ಮಂಗಳೂರು:ಮಂಗಳೂರಿನಿಂದ 43 ನಾಟಿಕಲ್‌ ಮೈಲಿ ದೂರದಲ್ಲಿ ಮಂಗಳವಾರ ಉಂಟಾದ ಅವಘಡದಲ್ಲಿ ನೀರುಪಾಲಾದ 14 ಮೀನುಗಾರರ ಶೋಧ ಕಾರ್ಯ ಮುಂದುವರಿದಿದ್ದು, ಭಾರತೀಯ ನೌಕಾಪಡೆಯೂ ಕಾರ್ಯಾಚರಣೆ ನಡೆಸುತ್ತಿದೆ.
ಭಾರತೀಯ ಕೋಸ್ಟ್‌ ಗಾರ್ಡ್‌ ಕೂಡ ಆಳ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಡೈವರ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಮಂಗಳವಾರ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೇರಳದ ಬೇಪೂರ್‌ನ ಜಾಫರ್​ಗೆ ಸೇರಿದ್ದ ರಭಾ ಎನ್ನುವ ಮೀನುಗಾರಿಕಾ ದೋಣಿಯು ಸಿಂಗಪುರ ಮೂಲದ ‘ಎಂವಿ ಎಪಿಎಲ್‌ ಲೆ ಹಾವ್ರೆʼಎನ್ನುವ ಬೃಹತ್‌ ಕಂಟೈನರ್‌ ಸಾಗಾಟ ನೌಕೆಗೆ ಡಿಕ್ಕಿಯಾಗಿತ್ತು. ಇದರಿಂದ ಹಾನಿಗೊಂಡ ಬೋಟ್‌ ಮುಳುಗತೊಡಗಿದ್ದು, ತಕ್ಷಣವೇ ಕಂಟೈನರ್‌ ಹಡಗಿನ ಕ್ಯಾಪ್ಟನ್‌ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು. ದೋಣಿಯಲ್ಲಿ ಒಟ್ಟು 14 ಮೀನುಗಾರರಿದ್ದರು.ಇದನ್ನೂ ಓದಿರಿಶಾಸಕ ಯು.ಟಿ.ಖಾದರ್ ಕಾರು ದಾವಣಗೆರೆಯಲ್ಲಿ ಅಪಘಾತ
ಕೋಸ್ಟ್‌ಗಾರ್ಡ್‌ ಮಂಗಳೂರು ಹೆಡ್‌ ಕ್ವಾರ್ಟರ್ಸ್‌ನಿಂದ ರಕ್ಷಣಾ ಕಾರ್ಯ ಹಮ್ಮಿಕೊಳ್ಳಲಾಯಿತು. ಪ.ಬಂಗಾಳದ ಸುನಿಲ್‌ ದಾಸ್(‌34) ಹಾಗೂ ತಮಿಳುನಾಡಿನ ವೇಲುಮುರುಗನ್(37) ಎಂಬವರನ್ನು ರಕ್ಷಿಸಲಾಯಿತು. 12 ಜನರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿವೆ. 9 ಮೀನುಗಾರರು ಪತ್ತೆಯಾಗಿಲ್ಲ.
ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

ಪ್ರೀತಿ ಬಲೆಗೆ ಬಿದ್ದ ರೂಪದರ್ಶಿ ಮೇಲೆ 16 ಬಾರಿ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಪ್ರಿಯಕರನ ಮತ್ತೊಂದು ಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
