ಬೆಂಗಳೂರು:ಜೆಡಿಎಸ್​ ನಾಯಕರ ಜೊತೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೇ ಮತ ಹಾಕುತ್ತೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಮತದಾನಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಶಿವಲಿಂಗೇಗೌಡ, ನನ್ನ ಮುಂದಿನ ನಡೆ ಮೂರು ಬಾರಿ ವಿಧಾನಸಭೆಗೆ ಆಯ್ಜೆ ಮಾಡಿ ಕಳುಹಿಸಿದ ಅರಸೀಕೆರೆ ಕ್ಷೇತ್ರದ ಮತದಾರರ ನಿರ್ಧಾರಕ್ಕೆ ಬಿಟ್ಟದ್ದು. ಕ್ಷೇತ್ರದ ಜನರು ಏನು ನಿರ್ಧಾರ ತೆಗೆದುಕೊಂಡು ಹೇಳುತ್ತಾರೋ ಹಾಗೆಯೇ ಮುಂದುವರಿಯುವೆ. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಜೆಡಿಎಸ್​ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಅವರಿಗೇ ಮತ ಹಾಕುವೆ. ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕುವಂತೆ ಸಿದ್ದರಾಮಯ್ಯ ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿ.ಟಿ.ದೇವೇಗೌಡರು ಕೂಡ ಜೆಡಿಎಸ್​ಗೆ ಮತ ಹಾಕುವುದಾಗಿ ನಿನ್ನೆಯೇ ಘೋಷಿಸಿದ್ದರು. ಆದರೆ ಕೋಲಾರದ ಶಾಸಕ ಶ್ರೀನಿವಾಸ್​ಗೌಡ ಅಡ್ಡ ಮತದಾನ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊನೆಗೂ ತನ್ನ ನಿಲುವು ಪ್ರಕಟಿಸಿದ ಜಿಟಿಡಿ: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವೆ!

ಎಚ್​.ಡಿ.ರೇವಣ್ಣ ಮತ ಅಸಿಂಧು? ಮತದಾನದ ವೇಳೆ ಎಡವಿದ್ರಾ ಜೆಡಿಎಸ್​ ನಾಯಕ?

ರಾಜ್ಯಸಭೆ ಚುನಾವಣೆ: ನಿರ್ಮಲಾಗೆ ಗೆಲುವು, ಕಾಂಗ್ರೆಸ್ ಮನವೊಲಿಕೆ ವಿಫಲ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:20 + 7 =
Remember me
