ರಿಪ್ಪನ್‌ಪೇಟೆ(ಶಿವಮೊಗ್ಗ):ಮಹಿಳೆಯೊಬ್ಬರ ಮೊಬೈಲ್​ಗೆ ಅಪರಿಚಿತ ನಂಬರ್​ಗಳಿಂದ ಅಶ್ಲೀಲ ವಿಡಿಯೋಗಳು ಬಂದಿದೆ. ಅಷ್ಟೇ ಅಲ್ಲ ಆ ದಿನ ನಿರಂತರವಾಗಿ ಕರೆ ಮಾಡಿದ ಅಪರಿಚಿತರು ಅಸಭ್ಯವಾಗಿ ಮಾತಾಡಿ ಕಿರುಕುಳ ಕೊಟ್ಟಿದ್ದಾರೆ. ನೊಂದ ಮಹಿಳೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಅಪರಿಚಿತ ಮೊಬೈಲ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ತಲೆಬಿಸಿಯಾಗಿದೆ!
ತನಿಖೆ ನಡೆಸಿದ ಪೊಲೀಸರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾದ ನಂಬರ್‌ಗಳನ್ನು ಪತ್ತೆ ಮಾಡಿದಾಗ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಗೊತ್ತಾಗಿದೆ.
ರಿಪ್ಪನ್​ಪೇಟೆ ಪಟ್ಟಣದ ಗವಟೂರು ಬಡಾವಣೆ ಮಹಿಳೆಯ ಮೊಬೈಲ್​ಗೆ ಮೇ 10ರಂದು ಎರಡು ಅಪರಿಚಿತ ಮೊಬೈಲ್​ ನಂಬರ್‌ನಿಂದ ಅಶ್ಲೀಲ ವಿಡಿಯೋಗಳು ಕಳುಹಿಸಿದ ದುಷ್ಕರ್ಮಿಗಳು, ನಿರಂತರವಾಗಿ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾದ ನಂಬರ್‌ ಜಾಡು ಹಿಡಿದು ಹೊರಟಾಗ ಅವು ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಗೊತ್ತಾಗಿದೆ.
ಮೂಲ ಶೋಧ ಮಾಡಿ ಅಲ್ಲಿಗೆ ತೆರಳಿದರೆ ಈ ಎರಡೂ ಮೊಬೈಲ್​ ನಂಬರನ್ನು ಆ ವಿಳಾಸದಲ್ಲಿರುವ ವ್ಯಕ್ತಿಗಳು ಉಪಯೋಗಿಸುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಕಿಡಿಗೇಡಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ.
ದಕ್ಷಿಣ ಕನ್ನಡದಲ್ಲಿ ಕಟ್ಟಡವೊಂದರ ಮೇಲಿಂದ ಸುರಿಯಿತು ಹಣದ ಮಳೆ! ನೋಟುಗಳನ್ನ ಆಯ್ದುಕೊಳ್ಳಲು ಮುಗಿಬಿದ್ದ ಜನ

ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಮರಕ್ಕೆ ಡುಕಾಟಿ ಬೈಕ್ ಡಿಕ್ಕಿ: ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ-ಗೆಳತಿ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
