ಹಾಸನ: ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ ಇದೆ ಅಂದ್ರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಅಂತೆ. ಅವರಿಲ್ಲ ಅಂದ್ರೆ ಇಡೀ ಪಕ್ಷವೇ ಝೀರೋ ಆಗುತ್ತಂತೆ…
ಹೌದು, ಹೀಗಂತ ಹಾಸನದಲ್ಲಿ ಮಾಜಿ ಸಚಿವ ಎಚ್​.ಡಿ.ರೇವಣ್ಣ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಇಲ್ಲ ಅಂದಿದ್ರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎಂದೋ ಮುಳುಗಿ ಹೋಗುತ್ತಿತ್ತು. ಸಿದ್ದರಾಮಯ್ಯ ಕೈ ಬಿಟ್ರೆ ಈಗಲೂ ಮುಳುಗುತ್ತೆ. ಸದ್ಯ ಕಾಂಗ್ರೆಸ್​ನನ್ನು ಶೇ.70ಕ್ಕೆ ನಿಲ್ಲಿಸಿರೋದು ಸಿದ್ದರಾಮಯ್ಯ. ಅವರಿಲ್ಲ ಅಂದ್ರೆ ಕಾಂಗ್ರೆಸ್ ಝೀರೋ. ಈ ಬಗ್ಗೆ ನನಗೆ ಹೇಳೋಕೆ ನನಗೇನು ಭಯವಿಲ್ಲ, ನೇರವಾಗಿಯೇ ಹೇಳ್ತೀನಿ ಎಂದರು.ಇದನ್ನೂ ಓದಿರಿಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿದ್ದು ನಾನೇ: ಚಂದ್ರಕಾಂತ ಬೆಲ್ಲದ​
ದಿನ ಬೆಳಗಾದ್ರೆ ಸೀಮೆಎಣ್ಣೆ ಡಬ್ಬ ಹಿಡ್ಕೊಂಡ್ರೆ ಏನ್​ ಮಾಡೋಕೆ ಆಗುತ್ತೆ. ಅದಕ್ಕೆ ಕಾಂಗ್ರೆಸ್ ಮುಳುಗಿ ಹೋಗ್ತಿರೋದು. ನಿತ್ಯ ಪ್ರತಿಭಟನೆ ಮಾಡಿಬಿಟ್ಟರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುತ್ತಾರಾ? ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದೇ ಕಾಂಗ್ರೆಸ್. ಆ ಶಾಪ ಕಾಂಗ್ರೆಸ್​ ಮೇಲಿದೆ ಎಂದ ಎಚ್​ಡಿ ರೇವಣ್ಣ, ಕಾಂಗ್ರೆಸ್ ಮುಖಂಡರೇ ಈ ರಾಜ್ಯದ ಮುಖ್ಯಮಂತ್ರಿ ಉಳಿಬೇಕು ಅಂತ ಹೇಳಿದ್ದಾರೆ. ಜೆಡಿಎಸ್ ಮತ್ತು ದೇವೇಗೌಡರನ್ನ ಮುಗಿಸಲು ಹೀಗೆ ಮಾಡಿದ್ದಾರೆ ಎಂದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನೆಗೆ ಕೊಟ್ಟಿದ್ದ ಭೇಟಿ ರಾಜಕೀಯ ಉದ್ದೇಶ ಅಲ್ಲ, ಹೊಳೆನರಸೀಪುರ ಪೊಲೀಸ್ ಠಾಣೆ ವಿಚಾರಕ್ಕೆ ಹೋಗಿದ್ದೆ ಎಂದರು.(ದಿಗ್ವಿಜಯ ನ್ಯೂಸ್​)
ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

ಕಲಬುರಗಿಯಲ್ಲಿ ಪ್ರೇಯಸಿ ಹಂತಕ ರವಿ ಪೂಜಾರಿ ಭೀಕರ ಹತ್ಯೆ!

5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

Sign in to your account
Please enter an answer in digits:four × 5 =
Remember me
