ತಾಳಗುಪ್ಪ(ಶಿವಮೊಗ್ಗ):ಪುಸ್ತಕದಲ್ಲಿ ಹಾವಿನ ಚಿತ್ರ, ಹಾವಿನ ಕುರಿತ ಮಾಹಿತಿ ಇರೋದನ್ನು ನೋಡಿದ್ದೇವೆ… ಓದಿದ್ದೇವೆ. ಇನ್ನು ನಿಜವಾದ ಹಾವು ಪುಸ್ತಕದೊಳಗೇ ಕಂಡರೆ..! ಅಬ್ಬಾ, ಬೆಚ್ಚಿಬೀಳೋರೇ ಹೆಚ್ಚು.
ಇಂತಹ ಘಟನೆ ಶಿವಮೊಗ್ಗದ ಸಾಗರ ತಾಲೂಕು ತಲವಾಟದ ಮನೆಯೊಂದರಲ್ಲಿ ನಡೆದಿದೆ. ಟೇಬಲ್​ ಮೇಲೆ ಇಟ್ಟಿದ್ದ ಪುಸ್ತಕದೊಳಗೆ ಹಾವು ಪತ್ತೆಯಾಗಿದೆ. ಟೇಬಲ್​ ಸ್ವಚ್ಛ ಮಾಡಲು ಬಂದ ಮನೆಯ ಗೃಹಿಣಿ ವಿದ್ಯಾ, ಅಲುಗಾಡುತ್ತಿದ್ದ ಪುಸ್ತಕ ಕಂಡು ಅನುಮಾನಗೊಂಡು ನೋಡಿದಾಗ ಕಪ್ಪು ಬಣ್ಣದ ಅರಿಶಿಣ ಪಟ್ಟೆಯುಳ್ಳ ಕಟ್ಟಿಗೆ ಹಾವು (ಯೆಲ್ಲೋ ಸ್ಪಾಟೆಡ್​ ವೂಲ್ಫ್​ ಸ್ನೇಕ್​) ಕಂಡುಬಂದಿದೆ.
ಮನೆಯವರು ಒಮ್ಮೆ ಗಾಬರಿಗೊಂಡರಾದರೂ ನಂತರ ಉರುಗ ಪ್ರೇಮಿಗಳನ್ನು ಕರೆಸಿ ಹಾವನ್ನು ಹಿಡಿದು ಕಾಡಿಗೆ ಬಿಡಿಸಿದರು. ಪಶ್ಚಿಮಘಟ್ಟಗಳಲ್ಲಿ ಮಳೆಗಾಲದ ವೇಳೆ ಬೆಚ್ಚನೆಯ ತಾಣ ಹುಡುಕಿಕೊಂಡು ಹಾವುಗಳು ಮನೆಯೊಳಗೆ ಬರುವುದುಂಟು. ಇವು ವಿಷರಹಿತ ಹಾವಾಗಿದ್ದರೂ ಕಚ್ಚಿದರೆ ಊತ ಬರುತ್ತದೆ ಎಂದು ಉರಗ ಪ್ರೇಮಿ ಗಿರಿಧರ ಕಲಗಾರು ತಿಳಿಸಿದರು.
1 ಕೋಟಿ ರೂ. ಪರಿಹಾರ ಕೋರಿ ರೋಹಿಣಿ ಸಿಂಧೂರಿ ವಿರುದ್ಧ ಕೇಸ್​ ದಾಖಲಿಸಿದ ಸಾ.ರಾ.ಮಹೇಶ್​!

ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್​! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − six =
Remember me
