ಬೆಂಗಳೂರು:ಎಚ್​.ಡಿ.ಕುಮಾರಸ್ವಾಮಿ ಅವರೇ ಬಿಜೆಪಿಯನ್ನು ಸೋಲಿಸಬೇಕಾ? ಹಾಗದ್ರೆ ನಮಗೆ ಬೆಂಬಲ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿಯೇ ಜೆಡಿಎಸ್​ಗೆ ಆಫರ್​ ಇಟ್ಟಿದ್ದಾರೆ.
ರಾಜ್ಯಸಭೆ ಚುನಾವಣೆಗೆ ನಾಳೆ ಮತನಾದ ನಡೆಯಲಿದ್ದು, 4 ನೇ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷದವರ ಬಳಿಯೂ ಬಹುಮತ ಇಲ್ಲ. ಕೊನೇ ಹಂತದ ಕಸರತ್ತು ನಡೆಯುತ್ತಿದ್ದು, ಜೆಡಿಎಸ್​ ಶಾಸಕರಿಗೆ ಕಾಂಗ್ರೆಸ್​ ಗಾಳ ಹಾಕಿದೆ. ಈ ಬಗ್ಗೆ ಗುರುವಾರ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್​ನಲ್ಲಿ 80 ಶಾಸಕರು ಇದ್ದಾಗಲೇ ಎಚ್​ಡಿಕೆ ಅವರನ್ನು ನಾವು ಸಿಎಂ ಮಾಡಿದ್ದೇವೆ. ಈ ಬಾರಿ ರಾಜ್ಯಸಭೆ ಚುನಾವಣೆಯ 4ನೇ ಅಭ್ಯರ್ಥಿಯನ್ನಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇವೆ. ಕುಮಾರಸ್ವಾಮಿ ಅವರೇ ನಮಗೆ ಬೆಂಬಲ ನೀಡಿ. ಆ ಮೂಲಕ ಬಿಜೆಪಿ ಸೋಲಿಸಿ ಎಂದು ಕರೆ ನೀಡಿದ್ದಾರೆ.
ದೇವೇಗೌಡರನ್ನು ನಾವು ಪ್ರಧಾನಿ‌ ಮಾಡಲಿಲ್ಲವೇ? ಅವರನ್ನು ರಾಜ್ಯಸಭೆಗೆ ಕಳಿಸಲಿಲ್ಲವೇ? ನಮ್ಮ ಅಭ್ಯರ್ಥಿ ಮೈನಾರಿಟಿಗೆ ಸೇರಿದವರು. ಜಾತ್ಯತೀತ ನಂಬಿಕೆಯಲ್ಲಿ ಅಭ್ಯರ್ಥಿ ಹಾಕಿದ್ದೇವೆ. ಜೆಡಿಎಸ್​ನವರು ಬೆಂಬಲಿಸಲಿ. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಒಟ್ಟು 9 ಜೆಡಿಎಸ್​ ಶಾಸಕರನ್ನು ಸಂಪರ್ಕಿಸಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ನಾಪತ್ತೆ! ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

ನನ್ನನ್ನು JDS​ ವರಿಷ್ಠರು ಸಂಪರ್ಕಿಸಿಲ್ಲ.. ರಾಜ್ಯಸಭೆ ಎಲೆಕ್ಷನ್​ನಲ್ಲಿ ಖಂಡಿತ BJP ಗೆಲ್ಲುತ್ತೆ: ಗುಬ್ಬಿ ಶಾಸಕ ಶ್ರೀನಿವಾಸ್​

ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್​ ದೇವ್​… ತಾಯಿ ರೇವತಿ ಸೆಲೆಕ್ಟ್​ ಮಾಡಿದ ಈ ಹೆಸರಿನ ಅರ್ಥ ಇಲ್ಲಿದೆ

ಮನೆ ಮನೆಯಲ್ಲಿ ಹಳೇ ಚಡ್ಡಿ ಸಂಗ್ರಹಿಸಿ ಕೆಪಿಸಿಸಿ ಕಚೇರಿಗೆ ಪಾರ್ಸೆಲ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × two =
Remember me
