ಬೆಂಗಳೂರು:ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಅನುವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ ಪರಿಚಯಿಸಲಾಗಿದೆ.
ರಾತ್ರಿ ವೇಳೆ ರೈಲ್ವೆ ಪೊಲೀಸರು ರೈಲು ಗಸ್ತು, ರೈಲು ಹಳಿಗಳ ಗಸ್ತು ಮಾಡುತ್ತಾರೆ. ನಿಗದಿತ ಮಾರ್ಗದಲ್ಲಿ ರೈಲು ಹಳಿಗಳ ಮೇಲೆ ನಡೆದು ಹೋಗುವ ಸಂದರ್ಭದಲ್ಲಿ ಕತ್ತಲೆ ಇರುತ್ತದೆ. ಕೆಲವು ಬಾರಿ ರೈಲ್ವೆ ಹಳಿಗಳ ಮೇಲೆ ಆತ್ಮಹತ್ಯೆ ಘಟನೆಗಳು ನಡೆದ ಸಂದರ್ಭದಲ್ಲಿ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಇರುವಿಕೆ ಗುರುತಿಸುವುದು ಕಷ್ಟವಾಗುತ್ತದೆ. ಹೀಗಾಗಿ ರಾತ್ರಿ ವೇಳೆ ರೈಲ್ವೆ ಪೊಲೀಸರ ಇರುವಿಕೆಯನ್ನು ಗುರುತಿಸಲು ಅನುವಾಗುವಂತೆ ಶೋಲ್ಡರ್ ಲೈಟ್ ಪರಿಚಯಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿಗೌರಿ ತಿಳಿಸಿದರು.

ರಾತ್ರಿ ವೇಳೆ ರೈಲು ಗಸ್ತು, ರೈಲುಗಳ ಹಳಿಗಳ ಗಸ್ತು ಕರ್ತವ್ಯಕ್ಕೆ ನಿಯೋಜನೆಯಾಗುವ ರೈಲ್ವೆ ಪೊಲೀಸ್ ಸಿಬ್ಬಂದಿ ತಮ್ಮ ಭುಜದ ಮೇಲೆ ಈ ಶೋಲ್ಡರ್ ಲೈಟ್ ಧರಿಸುತ್ತಾರೆ. ಸದ್ಯಕ್ಕೆ 200 ಶೋಲ್ಡರ್ ಲೈಟ್ ಖರೀದಿಸಿದ್ದು, ಸದ್ಯ ಪ್ರತಿ ರೈಲ್ವೆ ಪೊಲೀಸ್ ಠಾಣೆಗೆ ತಲಾ 12 ಶೋಲ್ಡರ್ ಲೈಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶೋಲ್ಡರ್ ಲೈಟ್ ಖರೀದಿಸಿ ರೈಲ್ವೆ ಪೊಲೀಸರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ಜೊತೆ ಜೊತೆಯಲಿ’ ಧಾರಾವಾಹಿ ತಂಡದಲ್ಲಿ ಕಿರಿಕ್​: ಕಿರುತೆರೆಯಿಂದಲೇ ನಟ ಅನಿರುದ್ಧ್ ಬ್ಯಾನ್?

ಮನೆಯಲ್ಲಿ ಆಟವಾಡುತ್ತಾ ಸೊಳ್ಳೆನಾಶಕ ಲಿಕ್ವಿಡ್​ ಕುಡಿದು 2 ವರ್ಷದ ಮಗು ಸಾವು! ಹೊನ್ನಾವರದಲ್ಲಿ ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 8 =
Remember me
