ತುಮಕೂರು:ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಇಂದು(ಜು.22) 60ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಂಡೋಮಾನ್​ ಮತ್ತು ನಿಕೋಬಾರ್​ ಪ್ರವಾಸಕ್ಕೆ ಶ್ರೀಗಳು ತೆರಳಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಠದಲ್ಲಿ ಯಾವುದೇ ಜನ್ಮದಿನ ಕಾರ್ಯಕ್ರಮ ಆಯೋಜಿಸಿಲ್ಲ.
1963ರ ಜುಲೈ 22ರಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್​ ಬಂಡೇಮಠದಲ್ಲಿ ಸದಾಶಿವಯ್ಯ, ಶಿವರುದ್ರಮ್ಮ ದಂಪತಿ ಪುತ್ರರಾಗಿ ಜನಿಸಿದ ಸಿದ್ದಲಿಂಗ ಶ್ರೀಗಳು 1988ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ಲಿಂ.ಶಿವಕುಮಾರ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಸಿದ್ದಲಿಂಗ ಶ್ರೀಗಳು ಎಂದಿಗೂ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡವರಲ್ಲ. ಆದರೂ, ಕೆಲವು ಭಕ್ತರು ಜು.22 ರಂದು ಶ್ರೀಮಠದಲ್ಲಿ ಹೂವಿನ ಅಲಂಕಾರ ಮಾಡಿ ತಮ್ಮ ಭಕ್ತಿ ಸಮರ್ಪಿಸಿದ್ದುಂಟು.
60ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಸಿದ್ದಲಿಂಗ ಶ್ರೀಗಳು ಬುಧವಾರವೇ ವಿವಿಧ ಮಠಾಧೀಶರ ಜತೆ ಅಂಡಮಾನ್​ ಮತ್ತು ನಿಕೋಬಾರ್​ ಪ್ರವಾಸಕ್ಕೆ ತೆರಳಿದ್ದು, ಸರಳ ಹುಟ್ಟುಹಬ್ಬ ಆಚರಣೆಗೂ ಅವಕಾಶ ನೀಡದೆ ಬ್ರೇಕ್​ ಹಾಕಿದ್ದಾರೆ. ಶ್ರೀಗಳು ಶನಿವಾರ ಮಠಕ್ಕೆ ಮರಳುವ ಸಾಧ್ಯತೆ ಇದೆ.
ಸಿದ್ದಲಿಂಗ ಶ್ರೀಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಭಕ್ತರೇ ನೆನಪಿಸಿ ಸರಳವಾಗಿ ಆಚರಿಸಿಕೊಂಡು ಬರುತ್ತಿದ್ದರು. ಭಕ್ತರ ಒತ್ತಾಯಕ್ಕೆ ಮಣಿಯಬೇಕಾದೀತೆಂಬ ಕಾರಣಕ್ಕೆ ಶ್ರೀಗಳು ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಕಲ್ಪತರು ನಾಡು, ಬಹುಮತ ಬೀಡು!

ಪ್ರೇಯಸಿಯ ತಲೆ ಕಡಿದು ಠಾಣೆಗೆ ತಂದ ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ದುರಂತ, ಪ್ರೇಯಸಿ ಕೊಂದು ಪ್ರಿಯಕರ ಆತ್ಮಹತ್ಯೆ!

ಮಂಗಳೂರಲ್ಲಿ ವಿದ್ಯಾರ್ಥಿಗಳ ಚುಂಬನ ವಿಡಿಯೋ ವೈರಲ್​ ಬೆನ್ನಲ್ಲೇ ಕಾಮಪುರಾಣ ಲೀಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − four =
Remember me
