ಬೆಂಗಳೂರು:ಸಿಲಿಕಾನ್​ ಸಿಟಿ ಬೆಂಗಳೂರಿಂದ ಐಟಿ ಕಂಪನಿಗಳು ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊರವರ್ತುಲ ರಸ್ತೆಗಳ ಕಂಪನಿಗಳ ಅಸೋಸಿಯೇಷನ್​ನಿಂದ​ ಪತ್ರ ಬರೆದು, ಬೆಂಗಳೂರಿಂದ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಹೂಡಿಕೆ ವಾಪಸ್​ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.
ಆ.30ರಂದು ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿತ್ತು. ಮಳೆಯ ಪರಿಣಾಮ ಐಟಿ ಕಂಪನಿಗಳ ಒಳಭಾಗದಲ್ಲಿ ನೀರು ಬಂದಿತ್ತು. ಐದು ಗಂಟೆ ಕಾಲ ಹೊರವರ್ತುಲ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿದ್ದರು. ಇವೆಲ್ಲದರ ಪರಿಣಾಮ ಒಂದೇ ದಿನ 255 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಈ ಹೊರವರ್ತುಲ ರಸ್ತೆಯ ಕಳಪೆ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಮಳೆ ಬಂದಾಗ ಆಗುವ ಅವಾಂತರ ಹೆಚ್ಚುತ್ತಲೇ ಇದೆ. ಇದರಿಂದ ಕಂಪನಿಗಳಿಗೆ ತೀರಾ ನಷ್ಟವಾಗುತ್ತಿದೆ ಎಂದು ಐಟಿ ಅಸೋಸಿಯೇಷನ್​ ಪತ್ರ ಬರೆದಿದೆ.ಶೇ.32% ಬೆಂಗಳೂರಿನ ಆದಾಯದ ತೆರಿಗೆ ಈ ಭಾಗದ ಐಟಿ ಕಂಪನಿಗಳು ಪಾವತಿ ಮಾಡುತ್ತಿವೆ. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆ.ಆರ್​.ಪುರಂವರೆಗೆ 17 ಕಿ.ಮೀ. ಅಂತರದಲ್ಲಿ ಅನೇಕ ಐಟಿ ಕಂಪನಿಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.
2019ರಲ್ಲಿ ಸಿಎಂ ಭೇಟಿ ನೀಡಿ ಹೊರವರ್ತುಲ ಅಭಿವೃದ್ಧಿ ಬಗ್ಗೆ ಭರವಸೆ ಕೊಟ್ಟಿದ್ದರು. ಇದುವರೆಗೆ ಅದು ಈಡೇರಿಲ್ಲ ಎಂದು ಆಕ್ರೋಶ ಹೊರಹಾಕಲಾಗಿದೆ. ಐಟಿ ಕಾರಿಡಾರ್​ನಲ್ಲಿ ಯಾವ ಮೂಲಭೂತ ಸೌಕರ್ಯಗಳ ಕೊಡಲಾಯಿತು? ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಆಗ್ರಹಿಸಲಾಗಿದೆ.
ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮ ಯಾವುದು? ದೀರ್ಘಕಾಲಿಕ, ತಾತ್ಕಾಲಿಕವಾಗಿ ಯಾವ ರೀತಿಯ ಕ್ರಮಗಳು ಆಗಿದೆ? ಎಂದು ಪ್ರಶ್ನಿಸಿರುವ ಐಟಿ ಅಸೋಸಿಯೇಷನ್​, ಸಮಸ್ಯೆಗಳಿಗೆ ಬ್ರೇಕ್​ ಹಾಕದಿದ್ದಲ್ಲಿ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಬಂಡವಾಳ ಹೂಡಿಕೆ ವಾಪಸ್​ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದೆ.
ಒಂದು ವೇಳೆ ಐಟಿ ಕಂಪನಿಗಳು ಹೊರ ಹೋದರೆ ಬೆಂಗಳೂರಿನ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳುವುದಂತೂ ಸತ್ಯ.
ನಿನ್ಗೆ ಮಾನ-ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ?… ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ಗರಂ, ವಿಡಿಯೋ ವೈರಲ್​

ನಿತ್ಯಾನಂದ ಗಂಭೀರ ಸ್ಥಿತಿಯಲ್ಲಿದ್ದಾರೆ.. ತುರ್ತು ವೈದ್ಯಕೀಯ ನೆರವು ನೀಡಿ… ಕೈಲಾಸದಿಂದ ಶ್ರೀಲಂಕಾ ಸರ್ಕಾರಕ್ಕೆ ಬಂತು ಪತ್ರ

ಕೆಜಿಎಫ್​ನಿಂದ ಪ್ರೇರಿತಗೊಂಡು ನಾಲ್ವರನ್ನ ಕೊಂದ ಯುವಕ! ನೆಕ್ಸ್ಟ್​ ಟಾರ್ಗೆಟ್​ ಪೊಲೀಸರನ್ನ ಕೊಲ್ಲುವುದೇ ಆಗಿತ್ತು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − seven =
Remember me
