ದಾವಣಗೆರೆ:ನಗರದ ಆಂಜನೇಯ ಕಾಟನ್ ಮಿಲ್‌ ಪ್ರದೇಶದಲ್ಲಿ ಸಹೋದರಿಯರಿಬ್ಬರು ಅನುಮಾನಸ್ಪದವಾಗಿ ಮನೆಯಲ್ಲಿ ಮೃತಪಟ್ಟಿದ್ದು, ಸಾವಿಗೂ ಮುನ್ನ ಆ ಮನೆಗೆ ಬಂದು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗೌರಮ್ಮ(34) ಮತ್ತು ರಾಧಮ್ಮ(32) ಮೃತ ಸಹೋದರಿಯರು. ಕೂಡ್ಲಿಗಿ ತಾಲೂಕು ಬೆನಕನಹಳ್ಳಿ ಗ್ರಾಮದ ಇವರಿಬ್ಬರೂ ಆಂಜನೇಯ ಕಾಟನ್ ಮಿಲ್​ನಲ್ಲಿ ಕಾರ್ಮಿಕರಾಗಿದ್ದರು. ಗೌರಮ್ಮನ ಜತೆ ತಂಗಿ ರಾಧಮ್ಮ ಕಳೆದ 10 ವರ್ಷದಿಂದ ವಾಸವಿದ್ದಳು. ಗೌರಮ್ಮಗೆ ಮದುವೆ ಆಗಿದ್ದು, ಗಂಡ ಮಂಜುನಾಥ ಬೇರೆಡೆ ಕೆಲಸ ಮಾಡುತ್ತಿದ್ದ.
ಗೌರಮ್ಮ-ಮಂಜುನಾಥ ನಡುವೆ ಆಗಾಗ ಕಲಹ ನಡೆಯುತ್ತಲೇ ಇತ್ತಂತೆ. ಕಳೆದ ವಾರ ಮನೆಗೆ ಬಂದಿದ್ದ ಮಂಜುನಾಥ ಎರಡು ದಿನ ಇದ್ದು ಹೋಗಿದ್ದ. ಇದಾದ ಮೇಲೆ ಐದಾರು ದಿನಗಳಿಂದ‌ ಮನೆಯ ಬಾಗಿಲು ತೆರೆದಿರಲಿಲ್ಲ. ಅಕ್ಕ-ತಂಗಿಯ ಸುಳಿವೂ ಇರಲಿಲ್ಲ. ಅನುಮಾನಗೊಂಡ ಸ್ಥಳೀಯರು ಅವರ ಸಂಬಂಧಿಗಳಿಗೆ ಮಾಹಿತಿ‌ ನೀಡಿದ್ದರು. ಮನೆಯ ಬಾಗಿಲು ಒಡೆದು ತೆರೆದಾಗ ಸಹೋದರಿಯರ ಶವಗಳು ಪತ್ತೆಯಾಗಿವೆ. ಮೃತದೇಹಗಳು ಊದಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿದ್ದವು. ಕಳೆದ ವಾರ ಮನೆಗೆ ಬಂದು ಹೋಗಿದ್ದ ಮಂಜುನಾಥನ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಆ ರಾತ್ರಿ ಏನಾಯ್ತು ಎಂಬುದು ಪೊಲೀಸ್​ ತನಿಖೆ ಬಳಿಕ ಬಯಲಾಗಬೇಕಿದೆ. ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಶುಕ್ರವಾರದ ಸಂತೆಯಲ್ಲಿ ಕುರಿ ಮಾರಲೆಂದು ಹೋಗುತ್ತಿದ್ದ ತಂದೆ-ಮಗ ಸಾವು

ನಾವು ಸನ್ಯಾಸಿಗಳಲ್ಲ… ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ: ಈಶ್ವರಪ್ಪ

ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 3 =
Remember me
