ಬೆಂಗಳೂರು:ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡ್ತೇನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ‘ನೀವು ವಿರೋಧ ಪಕ್ಷದಲ್ಲಿದ್ದಾಗ ಏನ್​ ಮಾಡ್ತಿದ್ರಿ? ಕಡ್ಲೆಪುರಿ ತಿಂತಾ ಇದ್ಯಾ? ದಾಖಲೆ‌ ಇದ್ದರೆ ಅವತ್ತೇ ಹೇಳಬೀಕಿತ್ತಲ್ಲಾ? ಯಾಕೆ ಸುಮ್ಮನಿದ್ರಿ? ನನ್ನ ‌ಉಳಿಸೋಕೆ(ಸಿಎಂ ಸ್ಥಾನದಲ್ಲಿ) ಅಂತ ಆಗ ಮಾತಾಡಿರಲಿಲ್ವಾ?’ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ಪ್ರಕರಣದಲ್ಲಿ ಅಮೃತ್​ ಪೌಲ್​ರ ಬಂಧನ ಕೇವಲ ಕಣ್ಣೊರೆಸುವ ತಂತ್ರ. ಈ ಪ್ರಕರಣದಲ್ಲಿ ಸಚಿವರ ಪಾತ್ರ ಇದೆ, ದೊಡ್ಡವರ ಪಾತ್ರ ಇದೆ. ಎಲ್ಲವೂ ಬಹಿರಂಗವಾಗಲಿ. ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ, ಕಾಂಗ್ರೆಸ್ ಅವಧಿಯಲ್ಲಿನ ಅಕ್ರಮಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಈ ವಿಚಾರಕ್ಕೆ ಗರಂ ಆದ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿನ ನೇಮಕಾತಿ ಬಗ್ಗೆ ತನಿಖೆ ಮಾಡಿಸಿ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಈಗ ಮಾತಾಡೋದಲ್ಲ, ಅಕ್ರಮ ನಡೆದಿದ್ದರೆ ಆಗಲೇ ಹೇಳಬೇಕಿತ್ತು. ಆಗ ಯಾಕೆ ಸುಮ್ಮನಿದ್ರು? ಆಗ ಕಡ್ಲೆಪುರಿ ತಿನ್ನುತ್ತಿದ್ರಾ? ದಾಖಲೆ ಇದ್ರೆ ಬಿಡುಗಡೆ ಮಾಡಿ ಎಂದು ಸಿಎಂಗೆ ಸಿದ್ದರಾಮಯ್ಯ ಸವಾಲು ಹಾಕಿದರು.
ಗೃಹ ಸಚಿವರು ಸದನದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದಿದ್ದರು. ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಉತ್ತರ ಕೊಟ್ಟಿದ್ದಾರೆ. ಸುಳ್ಳು ಹೇಳಿದ ಮೇಲೆ ಸಚಿವರಾಗಿ ಹೇಗೆ ಮುಂದುವರಿಯುತ್ತಾರೆ? ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾದ ಅಲ್ವಾ? ಅವರು ಕಾನೂನು ಓದಿ ಕೊಂಡಿದ್ದಾರಾ? ಬಿಜೆಪಿ ಕೂಡ ಅವರನ್ನು ‌ಮುಂದುವರಿಸಬಾರದು. ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ರೆ ಆಗ ಯಾಕೆ ಸುಮ್ಮನಿದ್ದರು? ಕಡ್ಲೆಪುರಿ ತಿನ್ನುತ್ತಿದ್ರಾ? ದಾಖಲೆ ಇದ್ರೆ ಬಿಡುಗಡೆ ಮಾಡಿ ಮಾತನಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
PSI ಹುದ್ದೆ ಅಕ್ರಮದಲ್ಲಿ ವಿಜಯೇಂದ್ರ… ಇವರ ಹೆಸರು ಬರೆದುಕೊಳ್ಳಿ ಮಾಹಿತಿ ಕೊಡ್ತೀವಿ: ಸಿದ್ದರಾಮಯ್ಯ

ಚಂದ್ರಶೇಖರ ಗುರೂಜಿ ಹಂತಕರ ಬಂಧನ: ಅಸಲಿ ವಿಚಾರ ಮುಚ್ಚಿಟ್ರಾ ಪೊಲೀಸರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 18 =
Remember me
