ತನ್ನ ಪಾಲಕರಿಂದ ಮುಚ್ಚಿಟ್ಟಿದ್ದ.
ಲವ್ ಮಾಡಿ ಗುಟ್ಟಾಗಿ ಮದುವೆಯಾದ ಚೇತನ್, ಬೆಂಗಳೂರಿಗೆ ಹೋಗಿ ಸ್ವಲ್ಪ ದಿನದ ಬಳಿಕ ಕರೆಸಿಕೊಳ್ಳುವುದಾಗಿ ಹೇಳಿದ್ದ. ಬೆಣ್ಣೆಯಂತ ಚೇತನ್ ಮಾತಿಗೆ ಅಂಜು ಕರಗಿ ಹೋಗಿದ್ದಳು. ಇನ್ನೇನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಪ್ರೀತಿಸಿ ಕೈ ಹಿಡಿದ ಚೇತನ್‌ನೊಂದಿಗೆ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಚಾತಕಪಕ್ಷಿಯಂತೆ ಅಂಜು ಕಾಯುತ್ತಿದ್ದಳು. ಆದರೀಗ ತನ್ನೊಂದಿಗೆ ಕರೆದೊಯ್ಯಲು ಚಿನ್ನ ಬೇಕೇಂದು ಬೇಡಿಕೆ ಇಟ್ಟಿದ್ದಾನೆ!
ಪದೇಪದೆ ಫೋನ್ ಕರೆ:ಮದುವೆ ಮುಂಚೆ ನೀನೇ ನನ್ನ ಚಿನ್ನ ಎನ್ನುತ್ತಿದ್ದ ಚೇತನ್, ಈಗ ಅಂಜುಗೆ ಪದೇಪದೆ ಫೋನ್ ಮಾಡಿ ಚಿನ್ನ ಮತ್ತು ದುಡ್ಡು ತೆಗೆದುಕೊಂಡು ಬಾ ಎಂದು ಬೆದರಿಕೆ ಹಾಕುತ್ತಿದ್ದಾನಂತೆ. ಮಗ ಗುಟ್ಟಾಗಿ ಕೈ ಹಿಡಿದವಳನ್ನು ಅಧಿಕೃತವಾಗಿ ಸೊಸೆ ಎಂದು ಒಪ್ಪಿಕೊಳ್ಳಲು ಆತನ ಪಾಲಕರೂ 2 ಲಕ್ಷ ನಗದು, 100 ಗ್ರಾಂ ಬಂಗಾರ ಕೊಟ್ಟರೆ ಮಾತ್ರ ನಿಮ್ಮ ಮಗಳು ನಮ್ಮ ಮನೆಯ ಸೊಸೆಯಾಗಿ ಇರ್ತಾಳೆ ಎಂದು ಯುವತಿ ಪಾಲಕರಿಗೆ ತಾಕೀತು ಮಾಡಿದ್ದಾರೆ. ನನ್ನ ಬಾಳಿಗೆ ನೀನೇ ಬಂಗಾರ ಎಂದು ಕೈ ಹಿಡಿದವಳನ್ನು ಈಗ 100 ಗ್ರಾಂ ಬಂಗಾರ ಜತೆ ಬಂದ್ರಷ್ಟೇ ಮನೆಗೆ ಸೇರಿಸಿಕೊಳ್ಳೋದಾಗಿ ಸೂಚಿಸಿದ್ದಾರೆ. ನ್ಯಾಯಕ್ಕಾಗಿ ಅಂಜು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮೈಸೂರಲ್ಲಿ 7 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು: ಪ್ರೀತಿಸಿ ಮದ್ವೆಯಾದವಳ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

ಆನೇಕಲ್​ನಲ್ಲಿ ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಜನ! ಮಲಗಿದ್ದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ, ಬಳಿಕ ತನ್ನ ಕತ್ತನ್ನೂ ಕೊಯ್ದುಕೊಂಡ…

ಪೇದೆ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್: ಇಬ್ಬರು ಪತ್ರಕರ್ತರು, ASI ವಿರುದ್ಧ ಎಫ್​ಐಆರ್​! ಡೆತ್​ನೋಟಲ್ಲಿದೆ ಸ್ಫೋಟಕ ರಹಸ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − four =
Remember me
