ಯುರೋವನ್ನು ಅಳವಡಿಸಿಕೊಳ್ಳಲು ಬಯಸುವವರ ಹಣದುಬ್ಬರ, ಸಾಲ ಮತ್ತು ಕೊರತೆಯ ಮಟ್ಟ ಕೆಲವು ಮಿತಿಯಲ್ಲಿರಬೇಕಾಗಿತ್ತು. ಆದರೆ ಯುರೋಪಿಯನ್ ಯೂನಿಯನ್​ನ 11 ಸದಸ್ಯ ದೇಶಗಳು ಮಾತ್ರ ಅರ್ಹತೆ ಪಡೆದವು. ಅಂತಿಮವಾಗಿ 1999ರ ಜನವರಿ 1 ರಂದು ಯುರೋ ನಿಜವಾಯಿತು. ಆರಂಭದಲ್ಲಿ ಮೊದಲ ಮೂರು ವರ್ಷಗಳಲ್ಲಿ ಇದು ‘ಅದೃಶ್ಯ’ ಕರೆನ್ಸಿಯಾಗಿದ್ದು, ಲೆಕ್ಕಪತ್ರ ಉದ್ದೇಶಗಳಿಗಾಗಿ ಮತ್ತು ಎಲೆಕ್ಟ್ರಾನಿಕ್ ಪಾವತಿಗಳಿಗೆ ಮಾತ್ರ ಬಳಸಲಾಗುತ್ತಿತ್ತು.
ಅಮೆರಿಕನ್ ಡಾಲರ್ ನಂತರ ಅಂತಾರಾಷ್ಟ್ರೀಯ ಕರೆನ್ಸಿಗಳಲ್ಲಿ ಒಂದಾದ ಯುರೋ 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದು ಜಾಗತಿಕವಾಗಿ ಎರಡನೇ ಅತಿದೊಡ್ಡ ಮತ್ತು ಹೆಚ್ಚು ವಹಿವಾಟಿನ ಕರೆನ್ಸಿಯಾಗಿದೆ. ಎರಡನೇ ವಿಶ್ವ ಮಹಾಯುದ್ಧ ಅಂತ್ಯಗೊಂಡ ನಂತರ ಯುರೋಪ್ ಅನ್ನು ರಾಜಕೀಯ ಮತ್ತು ಆರ್ಥಿಕವಾಗಿ ಏಕೀಕರಣಗೊಳಿಸಲು ಹಲವು ಪ್ರಯತ್ನಗಳು ನಡೆದವು. ಅಂತಿಮವಾಗಿ 1992ರಲ್ಲಿ 50 ರಾಷ್ಟ್ರಗಳ ಪೈಕಿ 27 ಯುರೋಪ್​ನ ಯೂನಿಯನ್ ಉಖಿ ಒಕ್ಕೂಟ ಸೇರಿವೆ. ಇದರ ಭಾಗವಾಗಿ ಏಕರೂಪದ ಕರೆನ್ಸಿ, ಪೌರತ್ವ ಮತ್ತು ವಿದೇಶಿ ನೀತಿಗಳನ್ನು ಪ್ರಸ್ತಾಪಿಸಿದವು. ಈ ಮೂರು ಅಂಶಗಳಲ್ಲಿ ಏಕರೂಪದ ಕರೆನ್ಸಿ ರಚಿಸುವುದು ಬಹುಮುಖ್ಯ ಕಲ್ಪನೆಯಾಗಿತ್ತು. ಆದರೆ ಈ ಹಿಂದೆಯೇ ಆಯ್ದ ಯುರೋಪಿಯನ್ ದೇಶಗಳು ಎರಡು ಸಾಮಾನ್ಯ ಕರೆನ್ಸಿ ಒಕ್ಕೂಟಗಳನ್ನು ರಚಿಸಿದವು.
1) ಲ್ಯಾಟಿನ್ ಮಾನಿಟರಿ ಯೂನಿಯನ್ (LMU) ಮತ್ತು 2)ಸ್ಕಾ್ಯಂಡಿನೇವಿಯನ್ ಮಾನಿಟರಿ ಯೂನಿಯನ್ (SMU). ಆದರೆ ಮಹಾಯುದ್ಧದ ಸಂದರ್ಭ ಇವುಗಳನ್ನು ಕೈಬಿಡಲಾಯಿತು. ವಿಶ್ವಯುದ್ಧದ ನಂತರ 1951ರಲ್ಲಿ ಯುರೋಪಿಯನ್ ಕಲ್ಲಿದ್ದಲು ಮತ್ತು ಉಕ್ಕಿನ ಸಮಿತಿ (ECSC) ಹಾಗೂ ಉಕ್ಕಿನ ಕೈಗಾರಿಕೆಗಳನ್ನು ಸಾಮಾನ್ಯ ಮಾರುಕಟ್ಟೆಗೆ ಸಂಯೋಜಿಸಲು ಔಪಚಾರಿಕವಾಗಿ ಪ್ಯಾರಿಸ್ ಒಪ್ಪಂದವಾಗಿ ಬೆಲ್ಜಿಯಂ, ಫ್ರಾನ್ಸ್, ಇಟಲಿ, ಲಕ್ಸೆಂಬರ್ಗ್, ನೆದರ್ಲೆಂಡ್ ಮತ್ತು ಪಶ್ಚಿಮ ಜರ್ಮನಿ ದೇಶಗಳು ಸದಸ್ಯರಾಗಿ ಅಂತಿಮವಾಗಿ ಯುರೋಪಿಯನ್ ಒಕ್ಕೂಟದ ರಚನೆಗೆ ಕಾರಣವಾಯಿತು.
ಈ ಎಲ್ಲ ಬೆಳವಣಿಗೆ ಗಮನಿಸಿದ ಖ್ಯಾತ ಅರ್ಥಶಾಸ್ತ್ರಜ್ಞ ರಾಬರ್ಟ್ ಮುಂಡೆಲ್ 1961ರಲ್ಲಿ ಕರೆನ್ಸಿ ಒಕ್ಕೂಟಕ್ಕೆ ಆರ್ಥಿಕ ತತ್ವಗಳಾದ ಪ್ರತ್ಯೇಕ Business Cycles ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಬೆಳವಣಿಗೆ ಭಿನ್ನವಿದ್ದಾಗ ಪ್ರತ್ಯೇಕ ಕರೆನ್ಸಿಗಳು ಸರಿಹೊಂದಿಸುತ್ತವೆ ಹಾಗೂ stabalisation ನೀತಿಗಳ ಅಗತ್ಯವಿರುತ್ತದೆ ಎಂದರು. ಮುಂದುವರಿದು ಪ್ರದೇಶಗಳು ಒಂದೇ ರೀತಿಯ ವ್ಯಾಪಾರ ಚಕ್ರಗಳನ್ನು (Business Cycles) ಹೊಂದಿದ್ದರೆ ಮತ್ತು ಅದೇ ರೀತಿಯ economics shock ಎದುರಿಸಿದ್ದರೆ ಅಂತಹ ದೇಶಗಳು ಸಾಮಾನ್ಯ ಕರೆನ್ಸಿ ಹೂಂದಬಹುದು. ಅಲ್ಲದೆ ಆ ಪ್ರದೇಶಗಳು ಹೆಚ್ಚಿನ labour mobility ಮತ್ತು ವೇತನ ಸಾಮ್ಯತೆ ಹೊಂದುವುದು ಅವಶ್ಯ ಎಂದು ಮುಂಡೆಲ್ ಪ್ರತಿಪಾದಿಸಿದ್ದರು. ಅದಕ್ಕೆ ನಿದರ್ಶನ ಎಂಬಂತೆ 1973-79ರ ತೈಲ ಬಿಕ್ಕಟ್ಟು ಅಂತಾರಾಷ್ಟ್ರೀಯ ಹಣದುಬ್ಬರದ ಮತ್ತು ಇತರ ಆಘಾತಗಳ ಪರಿಣಾಮ 1979ರಲ್ಲಿ ಯುರೋಪಿಯನ್ ಮಾನಿಟರಿ ಸಿಸ್ಟಮ್ (ems) ಅನ್ನು ಪ್ರಾರಂಭಿಸಲಾಯಿತಾದರೂ ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಮುಂದುವರಿದು 1989ರಲ್ಲಿ ಜಾಕ್ವೆಸ್ ಡೆಲೋರ್ಸ್ ಅಧ್ಯಕ್ಷತೆಯಲ್ಲಿ ಡೆಲೋರ್ಸ್ ಕಮಿಟಿ ಫಾರ್ ದಿ ಸ್ಟಡಿ ಆಫ್ ಎಕನಾಮಿಕ್ ಆಂಡ್ ಮಾನಿಟರಿ ಯೂನಿಯನ್ ಮತ್ತು ಆರ್ಥಿಕ ವಿತ್ತೀಯ ಒಕ್ಕೂಟ (emu) ಅನ್ನು ಹೇಗೆ ಸಾಧಿಸಬಹುದು ಎಂಬುದನ್ನು ಡೆಲೋರ್ಸ್ ವರದಿ ವಿವರಿಸಿತು. ಆರಂಭದಲ್ಲಿ ವೈಯಕ್ತಿಕ ರಾಷ್ಟ್ರೀಯ ಕರೆನ್ಸಿಗಳನ್ನು ಬದಲಿಸಲು ಹೊಸ ಯುರೋ ಕರೆನ್ಸಿ ರಚನೆಯನ್ನು 1992ರ ಮಾಸ್ಟ್ರಿಚ್ ಒಪ್ಪಂದದಲ್ಲಿ ಪ್ರಸ್ತಾಪಿಸಿ ಸಾಧಿಸಲಾಯಿತು. 1990 ರಿಂದ 1999ರವರೆಗೆ ಮೂರು ಹಂತದ ಪೂರ್ವಸಿದ್ಧತಾ ಅವಧಿಯನ್ನು ಪ್ರಸ್ತಾಪಿಸಿತು, ಇದನ್ನು ಯುರೋಪಿಯನ್ ನಾಯಕರು ಒಪ್ಪಿಕೊಂಡು ಮೊದಲು ಸಾಮಾನ್ಯ ಕರೆನ್ಸಿ ಪರಿಚಯಿಸುವ ಮೂಲಕ ವಿತ್ತೀಯ ನೀತಿ ಕಾರ್ಯವನ್ನು ಹೊಸದಾಗಿ ಸ್ಥಾಪಿಸಲಾದ ಯುರೋಪಿಯನ್ ಸೆಂಟ್ರಲ್ ಬ್ಯಾಂಕಿಗೆ ಒಪ್ಪಿಸುವುದಾಗಿತ್ತು. ಯುರೋವನ್ನು ಅಳವಡಿಸಿಕೊಳ್ಳಲು ಬಯಸುವ ಸದಸ್ಯರು ಹಣದುಬ್ಬರ, ಸಾಲ ಮತ್ತು ಕೊರತೆಯ ಮಟ್ಟ ಕೆಲವು ಮಿತಿಯಲ್ಲಿರಬೇಕಾಗಿತ್ತು. ಆದರೆ ಉಖಿನ 11 ಸದಸ್ಯ ದೇಶಗಳು ಮಾತ್ರ ಅರ್ಹತೆ ಪಡೆದವು. ಅವುಗಳೆಂದರೆ ಆಸ್ಟ್ರಿಯಾ, ಬೆಲ್ಜಿಯಂ, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ, ಲಕ್ಸೆಂಬರ್ಗ್, ನೆದರ್ಲೆಂಡ್, ಪೋರ್ಚುಗಲ್ ಮತ್ತು ಸ್ಪೇನ್. ಅಂತಿಮವಾಗಿ 1999ರ ಜನವರಿ 1 ರಂದು ಯುರೋ ನಿಜವಾಯಿತು. ಆರಂಭದಲ್ಲಿ ಮೊದಲ ಮೂರು ವರ್ಷಗಳಲ್ಲಿ ಇದು ‘ಅದೃಶ್ಯ’ ಕರೆನ್ಸಿಯಾಗಿದ್ದು, ಲೆಕ್ಕಪತ್ರ ಉದ್ದೇಶಗಳಿಗಾಗಿ ಮತ್ತು ಎಲೆಕ್ಟ್ರಾನಿಕ್ ಪಾವತಿಗಳಿಗೆ ಮಾತ್ರ ಬಳಸಲಾಗುತ್ತಿತ್ತು. ನಾಣ್ಯಗಳು ಮತ್ತು ನೋಟುಗಳನ್ನು 2002ರ ಜನವರಿ 1 ರಂದು ಪ್ರಾರಂಭಿಸಲಾಯಿತು. ನಂತರ ಇತರ ಒಂಭತ್ತು ದೇಶಗಳಾದ ಗ್ರೀಸ್, ಕ್ರೊಯೇಷಿಯಾ, ಸೈಪ್ರಸ್, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ಮಾಲ್ಟಾ, ಸ್ಲೋವಾಕಿಯಾ ಮತ್ತು ಸ್ಲೊವೇನಿಯಾ ಯೂರೋ ಜೋನ್ಗೆ ಸೇರಿಕೊಂಡಿವು. ಆರಂಭದಲ್ಲಿ ಅಂದರೆ 1999ರಲ್ಲಿ ವಿದೇಶಿ ವಿನಿಮಯದಲ್ಲಿ ಯುರೋದ ಪಾಲು 2009ರಲ್ಲಿ ಶೇ.18 ರಿಂದ 27ಕ್ಕೆ ಏರಿತು. ಇದೆಲ್ಲದರ ಮೊದಲು ಅಮೆರಿಕದ ಖಿಖ ಡಾಲರ್ ಪ್ರಾಬಲ್ಯವನ್ನು ಎದುರಿಸುವುದು ಯುರೋದ ಉದ್ದೇಶವಾಗಿತ್ತು. ಅದೇ ಅವಧಿಯಲ್ಲಿ ಖಿಖ ಡಾಲರ್ ವಹಿವಾಟಿನ ಪಾಲು ಶೇ.70 ರಿಂದ 58ಕ್ಕೆ ಕುಸಿದರೂ ಇಂದಿಗೂ ಡಾಲಡ್ ವಿಶ್ವ ವ್ಯಾಪಾರದ ಆಮದು ಮತ್ತು ರಫ್ತು ಇನ್ವಾಯ್ಸಿಂಗ್​ನ ಒಂದು ಪ್ರಬಲ ಕರೆನ್ಸಿಯಾಗಿದೆ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್​ನಲ್ಲಿ ಡಾಲರ್ಸ್ ಪಾಲು ಶೇ.70 ಕ್ಕಿಂತ ಹೆಚ್ಚಿದೆ. ಈ ಪ್ರತಿಕೂಲಗಳ ಹೊರತಾಗಿಯೂ ಯುರೋಪಿನ 20 ಸದಸ್ಯರು ಯುರೋ ಅಳವಡಿಸಿಕೊಂಡಿದ್ದಾರೆ. ಪ್ರಸ್ತುತ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 5, 10, 20, 50 ಮತ್ತು 100, 200, 500 ಯುರೋ ಬ್ಯಾಂಕಿನ ನೋಟುಗಳನ್ನು ಚಲಾವಣೆಗೆ ತಂದಿದೆ ಮತ್ತು ಈ ಕರೆನ್ಸಿಯು 350 ಮಿಲಿಯನ್​ಗೂ ಹೆಚ್ಚು ಜನರ ಬಳಿ ಚಲಾವಣೆಯಲ್ಲಿವೆ. ಬದಲಾಗುವ ಆರ್ಥಿಕ ಚಕ್ರಗಳ ಪರಿಣಾಮ ಮತ್ತು ಅಮೆರಿಕದಲ್ಲಿ ಆರಂಭವಾದ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಶೀಘ್ರವಾಗಿ ಯುರೋಪ್​ಗೂ ಹರಡಿ ಅಲ್ಲಿನ ಕೇಂದ್ರ ಬ್ಯಾಂಕಿನ ಔಟಟಠಛಿ Mಟ್ಞಛಿಠಿಚ್ಟಢ ಕಟ್ಝಜ್ಚಿಢ ಪರಿಣಾಮ ಇಛಿಛಜಿಠಿ ಆಜ್ಞಿಜ ಅಂದರೆ ದೀರ್ಘಾವಧಿಯ ಕಡಿಮೆ ಬಡ್ಡಿ ದರದ ಸಾಲವು ಹಲವಾರು ಸಾಲಗಳಿಗೆ ಕಾರಣವಾಗಿ ಹೆಚ್ಚಿನ ಸಾಲದ ಚಕ್ರವಾಗಿ ಬದಲಾಗಿ ಉMಖಿ ಸದಸ್ಯ ಆರ್ಥಿಕತೆಗಳು ಉಟ್ಞಟಞಜ್ಚಿ ಖಜಟ್ಚkಠ ಅನುಭವಿಸಿದವು. ಈ ಯೂರೋವನ್ನು ಅಳವಡಿಸಿಕೊಳ್ಳದ ಯುನೈಟೆಡ್ ಕಿಂಗ್ಡಮ್ 2016 ರಲ್ಲಿ ಉಖಿ ಅನ್ನು ತೊರೆದ ಪರಿಣಾಮ ಯುರೋಪಿಯನ್ ಏಕೀಕರಣ ಯೋಜನೆಯ ವೇಗ ಕುಗ್ಗಿದೆ.
2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಡೆಬ್ಯೂ ನಿರ್ದೇಶಕರ ಜತೆ ಕೆಲಸ ಮಾಡೋದಿಲ್ಲ! ನಟ ವಿಜಯ ದೇವರಕೊಂಡ ಹೇಳಿಕೆಯ ಹಿಂದಿದೆ ಈ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
