ಕೊಪ್ಪಳ:ಆಟ- ಪಾಠದ ನೆಪದಲ್ಲಿ ಮಕ್ಕಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಶಿಕ್ಷಕ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದಿದ್ದಾನೆ. ಮಕ್ಕಳ‌ ಗುಪ್ತಾಂಗ ಮುಟ್ಟಿ ವಿಕೃತ ಆನಂದ ಪಡೆಯುತ್ತಿದ್ದ ಈ ಶಿಕ್ಷಕ, ಕೆಲ ಮಹಿಳೆಯರನ್ನೂ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇಬ್ಬರು ಪರಸ್ತ್ರೀಯರ ಜತೆಗಿನ ಕಾಮದಾಟದ ದೃಶ್ಯವನ್ನ ವಿಡಿಯೋ ಮಾಡಿಕೊಂಡ ಈತ, ಬಳಿಕ ವರಸೆ ಬದಲಿಸಿದ್ದಾನೆ. ಅಶ್ಲೀಲ ವಿಡಿಯೋ ತೋರಿಸಿ ಆ ಮಹಿಳೆಯರಿಗೆ ಬೆದರಿಕೆ ಹಾಕಿರುವ ಈತ, ಅದೇ ಮಹಿಳೆಯರ ಮೂಲಕ ಮತ್ತಷ್ಟು ಮಹಿಳೆಯರನ್ನ ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಾನೆ… ಸುಮಾರು 40 ಮಹಿಳೆಯರನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇಂತಹ ಹೇಯ ಕೃತ್ಯ ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಬೆಳಕಿಗೆ ಬಂದದಿದೆ. ಪಕ್ಕದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಕೆಸಲ ಮಾಡುತ್ತಿದ್ದ ಶಿಕ್ಷಕ ಅಜರುದ್ದೀನ್​ ಆರೋಪಿ. ಈತ ಪರಸ್ತ್ರೀಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್​ ಆಗಿದ್ದು, ಕೆಲಸದಿಂದ ಅಮಾನತು ಮಾಡಲಾಗಿದೆ. ಈತನ ಕಾಮದಾಟದ ವಿಚಾರ ಬಯಲಾಗುತ್ತಿದ್ದಂತೆ ಸಿಟ್ಟಿಗೆದ್ದ ಸಾರ್ವಜನಿಕರು ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಅವರ ಹತ್ತಿರ ಹೋಗುತ್ತಿದ್ದ ಈತ, ಅವರ ಗುಪ್ತಾಂಗ ಮುಟ್ಟಿ ದೈಹಿಕ ಕಿರುಕುಳ ಕೊಡುತ್ತಿದ್ದ. ಮಕ್ಕಳಿಂದಲೇ ಬಟ್ಟೆ ಬಿಚ್ಚಿಸಿ ವಿಕೃತ ಆನಂದ ಪಡೆಯುತ್ತಿದ್ದನಂತೆ. ಇನ್ನು ಇಬ್ಬರು ಮಹಿಳೆಯರನ್ನ ಪರಿಚಯಿಸಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಈತ, ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯರನ್ನ ಲೈಂಗಿಕವಾಗಿ ಬಳಿಸಿಕೊಂಡಿದ್ದನ್ನ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ ಶಿಕ್ಷಕ, ಬಳಿಕ ಆ ಮಹಿಳೆಯರಿಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದ. ಮತ್ತಷ್ಟು ಮಹಿಳೆಯರನ್ನು ನನಗೆ ಪರಿಚಯಿಸಬೇಕು, ಅವರೊಂದಿಗೆ ಲೈಂಗಿಕಸಂಪರ್ಕ ಬೆಳೆಸಲು ನನಗೆ ಸಹಕರಿಸಬೇಕು, ಇಲ್ಲವಾದಲ್ಲಿ ನಿಮ್ಮೊಂದಿಗೆ ನಾನಿದ್ದ ವಿಡಿಯೋವನ್ನು ವೈರಲ್​ ಮಾಡುವೆ ಎಂದು ಹೆದರಿಸಿದ್ದನಂತೆ. ಇದೇ ರೀತಿ ಈತ ಸುಮಾರು 40 ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರತಿನಿತ್ಯ ಮಕ್ಕಳೊಂದಿಗೆ ಆಟವಾಡುವ ನೆಪದಲ್ಲಿ ತಡರಾತ್ರಿವರೆಗೂ ಕಾಲಕಳೆಯುತ್ತಿದ್ದ ಈ ಶಿಕ್ಷಕ, ಮಗುವೊಂದರ ತಲೆಯ ಮೇಲೆ ಗ್ಲಾಸ್​ ಇಟ್ಟು, ಎರಡೂ ಕೈಗಳನ್ನು ಮೇಲೆತ್ತಲು ಈತ ತಿಳಿಸಿದ್ದು, ಮಗು ಶಿಕ್ಷಕ ಹೇಳಿದಂತೆ ಮಾಡುವಾಗ ಬೇರೆ ಮಕ್ಕಳಿಂದ ಚಡ್ಡಿ ಕಳಚಿಸುತ್ತಾನೆ. ಬಳಿಕ ಕಟ್ಟಿಗೆಯಿಂದ ಗುಪ್ತಾಂಗಕ್ಕೆ ತಿವಿದು, ವಿಕೃತ ಆನಂದ ಪಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಮಗು ಅತ್ತರೂ ಬಿಡದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ, ಈತ ಬೇರೆ ಬೇರೆ ಮಹಿಳೆಯರೊಂದಿಗಿನ ಕಾಮದಾಟವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ್ದಾನೆ. ಇತ್ತೀಚೆಗೆ ಶಿಕ್ಷಕನ ಮೊಬೈಲ್​ ಕಳೆದಿದ್ದು ಯಾರದೋ ಕೈಗೆ ದೊರೆತಿದೆ. ಮೊಬೈಲ್​ನ ಮೆಮೋರಿ ಕಾರ್ಡ್​ ತೆಗೆದಾಗ ಶಿಕ್ಷಕನ ಕರ್ಮಕಾಂಡ ಹೊರಬಂದಿದೆ.
ಶಿಕ್ಷಕನ ಸೆಕ್ಸ್​ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಈತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಂಧನ ಭೀತಿಯಲ್ಲಿ ಈತ ತಲೆಮರೆಸಿಕೊಂಡಿದ್ದಾನೆ. ಆರೋಪಿ ‌ಅಜರುದ್ದೀನ್​ನನ್ನು ಕೆಲಸದಿಂದ ಬಿಇಒ ಶರಣಪ್ಪ ವಟಗಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

ತುಮಕೂರಲ್ಲಿ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕನಿಗೆ ಆಯ್ತು ತಕ್ಕ ಶಾಸ್ತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − eight =
Remember me
