ವಿಜಯಪುರ:ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಅಕ್ಕ-ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಜೋಡಿ ಕೊಲೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ರಾಜಶ್ರೀ ಶಂಕರಗೌಡ ಬಿರಾದಾರ(32) ಮತ್ತು ಈಕೆಯ ತಮ್ಮ ನಾನಾಗೌಡ ಶ್ರೀಮಂತ ಯರಗಲ್(29) ಕೊಲೆಯಾದವರು. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ರಾಜಶ್ರೀ ಅವರ ಪತಿ ಶಂಕರಗೌಡ ಅಪ್ಪಾಸಾಹೇಬ ಬಿರಾದಾರ ಸೇರಿ ನಾಲ್ವರು ಈ ಕೃತ್ಯ ಎಸಗಿದ್ದಾರೆ. ಐದು ವರ್ಷಗಳ ಹಿಂದೆ ರಾಜಶ್ರೀ ಹಾಗೂ ಶಂಕರಗೌಡ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳದ ವರ್ಷದಿಂದ ದಂಪತಿ ನಡುವೆ ಕಲಹ ಉಂಟಾಗಿತ್ತು. ಬೇಸತ್ತ ರಾಜಶ್ರೀ, ಗಂಡನ ಮನೆ ತೊರೆದು ತವರು ಮನೆಯಲ್ಲೇ ನೆಲೆಸಿದ್ದಳು.
ಇಂದು(ಸೋಮವಾರ) ತಮ್ಮನೊಂದಿಗೆ ರಾಜಶ್ರೀ, ತನ್ನ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಉದ್ದೇಶದಿಂದ ಗಂಡನೂರಿನ ಶಾಲೆಯಿಂದ ವರ್ಗಾವಣೆ ಪ್ರಮಾಣ‌ಪತ್ರ ಪಡೆದು ವಾಪಸ್​ ಹಿಂತಿರುಗುತ್ತಿದ್ದಳು. ಬೂದಿಹಾಳ ಪಿಎಚ್ ಗ್ರಾಮದಿಂದ ಓತಿಹಾಳ ಕಡೆಗೆ ಹೋಗುವ ಮಾರ್ಗದ ಹಳ್ಳದ ಹತ್ತಿರ ದಾಳಿ ಮಾಡಿದ ಆರೋಪಿಗಳು ಅಕ್ಕ-ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಭರತನಾಟ್ಯ ಮೊದಲ ಪ್ರದರ್ಶನದಲ್ಲೇ ಮೋಡಿ ಮಾಡಿದ ಅಂಬಾನಿ ಭಾವಿ ಸೊಸೆ! ಅತ್ತೆಯಂತೆ ಸೊಸೆಯೂ ಉತ್ತಮ ಕಲಾವಿದೆ

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + four =
Remember me
