ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಸಂಭ್ರಮದಲ್ಲಿ ದೇಶವೇ ಮುಳುಗಿದ್ದಾಗ ಶಂಕಿತ ಉಗ್ರರು ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಸ್ಪೋಟಿಸಿ ರಾಷ್ಟ್ರೀಯ ಭದ್ರತೆಗೆ ಸವಾಲು ಎಸಗಿದ್ದರು. ಕೃತ್ಯ ನಡೆದ ಕೆಲವೇ ಕ್ಷಣಕ್ಕೆ ಉಗ್ರ ಸಂಘಟನೆ ಕೈವಾಡ ಇರುವುದನ್ನು ರಾಜ್ಯ ಪೊಲೀಸರು ಖಚಿತಪಡಿಸಿಕೊಂಡರು. ರಾಷ್ಟ್ರೀಯ ತನಿಖಾ ದಳ(ಎನ್​ಐಎ), ಕೇಂದ್ರ ಗುಪ್ತಚರ ಇಲಾಖೆ ಮತ್ತು ಎನ್​ಎಸ್​ಜಿ ಪಡೆ ಸ್ಥಳಕ್ಕೆ ಭೇಟಿ, ತನಿಖೆ ಚುರುಕುಗೊಳಿಸಿದವು.
ಸಣ್ಣ ಸುಳಿವು ಬಿಡದೆ ಉಗ್ರರು ಈ ಕೃತ್ಯ ಎಸಗಿದ್ದು ತಲೆನೋವಾಗಿ ಪರಿಣಮಿಸಿತ್ತು. ನಕಲಿ ಹೆಸರು, ನಕಲಿ ಐಡಿ ಕಾರ್ಡ್ ಇಟ್ಟುಕೊಂಡು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್​ವಾಟೆಂಡ್​ಗಳನ್ನು ಕ್ಯಾಪ್ ಆಧರಿಸಿ ಜಾಡು ಹಿಡಿದು 42 ದಿನಗಳಲ್ಲಿ ಬಂಧಿಸುವಲ್ಲಿ ಎನ್​ಐಎ ಮತ್ತು ತನಿಖಾ ಸಂಸ್ಥೆಗಳು ಯಶಸ್ವಿ ಆಗಿರುವುದು ಸಮಾಧಾನದ ವಿಚಾರವಾಗಿದೆ.
ರಾಮೇಶ್ವರಂ ಕೆಫೆ ಮತ್ತು ಬಿಎಂಟಿಸಿ ಬಸ್​ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳಲ್ಲಿ ಶಂಕಿತ ಉಗ್ರ ಕ್ಯಾಪ್ ಮತ್ತು ಮಾಸ್ಕ್ ಧರಿಸಿದ್ದ ಕಾರಣಕ್ಕೆ ಮುಖಚಹರೆ ಪತ್ತೆ ಆಗಿರಲಿಲ್ಲ. ಹಾಗಾಗಿ, ಇದು ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿತ್ತು.
ಶಂಕಿತನು ಕೆಫೆಯಲ್ಲಿ ಸ್ಪೋಟಕ ಇಟ್ಟು 3 ಕಿಲೋಮೀಟರ್ ದೂರದ ಪ್ರಾರ್ಥನಾ ಮಂದಿರದಲ್ಲಿ ಟೋಪಿ ಬಿಟ್ಟುಹೋಗಿದ್ದ. ‘10 ನಂಬರ್’ ಎಂದು ಬರೆದಿದ್ದ ಆ ಕ್ಯಾಪ್ ಪ್ರಮುಖ ಸುಳಿವು ನೀಡಿತು. ಬೇಸ್​ಬಾಲ್​ಗಾಗಿ ತಯಾರಿಸಿದ್ದ ಆ ಟೋಪಿ ಜನವರಿಯಲ್ಲಿ ಚೆನ್ನೈ ಮಾಲ್​ನಲ್ಲಿ ಮಾರಾಟ ಆಗಿರುವುದು ಖಚಿತವಾಯಿತು. ಅಲ್ಲಿನ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲನೆ ಮಾಡಿದಾಗ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್​ವಾಟೆಂಡ್ ಮುಸಾವೀರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ತಾಹಾ ಜತೆಯಲ್ಲಿ ಇದ್ದ ದೃಶ್ಯ ಬೆಳಕಿಗೆ ಬಂದಿತು. ಅಲ್ಲಿಗೆ ‘ಶಿವಮೊಗ್ಗ ಐಸಿಸ್ ಮ್ಯಾಡ್ಯುಲ್’ ಶಂಕಿತರ ಕೈವಾಡ ಇರುವುದು ತನಿಖಾಧಿಕಾರಿಗಳಿಗೆ ಖಚಿತವಾಯಿತು. 2020ರಲ್ಲಿ ಮಂಗಳೂರಿನಲ್ಲಿನ ದೇಶವಿರೋಧಿ ಗೋಡೆಬರಹ, ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ತುಂಗಾತೀರದಲ್ಲಿ ಬಾಂಬ್ ಪ್ರಯೋಗಾರ್ಥ ಪರೀಕ್ಷೆ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್​ಸ್ಪೋಟ, ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ ಒಂದಕ್ಕೊಂದು ಲಿಂಕ್ ಆಗಿದ್ದವು.
2021ರಲ್ಲಿ ಸದ್ದುಗುಂಟೆಪಾಳ್ಯದಲ್ಲಿ ದಕ್ಷಿಣ ಭಾರತದ ಐಸಿಸ್ ಕಮಾಂಡರ್ ಮೊಯಿದ್ದೀನ್ ಖ್ವಾಜಾ ತಂಡವನ್ನು ಬಂಧಿಸಿದಾಗ ಈ ಇಬ್ಬರು ತಪ್ಪಿಸಿಕೊಂಡಿದ್ದರು. ವಿದೇಶಿ ಉಗ್ರರ ಜತೆ ಸಂಪರ್ಕದಲ್ಲಿ ಇದ್ದುಕೊಂಡು ದೇಶದಲ್ಲಿ ದುಷ್ಕೃತ್ಯ ಎಸಗುತ್ತಿದ್ದರು. ಮುಸಾವೀರ್ ಸಹಚರರ ವಿಚಾರಣೆಯ ಹೊತ್ತಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ, ಕೊಲ್ಕತ್ತ ಹೋಟೆಲ್​ನಲ್ಲಿ ಅಡಗಿದ್ದ ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಎನ್​ಐಎ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳ ಉಗ್ರರ ಅಡಗುತಾಣವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಅದೇನಿದ್ದರೂ, ಆರೋಪಿಗಳ ಬಂಧನ ಮಹತ್ವದ ಮುನ್ನಡೆಯಾಗಿದ್ದು, ಎನ್​ಐಎ, ಸ್ಥಳೀಯ ಪೊಲೀಸರ ಸಹಕಾರವನ್ನು ಶ್ಲಾಘಿಸಿರುವುದು ಗಮನಾರ್ಹ.
ಪಂಜಾಬ್ ಪ್ರಾಂತ್ಯದ ಪೊಲೀಸರ ಮೇಲೆ ಪಾಕ್ ಸೇನೆಯಿಂದ ಹಲ್ಲೆ! ಅಷ್ಟಕ್ಕೂ ಆಗಿದ್ದೇನು..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 1 =
Remember me
