ಮೇಲುಕೋಟೆ:ಇಂದಿನಿಂದ ಶಾಲೆಗಳು ಆರಂಭವಾಗಿವೆ. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದರ ಪ್ರವೇಶಾತಿ ಪ್ರಕಟಣೆ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ವಿಶೇಷವೆಂದರೆ ಈ ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವ ಒಂದನೇ ತರಗತಿ ಮಕ್ಕಳಿಗೆ ಬೆಳ್ಳಿಯ ನಾಣ್ಯ ಕೊಡುವ ಜತೆಗೆ ಸರ್ಕಾರ ನೀಡುವ ಉಚಿತ ಕೊಡುಗೆಗಳನ್ನು ನೀಡಲಾಗುತ್ತಿದೆ. ಎಲ್ಲ ಮಕ್ಕಳಿಗೂ ವರ್ಷಕ್ಕೆ ಆಗುವಷ್ಟು ಉಚಿತ ನೋಟ್​ ಪುಸ್ತಕಗಳು, ಶಾಲಾಬ್ಯಾಗ್​, ಲೇಖನ ಸಾಮಗ್ರಿ, ಜಾಮೆಟ್ರಿ, ಐಡೆಂಟಿಟಿ ಕಾರ್ಡ್​, ಬೆಲ್ಟ್, ಹಾಗೂ 5, 6, 7ನೇ ತರಗತಿಯವರಿಗೆ ಉಚಿತ ಶೈಕ್ಷಣಿಕ ಪ್ರವಾಸ, ಸುತ್ತಮುತ್ತಲ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ ನೀಡಲಾಗುತ್ತಿದೆ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿದೆ. ಅಂದಹಾಗೆ ಇದು ಶತಮಾನದ ಇತಿಹಾಸವಿರುವ ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹೆಸರಲ್ಲಿ ಪ್ರಕಟವಾಗಿರುವ ಪೋಸ್ಟರ್​. ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಈ ಶಾಲೆ ವಿಭಿನ್ನವಾಗಿ ನಿಲ್ಲುತ್ತಿದೆ.
ಈ ಶಾಲೆಯಲ್ಲಿ ಆಂಗ್ಲಮಾಧ್ಯಮದ 1ರಿಂದ 3ನೇ ಹಾಗೂ ಕನ್ನಡ ಮಾಧ್ಯಮದ 1ರಿಂದ 7 ತರಗತಿಗಳಿಗೆ ಪ್ರವೇಶ ಆರಂಭವಾಗಿದ್ದು, ಮಕ್ಕಳ ಪ್ರವೇಶಕ್ಕಾಗಿ ಸಾಮಾಜಿಕ ಜಾಲತಾಣದ ಮೂಲಕ ಒಂದು ವಿಶೇಷ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಬರಲು ಪ್ರೇರೇಪಿಸಲಾಗುತ್ತಿದೆ.ಈಗಾಗಲೇ ಶಾಲೆಯು ಉತ್ತಮವಾದ ಡೆಸ್ಕ್​ಗಳು, ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಮತ್ತು ಕ್ರೀಡಾ ಸಾಮಗ್ರಿ ಹೊಂದಿದೆ. ಏಳು ವರ್ಷಗಳಿಂದ ಅನಿವಾಸಿ ಭಾರತೀಯ ಡಾ.ರಾಮಕೃಷ್ಣ ಅವರ ಸಹಕಾರದಲ್ಲಿ ಹಳ್ಳಿಯಿಂದ ಬರುವ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಎಲ್ಲ ಪ್ರಯತ್ನಗಳಿಂದಾಗಿ 2012ರಲ್ಲಿ 32 ಮಕ್ಕಳೊಂದಿಗೆ ಮುಚ್ಚುವ ಹಂತದಲ್ಲಿದ್ದ ಶಾಲೆ ಇದೀಗ 110 ಮಕ್ಕಳ ಕಲಿಯುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕರು.
ಈ ವರ್ಷದಿಂದ ಸ್ಮಾರ್ಟ್​ ಕ್ಲಾಸ್​ ಮತ್ತು ಕಂಪ್ಯೂಟರ್​ ತರಗತಿಗಳು ಆರಂಭವಾಗಲಿದೆ. ಇಬ್ಬರು ಆಂಗ್ಲ ವಿಷಯ ತಜ್ಞರು ಸ್ಪೋಕನ್​ ಇಂಗ್ಲಿಷ್​ ತರಬೇತಿ ನೀಡಲಿದ್ದಾರೆ. ನಿಮ್ಮ ಮಕ್ಕಳನ್ನು ಯಾವುದೇ ಖರ್ಚಿಲ್ಲದೆ ಶತಮಾನದ ಶಾಲೆಗೆ ಸೇರಿಸಿ ಎಂದು ಮುಖ್ಯ ಶಿಕ್ಷಕ ಸಂತಾನರಾಮನ್​, ಸಹಶಿಕ್ಷಕರು ಮತ್ತು ಎಸ್​ಡಿಎಂಸಿ ಅಧ್ಯಕ್ಷ ದೇವರಾಜು ಮನವಿ ಮಾಡಿದ್ದಾರೆ.
ಹನಿಟ್ರ್ಯಾಪ್​ಗೆ ಬೆಂಗಳೂರಲ್ಲಿ ಬಿಜೆಪಿ ಮುಖಂಡ ಬಲಿ! ಪತ್ನಿಗೆ ಸಿಕ್ಕ ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ವಾಕಿಂಗ್​ ವೇಳೆ ಅಪಘಾತ: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
