ಸಾಗರ:ಶಿವಮೊಗ್ಗದ ಸಾಗರ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಶರ್ಮದಾ(36) ಸೋಮವಾರ ರಾತ್ರಿ ಗಣಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಿಎಚ್​ಒ ಕಚೇರಿಯಲ್ಲಿ ಬಾಲಸ್ವಾಸ್ಥ್ಯ ಯೋಜನೆಯಡಿ ಡಾ. ಶರ್ಮದಾ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆಯೂ ಕೆಲಸಕ್ಕೆ ಹಾಜರ್​ ಆಗಿದ್ದರು. 12-14 ವರ್ಷದ ಮಕ್ಕಳಿಗೆ ಕರೊನಾ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲು ಸಾಗರ, ಬಂದಗದ್ದೆ ಶಾಲೆಗಳಿಗೆ ಭೇಟಿ ನೀಡಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದಿದ್ದ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಸಾಗರದ ಗಣಪತಿ ಕೆರೆ ಸಮೀಪ ಕ್ಲಿನಿಕ್ ಹೊಂದಿದ್ದ ಅವರು ಸಂಜೆ ಕ್ಲಿನಿಕ್ ತೆರೆದಿದ್ದರು. ಒಬ್ಬ ಮಗ ತಂದೆಯ ಬಳಿ ಮನೆಯಲ್ಲಿದ್ದು, ಮೂರು ವರ್ಷದ ಮಗನನ್ನು ಪಕ್ಕದ ಮನೆಯಲ್ಲಿ ಆಟವಾಡಲು ಬಿಟ್ಟು ಬಂದಿದ್ದರು. ರಾತ್ರಿ ಸ್ಕೂಟಿಯಲ್ಲಿ ಗಣಪತಿ ಕೆರೆ ಹತ್ತಿರ ಬಂದು ಚಪ್ಪಲಿಯನ್ನು ದಂಡೆ ಮೇಲೆ ಬಿಟ್ಟು ನೀರಿಗೆ ಹಾರಿದ್ದಾರೆ.
ರಾತ್ರಿ ತುಂಬ ಹೊತ್ತಾದರೂ ಪತ್ನಿ ಮನೆಗೆ ಬಾರದಿದ್ದರಿಂದ ಪತಿ ಸುನೀಲ್ ಹುಡುಕಲು ಆರಂಭಿಸಿದ್ದಾರೆ. ಎಲ್ಲಿಯೂ ಕಾಣಿಸದಿದ್ದಾಗ ತಾಲೂಕು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹುಡುಕಾಟ ಆರಂಭಿಸಿದಾಗ ವೈದ್ಯೆಯ ಸ್ಕೂಟಿ ಗಣಪತಿ ಕೆರೆ ಪಕ್ಕ ಪತ್ತೆಯಾಗಿದೆ. ಕೆರೆಯಲ್ಲಿ ಗಮನಿಸಿದಾಗ ಶವ ತೇಲುತ್ತಿರುವುದು ಕಂಡುಬಂದಿದೆ.
ಡಾ. ಶರ್ಮದಾ ಮೂಲತಃ ಶಿವಮೊಗ್ಗದ ಶರಾವತಿ ನಗರದವರು. ತಂದೆ ಬೋಜರಾಜ್ ಸಾರಿಗೆ ಕಂಪನಿ ನಡೆಸುತ್ತಿದ್ದಾರೆ. ಡಾ. ಶರ್ಮದಾ 10 ವರ್ಷಗಳಿಂದ ಗುತ್ತಿಗೆ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹೊನ್ನಾಳಿಯ ಸುನೀಲ್ ಅವರನ್ನು ಮದುವೆಯಾಗಿ 10 ವರ್ಷ ಆಗಿದೆ. ಸುನೀಲ್ ಅವರು ಭೀಮನಕೋಣೆ ಗ್ರಾಪಂ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಯುರ್ವೇದಿಕ್ ತಜ್ಞರಾಗಿದ್ದ ಡಾ. ಶರ್ಮದಾ ಅವರು ಕರೊನಾ ಸಂದರ್ಭ ಅತ್ಯುತ್ತಮವಾಗಿ ಕರೊನಾ ಕೇರ್ ಸೆಂಟರ್ ನಿರ್ವಹಣೆ ಮಾಡಿದ್ದರಿಂದ ಸನ್ಮಾನಕ್ಕೆ ಪಾತ್ರರಾಗಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಕರೊನಾ ಲಸಿಕಾ ಅಭಿಯಾನದಲ್ಲಿ ಡಾ. ಶರ್ಮದಾ ಅವರು ಉತ್ತಮ ಕೆಲಸ ಮಾಡಿದ್ದರು. ಸೋಮವಾರ ಬೆಳಗ್ಗೆ ಕೆಲಸದ ಕುರಿತು, ವ್ಯಾಕ್ಸಿನ್ ನೀಡುವ ಸಂಬಂಧ ಶಾಲೆಗಳಿಗೆ ಭೇಟಿ ಬಗ್ಗೆ ಚರ್ಚಿಸಿದ್ದಾರೆ. ಅವರಿಗೆ 5 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದು, ಇಂತಹ ನಿರ್ಧಾರ ತೆಗೆದುಕೊಂಡಿದ್ದು ಬೇಸರ ತರಿಸಿದೆ.| ಮೋಹನ್ ಕೆ.ಎಸ್.ಸಾಗರ ತಾಲೂಕು ವೈದ್ಯಾಧಿಕಾರಿ
ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು! ಅಯ್ಯೋ, ಸ್ವಲ್ಪ ಅರ್ಡ್ಜೆಸ್ಟ್​ ಮಾಡ್ಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ತಾಯಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eighteen =
Remember me
