ಶಿವಮೊಗ್ಗ:ಏ.11 ರಂದು ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ, ಸೊರಬ ತಾಲೂಕಿನ ಮನ್ಮನೆ ಗ್ರಾಮದ ಲೇಖಪ್ಪರಿಗಾಗಿ ಶೋಧ ನಡೆಸಿದ ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಯಲಾಗಿದೆ. ಓರ್ವ ಮಹಿಳೆ ವಿಚಾರಕ್ಕೆ ತನ್ನ ರಾಜಕೀಯ ವೈರಿಯಿಂದಲೇ ಕೊಲೆಯಾಗಿದ್ದಾರೆ!
ಏ.11ರಂದು ಲೇಖಪ್ಪ ಜಮೀನು ಕೆಲಸಕ್ಕೆಂದು ತೆರಳಿದವರು ಮನೆಗೆ ಮರಳಿ ಬಂದಿರಲಿಲ್ಲ. ಏ.14ರಂದು ಕುಟುಂಬಸ್ಥರು ನಾಪತ್ತೆ ಕೇಸ್​ ದಾಖಲಿಸಿದ್ದರು. ಪೊಲೀಸರು ಕೂಡ ನಾಪತ್ತೆ ಪ್ರಕರಣ ಎಂದೇ ಭಾವಿಸಿದ್ದರು. ಆದರೆ, ಮೇ 2 ರಂದು ಲೇಖಪ್ಪರ ಸಹೋದರ ಕೊಟ್ಟ ಸುಳಿವು ಈ ಪ್ರಕರಣಕ್ಕೆ ಸ್ಪೋಟಕ ತಿರುವು ಕೊಟ್ಟಿದೆ.
ಲೇಖಪ್ಪರ ಸಹೋದರ ಕೊಟ್ಟ ಸುಳಿವು ಆಧರಿಸಿ ಶಂಕಿತ ಆರೋಪಿ ಕೃಷ್ಣಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಲೇಖಪ್ಪ ಬದುಕಿಲ್ಲ ಎಂಬ ರಹಸ್ಯ ಬಯಲಾಗಿದೆ. ಲೇಖಪ್ಪ ಮತ್ತು ಕೃಷ್ಣಪ್ಪ ನಡುವೆ ರಾಜಕೀಯ ವೈಷಮ್ಯ ಇತ್ತು. ಈ ದ್ವೇಷ ಇನ್ನಷ್ಟು ತಾರಕಕ್ಕೇರಲು ಅದೇ ಗ್ರಾಮದ ಮಹಿಳೆ ವಿಚಾರವೂ ಕಾರಣವಾಯ್ತು. ಆಕೆ ಜೊತೆ ಕೃಷ್ಣಪ್ಪ ಅತ್ಯಂತ ಸಲುಗೆಯಿಂದ ವರ್ತಿಸುತ್ತಿದ್ದ. ಅದೇ ಮಹಿಳೆ ಜೊತೆ ಲೇಖಪ್ಪನೂ ಆತ್ಮೀಯವಾಗತೊಡಗಿದ. ಇದು ಕೃಷ್ಣಪ್ಪನ ಕಣ್ಣನ್ನು ಕೆಂಪಾಗಿಸಿತ್ತು.
ಕೊಲೆಗೆ ಸಂಚು ರೂಪಿಸಿದ ಕೃಷ್ಣಪ್ಪ, ನಿನಗೆ ಮದುವೆಯಾಗಲು ಹುಡುಗಿ ತೋರಿಸುತ್ತೇನೆ ಬಾ ಎಂದು ಲೇಖಪ್ಪನನ್ನು ನಂಬಿಸಿ ಏ.11ರಂದು ತನ್ನ ಮನೆಗೆ ಕರೆಸಿಕೊಂಡಿದ್ದ. ಟವಲ್‌ನಿಂದ ಲೇಖಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಅದೇ ದಿನ ಸಂಜೆ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಬೈಕ್ ಮೇಲೆ ಇಟ್ಟುಕೊಂಡು ಸೊರಬ ತಾಲೂಕಿನ ಕಡಸೂರು ಗ್ರಾಮದ ಹೊಳೆಗೆ ಎಸೆದಿದ್ದ.
ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು.. ಎಲ್ಲವನ್ನೂ ಟಿವಿಯಲ್ಲಿ ನೋಡಿದೆ… ಮಗನ ಮಾತಿಗೆ ಕಣ್ಣೀರಿಟ್ಟ ದಿವ್ಯಾ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + fourteen =
Remember me
