ಬೆಂಗಳೂರು:ಇಂದು(ಶುಕ್ರವಾರ) ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಒಂದೇ ಒಂದು ಹೇಳಿಕೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್​ ಪಕ್ಷಕ್ಕೂ ಹಿರಿಸುಮುರಿಸು ತಂದೊಡ್ಡಿದ್ದು, ಡ್ಯಾಮೇಜ್ ಕಂಟ್ರೋಲ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ. ​ಸರ್ಕಸ್ ಮಾಡುತ್ತಿದ್ದಾರೆ. ಹಿಜಾಬ್ ಕೆಂಡ ಕೆದಕಿ ಕಾಂಟ್ರೋವರ್ಸಿ ಕ್ರಿಯೆಟ್ ಮಾಡಿದ ಸಿದ್ದರಾಮಯ್ಯ, ಸ್ವಾಮೀಜಿ ವಿಚಾರ ಎಳೆದು ತಂದು ಕೈ ಸುಟ್ಟು ಕೊಂಡಿದ್ದಾರೆ.
ಹಿಂದುತ್ವ ವಿಚಾರದಲ್ಲಿ ಸಾಫ್ಟ್ ಆಗಿ ರಿಯಾಕ್ಟ್ ಮಾಡಿ ಎಂದು ಕಾಂಗ್ರೆಸ್​ ಶಾಸಕರು ಹೇಳಿದ್ದರೂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಕೊಟ್ಟು ಕಾವಿಧಾರಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಸಿದ್ದರಾಮಯ್ಯರ ಮಾತಿಗೆ ಫುಲ್ ಅಲರ್ಟ್ ಆದ ಬಿಜೆಪಿ ನಾಯಕರು, ಕ್ಷಮೆ ಕೋರುವಂತೆ ಸಿದ್ದುಗೆ ಆಗ್ರಹಿಸುತ್ತಿದ್ದಾರೆ.
‘ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ. ಮುಸ್ಲಿಂ ಹೆಣ್ಣು ಮಕ್ಕಳು ದುಪ್ಪಟ್ಟವನ್ನ ತಲೆಗೆ ಹಾಕಿ ಕೊಳ್ಳುತ್ತೇನೆ ಅಂದ್ರೆ ಅದರಲ್ಲಿ ತಪ್ಪೇನಿದೆ? ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನಿಸ್ತೀರಾ?’ ಎಂದು ಸಿದ್ದರಾಮಯ್ಯ ಹೇಳಿದ್ದರು. ಸ್ವಾಮೀಜಿಗಳು ಧರಿಸುವ ಪೇಟಕ್ಕೆ ಹಿಜಾಬ್​ ಅನ್ನು ಹೋಲಿಸಿದ್ದು ಎಷ್ಟು ಸರಿ? ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಬೇಡ ಎಂಬ ವಿಚಾರಕ್ಕೆ ಸ್ವಾಮೀಜಿಯವರು ಧರಿಸುವ ಪೇಟ ಮತ್ತು ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕುವ ವಿಧಾನಕ್ಕೆ ಹೋಲಿಕೆ ಮಾಡಿದ್ದು ಸರಿಯೇ? ಸ್ವಾಮೀಜಿಗಳು ತಲೆವಸ್ತ್ರ ಹಾಕಿಕೊಂಡು ಶಾಲೆಯಲ್ಲಿ ಕೂರಲ್ಲ. ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆಯೇ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕುಡಿದು ಸಿಟ್ಟಿನಿಂದ ಸಿಎಂಗೆ ಬೈದಿದ್ದೀನಿ… ದಯವಿಟ್ಟು ಕ್ಷಮಿಸಿ: ಶಾಬಾಜ್​ ಉಲ್ಲಾಖಾನ್​

ಮುಂದಿನ ಚುನಾವಣೆಯೇ ನನಗೆ ಕೊನೇ… ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ: ಸಿದ್ದರಾಮಯ್ಯ

ನಾನು ಸತ್ತ ನಂತ್ರ ಬೇರೆ ಮದ್ವೆ ಆಗಿ ಆಕೆಗೂ ಕಾಟ ಕೊಡ್ಬೇಡ… ಡೆತ್​ನೋಟ್ ಬರೆದು ಬೆಂಗ್ಳೂರಲ್ಲಿ ಪತ್ರಕರ್ತೆ ಆತ್ಮಹತ್ಯೆ

ತಹಸೀಲ್ದಾರ್​ರನ್ನು ಬಂಧಿಸಲು ಮನೆ ಬಾಗಿಲಲ್ಲೇ ಬೆಳಗಿನಜಾವದಿಂದ ಕಾಯುತ್ತಾ ಕುಳಿತ ಎಸ್​ಪಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − two =
Remember me
