ಶಿವಮೊಗ್ಗ:ಸಾವು ಹೇಗೆ? ಯಾವ ರೂಪದಲ್ಲಿ ಬರುತ್ತೆ? ಎಂದು ಊಹಿಸಲೂ ಕಷ್ಟ. ಅನಾರೋಗ್ಯಕ್ಕೀಡಾದ ತಾಯಿಯನ್ನ ನೋಡಲೆಂದು ಪತ್ನಿ ಜತೆ ಕಾರಿನಲ್ಲಿ ಹೊರಟವನಿಗೆ ಮಾರ್ಗಮಧ್ಯೆಯೇ ಹಾವಿನ ರೂಪದಲ್ಲಿ ಎದುರಾದ ಜವರಾಯ, ಪತ್ನಿಯ ಪ್ರಾಣ ಹೊತ್ತೊಯ್ದಿದ್ದಾನೆ.
ಇಂತಹ ಭಯಾನಕ ಘಟನೆ ಶಿವಮೊಗ್ಗದ ಗಾಜನೂರು ಬಳಿ ಇಂದು(ಗುರುವಾರ) ಬೆಳಗಿನ ಜಾವ ಸಂಭವಿಸಿದೆ. ಶಿವಮೊಗ್ಗದ ಚೇತನ್ ಕುಮಾರ್ ಪತ್ನಿ ಸುಷ್ಮಾ(28) ಮೃತ ದುರ್ದೈವಿ. ತಾಯಿಯ ಆನಾರೋಗ್ಯದ ವಿಚಾರ ತಿಳಿದು ತಡರಾತ್ರಿಯೇ ತುಮಕೂರಿಗೆ ಕಾರಿನಲ್ಲಿ ಪತ್ನಿ ಜತೆ ಚೇತನ್ ಹೊರಟ್ಟಿದ್ದರು. ಗಾಜನೂರು ಬಳಿ ತುಂಗಾ ಎಡದಂಡೆ ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆ ಕಾರಿಗೆ ಹಾವು ಅಡ್ಡ ಬಂದಿದೆ. ಕೂಡಲೇ ಹಾವಿನ ಮೇಲೆ ಕಾರು ಹರಿಯುವುದನ್ನ ತಡೆಯಲು ಏಕಾಏಕಿ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿದೆ.
ಕಾರಿನೊಳಗೆ ನೀರು ತುಂಬಿದ್ದರಿಂದ ಸುಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬದುಕುಳಿದ ಚೇತನ್ ಕುಮಾರ್, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸಹಾಯಕ್ಕೆ ಕೂಗುವ ಧ್ವನಿ ಕೇಳಿದರೂ ಭಯದಿಂದ ಸ್ಥಳೀಯರು ಮನೆಯಿಂದ ಆಚೆ ಬಂದಿಲ್ಲ. ಶಬ್ಧದ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ನಾಲೆಯಲ್ಲಿ ಕಾರು ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರು ಮತ್ತು ಸ್ಥಳೀಯರಿಂದ ಚೇತನ್​ ಅವರನ್ನ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 13 =
Remember me
