ಚಿಕ್ಕಮಗಳೂರು:ಇವರೊಬ್ಬರಿಗೇನಾ ರಾಜಕೀಯ ಮಾಡೋಕೆ ಬರೋದು? ನಮಗೂ ಬರುತ್ತೆ. ಇವರಿಗಷ್ಟೇನಾ ಕಾರ್ಯಕರ್ತರು ಇರೋದು? ನಮಗೂ ಇದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ನವರ ಗೊಡ್ಡುಬೆದರಿಕೆಗೆ ಬಗ್ಗಲ್ಲ ನಾನು. ಕಾಂಗ್ರೆಸ್​ ಪಕ್ಷದಲ್ಲೂ ಕಾರ್ಯಕರ್ತರಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಮಳೆ ಹಾನಿಪೀಡಿತ ಪ್ರದೇಶಗಳ ವೀಕ್ಷಣೆಗೆಂದು ನಿನ್ನೆ(ಗುರುವಾರ) ಕೊಡಗು ಜಿಲ್ಲೆಗೆ ಪ್ರವಾಸ ಹೋದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಜನರಲ್​ ತಿಮ್ಮಯ್ಯ ಸರ್ಕಲ್​ ಬಳಿ ಸಿದ್ದು ಕಾರಿನತ್ತ ಮೊಟ್ಟೆ ಎಸೆದು ‘go back’ ಎಂದು ಆಕ್ರೋಶ ಹೊರಹಾಕಿದ್ದರು. ಸಿದ್ದರಾಮಯ್ಯ ಟಿಪ್ಪು ಶಿಷ್ಯ ಎಂದು ಘೋಷಣೆ ಕೂಗಿದ್ದರು. ವಿಪಕ್ಷ ನಾಯಕರತ್ತ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಈಗಾಗಲೇ ಮಡಿಕೇರಿಯಲ್ಲಿ ಸುಮಾರು 7 ಜನರನ್ನ ಬಂಧಿಸಲಾಗಿದೆ. ಅತ್ತ ಬಿಜೆಪಿ ವಿರುದ್ಧ ಬೆಂಗಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.
ಇದರ ನಡುವೆ ಇಂದು(ಶುಕ್ರವಾರ) ಶೃಂಗೇರಿಗೆ ಆಗಮಿಸಿದ್ದ ಸಿದ್ದರಾಮಯ್ಯ, ಮೊಟ್ಟೆ ಎಸೆದ ಪ್ರಕರಣ ಕುರಿತು ಆಕ್ರೋಶ ಹೊರಹಾಕಿದರು. ನಮ್ಮ ಪಕ್ಷದಲ್ಲೂ ಕಾರ್ಯಕರ್ತರಿದ್ದಾರೆ. ನಮಗೂ ರಾಜಕೀಯ ಮಾಡೋಕೆ ಬರುತ್ತೆ ಎಂದು ಎಚ್ಚರಿಸಿದರು.
‘ಜೊತೆ ಜೊತೆಯಲಿ’ ಧಾರಾವಾಹಿ ತಂಡದಲ್ಲಿ ಕಿರಿಕ್​: ಕಿರುತೆರೆಯಿಂದಲೇ ನಟ ಅನಿರುದ್ಧ್ ಬ್ಯಾನ್?

ದೆಹಲಿಯ ಕರ್ನಾಟಕ ಭವನದ ಕಾರು ಚಾಲಕ ಆತ್ಮಹತ್ಯೆ! ಮಂಡ್ಯ ಮೂಲದ ಯುವಕನ ಸಾವಿಗೆ ಕಾರಣ?

ಮಿನಿಷ್ಟ್ರು ಬಂದ್ರೂ ಮೇಷ್ಟ್ರು ಬರಲಿಲ್ಲ! ಬಿ.ಸಿ.ನಾಗೇಶ್ ಎದುರೇ ಅವ್ಯವಸ್ಥೆ ಬಯಲು, ಶಿಕ್ಷಕರಿಗೆ ನೋಟಿಸ್ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
