ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತದ ಮಹತ್ವದ ಮಾಹಿತಿ ಇದ್ದ ಪುಟಗಳು ಕಾಣೆಯಾಗಿವೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಶನಿವಾರ ಸರ್ಕಾರಿ ರಜೆ ಇದ್ದರೂ ಮುಡಾ ಸಿಬ್ಬಂದಿ ರಜೆ ಪಡೆಯದೆ ನಾಪತ್ತೆಯಾಗಿರುವ ಪುಟಗಳ ಶೋಧದಲ್ಲಿ ತೊಡಗಿದ್ದರು.
ಮುಡಾ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿರುವ ವಿವಿಧ ಬಡಾವಣೆಗಳ 600 ನಿವೇಶನಗಳಿಗೆ ಸಂಬಂಧಿಸಿದ 300 ಪುಟಗಳು ಕಾಣೆಯಾಗಿವೆ. ಪ್ರತಿ ಪುಟದಲ್ಲಿ ಎರಡು ನಿವೇಶನಗಳ ದಾಖಲೆಗಳು ಮಾತ್ರ ಇವೆ. ಉಳಿದ ಈ ಪುಟಗಳು ಕಾಣೆಯಾಗಿದ್ದು ಹೇಗೆ? ಇದರಲ್ಲಿ ಸಿಬ್ಬಂದಿಯ ಕೈವಾಡವೇನಾದರು ಇದೆಯೇ ಎಂಬ ಅನುಮಾನಗಳು ಪ್ರಾರಂಭಗೊಂಡಿದೆ.
ಕಾಣೆಯಾಗಿರುವ ಪುಟಗಳ ಹುಡುಕಾಟದಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ. ನಟೇಶ್​ ನಿರ್ದೇಶನದ ಮೇರೆಗೆ 40 ಸಿಬ್ಬಂದಿ ತೊಡಗಿದ್ದಾರೆ. ಮುಡಾ ಕಾರ್ಯದರ್ಶಿ ವೆಂಕಟರಾಜು ನೇತೃತ್ವದಲ್ಲಿ ವಲಯ ತಹಸೀಲ್ದಾರ್​, ಇಂಜಿನಿಯರ್​ಗಳು, ನಿವೇಶನ ವಿಭಾಗದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಪ್ರಸ್ತುತ ಲಭ್ಯವಿರುವ ಮೂಲ ಕಡತದಲ್ಲಿ ನಿವೇಶ ಹಂಚಿಕೆಯಾಗಿರುವ ವ್ಯಕ್ತಿಗಳ ಹೆಸರು ಹಾಗೂ ಡಿಜಿಟಲ್​ ರೆಕಾರ್ಡ್​ನಲ್ಲಿ ಹೆಸರು ಒಂದೇ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ, ಕಾಣೆಯಾಗಿರುವ ಪುಟಗಳಲ್ಲಿ ಇದ್ದ ಹೆಸರುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ವಿಜಯನಗರ ಪ್ರಥಮ, ದ್ವಿತೀಯ, ತೃತೀಯ ಹಾಗೂ 4ನೇ ಹಂತ ಹಾಗೂ ದೇವನೂರು ಪ್ರಥಮ ಮತ್ತು ದ್ವಿತೀಯ ಹಂತದ ಬಡಾವಣೆಗಳ ನಿವೇಶನಗಳಿಗೆ ಸಂಬಂಧಿಸಿದ ಹೆಚ್ಚಿನ ಪುಟಗಳು ಕಾಣೆಯಾಗಿರುವುದು ಗಮನಾರ್ಹ.
ನಿವೇಶನ ಹಂಚಿಕೆ ಪುಟಗಳು ಕಾಣೆಯಾಗಿರುವ ಬಡಾವಣೆಗಳಲ್ಲಿರುವ ನಿವೇಶನಗಳು ಕೋಟ್ಯಂತರ ರೂ. ಬೆಲೆ ಬಾಳುತ್ತವೆ. ಇಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಈ ಹಿಂದೆ ಅವ್ಯವಹಾರದ ಆರೋಪಗಳು ಕೇಳಿ ಬಂದಿತ್ತು. ಹಗರಣಗಳನ್ನು ಮುಚ್ಚಿ ಹಾಕಲು ಇಂಥದೊಂದು ಪ್ರಯತ್ನ ನಡೆಯಿತೆ ಎಂಬ ಅನುಮಾನ ಮೂಡುವಂತಾಗಿದೆ.
ಏಕೆಂದರೆ, ನಿವೇಶನ ಹಂಚಿಕೆ ಕಡತಗಳು ಎಲ್ಲರ ಕೈಗೂ ಸಿಗುವುದಿಲ್ಲ. ಅಧಿಕಾರಿಗಳ ಸುಪರ್ದಿಯಲ್ಲಿ ಅವುಗಳನ್ನು ಭದ್ರವಾದ ಸ್ಥಳದಲ್ಲಿ ಇರಿಸಲಾಗುತ್ತದೆ. ಹೀಗಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಖಲೆ ಪುಟಗಳು ಕಾಣೆಯಾಗಿರುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ನಿವೇಶನ ಹಂಚಿಕೆಗೆ ಸಂಬಂಧಿಸಿದ ಸಾಕಷ್ಟು ಪುಟಗಳು ಕಾಣೆಯಾಗಿದ್ದು, ಪತ್ತೆ ಹಚ್ಚಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪುಟಗಳು ಹೇಗೆ ಕಾಣೆಯಾಯಿತು ಎಂಬುದು ತಿಳಿದುಬಂದಿಲ್ಲ. ಅವುಗಳು ಸಹಜವಾಗಿ ಕಾಣೆಯಾಯಿತೇ ಅಥವಾ ಅದರ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ಎಂಬುದು ತಿಳಿದಿಲ್ಲ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾಣೆಯಾದ ಪುಟಗಳು ಅಥವಾ ನೈಜ ಫಲಾನುಭವಿಯ ಹೆಸರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ. ಇನ್ನೂ ಪರಿಶೀಲನೆ ಹಂತದಲ್ಲಿ ಇರುವ ಹಿನ್ನೆಲೆಯಲ್ಲಿ ಕಾನೂನು ಮೊರೆ ಹೋಗುವ ಕುರಿತು ಚಿಂತನೆ ನಡೆಸಿಲ್ಲ.| ಡಾ.ಡಿ.ಬಿ. ನಟೇಶ್​ಮುಡಾ ಆಯುಕ್ತ
ಸಿಂದಿಗೆರೆ ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲಿ: ದೇವರಿಗೆ ಗ್ರಾಮಸ್ಥರ ಹರಕೆ!

ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್​ ವೈರಲ್​ ಆಗ್ತಿದೆ ಪ್ರಿಯತಮೆ ಸಂದೇಶ

ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
