|ನವೀನ ಎಂ.ಬಿ.ದಾವಣಗೆರೆಬೆಣ್ಣೆ ನಗರಿ ದಾವಣಗೆರೆ ಈಗ ರಾಜಕೀಯವಾಗಿ ಸುದ್ದಿಯಲ್ಲಿದೆ. ಇಡೀ ರಾಜ್ಯ ಈ ಊರಿನತ್ತ ಎತ್ತರ ಚಿತ್ತ ನೆಟ್ಟಿದೆ. ಕಾರಣ ಆಗಸ್ಟ್ 3ರಂದು ನಡೆಯಲಿರುವ ಸಿದ್ದರಾಮೋತ್ಸವ. ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವಕ್ಕೆ ಭರದಿಂದ ಸಿದ್ಧತೆಗಳು ಸಾಗಿವೆ. ಸಿದ್ದರಾಮೋತ್ಸವದ ನೆಪದಲ್ಲಿ ಇಡೀ ದಾವಣಗೆರೆಯ ಆರ್ಥಿಕತೆಗೆ ಒಂದಷ್ಟು ಜೀವ ಕಳೆ ಬಂದಿದೆ. ತಾಲೂಕು, ಜಿಲ್ಲೆ ಸೇರಿ ರಾಜ್ಯದ ನಾನಾ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ನಗರದ ಎಲ್ಲ ವಸತಿಗೃಹಗಳು ವಾರೊಪ್ಪತ್ತಿನ ಮುಂಚೆ ಬುಕ್ ಆಗಿವೆ.
ದಾವಣಗೆರೆ ಹೊರ ವಲಯದ ಶಾಮನೂರು ಅರಮನೆ ಮೈದಾನದ 5೦ ಎಕರೆ ವಿಶಾಲ ಜಾಗದಲ್ಲಿ ಬೃಹತ್ ಪೆಂಡಾಲ್ ತಲೆ ಎತ್ತಿದ್ದು, ಅದಕ್ಕೆ ಅಂತಿಮ ಟಚಪ್ ಕೊಡಲಾಗುತ್ತಿದೆ. ರಾಜ್ಯದ ನಾಲ್ಕೂ ದಿಕ್ಕುಗಳಿಂದ ಸುಮಾರು 5 ಲಕ್ಷ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಉತ್ಸವಕ್ಕೆ ಹರಿದು ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದ್ದು, ಅಡುಗೆ ತಯಾರಿಗೆಂದೇ ಬೆಂಗಳೂರಿನಿಂದ 2500 ಬಾಣಸಿಗರ ತಂಡ ಈಗಾಗಲೇ ದಾವಣಗೆರೆಗೆ ಬಂದಿಳಿದಿದೆ.ಅಂದ ಹಾಗೆ ಸಿದ್ದರಾಮೋತ್ಸವದ ಮೆನು, ಪಲಾವ್, ಮೊಸರನ್ನ ಹಾಗೂ ಮೈಸೂರು ಪಾಕ್, ವಿಐಪಿಗಳಿಗೂ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರಾವಣ ಮಾಸದ ಕಾರಣ ಸಸ್ಯಾಹಾರಿ ಊಟಕ್ಕೆ ಆದ್ಯತೆ ನೀಡಲಾಗಿದೆ.
ಗರಿಗೆದರಿದ ದಾವಣಗೆರೆ ಆರ್ಥಿಕತೆ:ತಾಲೂಕು, ಜಿಲ್ಲೆ ಸೇರಿ ರಾಜ್ಯದ ನಾನಾ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ನಗರದ ಎಲ್ಲ ವಸತಿಗೃಹಗಳು ವಾರೊಪ್ಪತ್ತಿನ ಮುಂಚೆ ಬುಕ್ ಆಗಿವೆ. ಈಗ ಯಾರಾದರೂ ದಾವಣಗೆರೆಗೆ ಬಂದು ಲಾಡ್ಜ್ ಕೇಳಿದರೆ ಒಂದೇ ಒಂದು ರೂಂ ಸಿಗುವುದೂ ಕಷ್ಟ. ಆ.1ರಿಂದ 3ರವರೆಗೆ ಪ್ಯಾಕೇಜ್ ಲೆಕ್ಕದಲ್ಲಿ ಎಲ್ಲವೂ ಬುಕ್ ಆಗಿಬಿಟ್ಟಿವೆ. ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ನಿರೀಕ್ಷಿಸಿರುವ ಈ ಊರಿನ ಐಷಾರಾಮಿ ಹೋಟೆಲ್​ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳು ಅಗತ್ಯ ದಾಸ್ತಾನು ಮಾಡಿಕೊಂಡಿವೆ.
ಹೆಚ್ಚಿನ ವಾಹನಗಳು ಆಗಮಿಸುವ ಕಾರಣ ಇಂಧನ ಬಂಕ್‌ಗಳು, ಡಿಸೇಲ್ ಪೆಟ್ರೋಲ್ ಶೇಖರಣೆ ಮಾಡುತ್ತಿವೆ. ದಾವಣಗೆರೆಯ ಬೆಣ್ಣೆ ದೋಸೆ ಹೊಟೇಲುಗಳು, ಕಾರಾ, ಮಂಡಕ್ಕಿ, ಮಿರ್ಚಿ ಅಂಗಡಿಗಳು ಅಂದು ಹೆಚ್ಚುವರಿ ವ್ಯಾಪಾರದ ನಿರೀಕ್ಷೆಯಲ್ಲಿವೆ. ವಸತಿ ಗೃಹಗಳು, ಹೋಟೆಲ್​ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಸಿಗರೇಟ್, ಬೀಡಾ ಅಂಗಡಿಗಳು, ಬ್ಯಾನರ್, ಬಂಟಿಗ್ಸ್, ಫ್ಲೆಕ್ಸ್ ತಯಾರಕರು ತಮ್ಮ ಕೆಲಸಗಳಲ್ಲಿ ಬಿಜಿ ಆಗಿದ್ದಾರೆ.
ಈ ಎಲ್ಲ ಮೂಲಗಳಿಂದ ಕೋಟ್ಯಂತರ ರೂ. ಚಲಾವಣೆ ಆಗಲಿದ್ದು, ಒಟ್ಟು ವಹಿವಾಟು ಐದಾರು ಕೋಟಿ ರೂ. ಮೀರಬಹುದೆಂದು ಅಂದಾಜಿಸಲಾಗಿದೆ. ಊರಿನೊಳಗೆ ನಡೆಯುವ ವಹಿವಾಟಿನ ಚಿತ್ರಣವಿದು. ಸಮಾವೇಶದ ಖರ್ಚು-ವೆಚ್ಚಗಳು ಲೆಕ್ಕಕ್ಕೆ ನಿಲುಕವು.

ಬೃಹತ್ ವೇದಿಕೆ ನಿರ್ಮಾಣ:50/142 ಅಡಿ ಉದ್ದಗಲದ ವೇದಿಕೆ ನಿರ್ಮಿಸಲಾಗುತ್ತಿದೆ. 80 ಜನ ಆಸೀನರಾಗಬಹುದು. ರಾಹುಲ್‌ಗಾಂಧಿ ಆಗಮನದ ಕಾರಣ ಗರಿಷ್ಠ ಭದ್ರತೆ ಒದಗಿಸಲಾಗುತ್ತಿದೆ. ಒಟ್ಟು 5 ಪ್ರವೇಶ-ನಿರ್ಗಮನ ದ್ವಾರಗಳಿವೆ. ಒಂದನ್ನು ವಿವಿಐಪಿಗೆ ಮೀಸಲಿಡಲಾಗಿದೆ. ವೇದಿಕೆ ಸಮೀಪದಲ್ಲಿ 300 ಕಾರುಗಳ ನಿಲುಗಡೆಗೆ, ಮೈದಾನದ ಹೊರಗೆ ಖಾಲಿ ನಿವೇಶನಗಳಲ್ಲಿ ಸಾವಿರಾರು ಬಸ್‌ಗಳಿಗೆ ಸ್ಥಳವಕಾಶವಿದೆ.
ಮೈಸೂರು ದಸರಾಕ್ಕೆ ಶಾಮಿಯಾನ ಹಾಕುವ ಷರೀಫ್ ಇಲ್ಲಿ ಪೆಂಡಾಲ್‌ನ ಜವಾಬ್ದಾರಿ ತೆಗೆದುಕೊಂಡಿದ್ದು ವಾಟರ್ ಪ್ರೂಫ್ ಶಾಮಿಯಾನಕ್ಕೆ ಆದ್ಯತೆ ನೀಡಲಾಗಿದೆ. 3.50 ಲಕ್ಷ ಆಸನಗಳನ್ನು ಹಾಕಲಾಗುತ್ತಿದೆ. ಬೆಂಗಳೂರಿನ ಸಿದ್ದರಾಜು ಸೌಂಡ್ ಸಿಸ್ಟಮ್ ಒದಗಿಸುತ್ತಿದ್ದಾರೆ. ಫಲಾವ್, ಮೊಸರನ್ನ, ಮೈಸೂರು ಪಾಕ್ ಊಟದ ಮೆನು. 2500 ಬಾಣಸಿಗರು ಊಟ ತಯಾರಿಸುವರು. 400 ಊಟದ ಕೌಂಟರ್, ಕೈ ತೊಳೆಯಲು 200 ನಳಗಳ ವ್ಯವಸ್ಥೆ ಮಾಡಲಾಗಿದೆ.
ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
