ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಿದ್ದರಾಮಯ್ಯ ಅವರು ಬೇರೆ ಕ್ಷೇತ್ರದಿಂದ ನಿಲ್ಲುತ್ತಾರೆ ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರದಿಂದ ಬೆಂಗಳೂರಿಗೆ ಬಂದ ಹಲವರು ಶಿವಾನಂದ ವೃತ್ತ ಸಮೀಪ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನ ಭೇಡಿ ಮಾಡಿ, ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದರು. ಆ ವೇಳೆ ಮಾತನಾಡಿದ ಸಿದ್ದು, ನಾನೇನಾದ್ರೂ ಬಾದಾಮಿಯಿಂದ ಚುನಾವಣೆಗೆ ಸ್ಪರ್ಧಿಸಲ್ಲ ಅಂದಿದ್ದೀನಾ? ಅಭಿಮಾನದಿಂದ ಕೆಲವರು ಬೇರೆ ಕಡೆ ಸ್ಪರ್ಧಿಸಿ ಎಂದು ಕರೆಯುತ್ತಾರೆ ಅಷ್ಟೆ. ನಾನು ಹಲವು ಕೆಲಸ ಮಾಡಿರಬಹುದು. ಒಬ್ಬ ಶಾಸಕನಾಗಿಯಷ್ಟೇ ಮಾಡಿದ್ದೇನೆ. ಅದರಲ್ಲಿ ದೊಡ್ಡಸ್ಥಿಕೆಯೇನೂ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ 10 ತಿಂಗಳು ಬಾಕಿಯಿದೆ. ನಾನು ಅಸೆಂಬ್ಲಿಯಲ್ಲೂ ಹೇಳಿದ್ದೇನೆ. ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಅವತ್ತು ಹೇಳಿದ ಮಾತೇ ಇವತ್ತಿಗೂ ಇದೆ. ನಾನು ಬಾದಾಮಿ ಶಾಸಕ. ನಿಮ್ಮ ಇಚ್ಛೆಯಂತೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕೊಪ್ಪಳ, ಕೋಲಾರ, ಚಾಮರಾಜಪೇಟೆಯಿಂದಲೂ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, ನಾನು ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ. ನಾನು ಮೈಸೂರಿನಿಂದ ಬಾದಾಮಿಗೆ ಹೋದವನು. ಅಲ್ಲಿಂದ ಜನ ನನ್ನನ್ನು ಆರಿಸಿ ಕಳಿಸಿದ್ದಾರೆ. ನಾನು ನಾಮಪತ್ರ ಸಲ್ಲಿಸಲು, ಪ್ರಚಾರಕ್ಕೆಂದು ಎರಡೇ ದಿನ ಅಲ್ಲಿಗೆ ಹೋಗಿದ್ದು. ಆದರೂ ಅಲ್ಲಿನ ಜನ ನನ್ನ ಕೈ ಹಿಡಿದರು ಎನ್ನುತ್ತಲೇ ಸಿದ್ದರಾಮಯ್ಯ ಭಾವುಕರಾದರು.
ಸುಮ್ಮನೆ ಖರ್ಚು ಮಾಡಿಕೊಂಡು ನೀವು ಇಲ್ಲಿಗೆ ಬರಬೇಡಿ, ನಾನೇ ಭಾನುವಾರ ಬಾದಾಮಿಗೆ ಬರುವೆ. ಅಲ್ಲಿಯೇ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದಿದ್ದೆ. ಆದರೂ ಬಂದಿದ್ದೀರಿ. ನಾನು ಬಾದಾಮಿ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ಪರ್ಧಿಸುವುದಾದರೂ ನಿಮ್ಮ ಅನುಮತಿ ಪಡೆದೇ ಹೋಗುವೆ ಎಂದರು.
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶವಿಲ್ಲ: ಜಿಲ್ಲಾಧಿಕಾರಿ ಆದೇಶ

ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
