| ಎನ್.ಎಲ್.ಶಿವಮಾದು ಬೆಂಗಳೂರು
ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3 ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿರುವ ಕಾರಣ ವಿದ್ಯಾರ್ಥಿಗಳ ಗೊಂದಲ, ಸಂದೇಹ ಮತ್ತು ಸಮಸ್ಯೆಗಳನ್ನು ನಿವಾರಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಶ್ನೋತ್ತರಗಳ ರೂಪದಲ್ಲಿ 20 ಅಂಶಗಳ ಪರಿಹಾರಗಳನ್ನು ಸಿದ್ಧಪಡಿಸುತ್ತಿದೆ.
ಇಲ್ಲಿಯವರೆಗೂ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಿ ಮರು ಪ್ರಯತ್ನ ಮಾಡುತ್ತಿದ್ದರು. ಆದರೆ, ಈ ಬಾರಿ 3 ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಮತ್ತು ಪರೀಕ್ಷೆಗೆ ಕೇವಲ ಒಂದೇ ತಿಂಗಳು ಬಾಕಿ ಇರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ನಿಯಮಗಳನ್ನು ಮನದಟ್ಟು ಮಾಡಿಕೊಡಲು ಈ ಯೋಜನೆ ಕಾರ್ಯರೂಪಕ್ಕೆ ತರುತ್ತಿದೆ. ಮೂರು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯಾವೆಲ್ಲ ಸಾಧಕ-ಬಾಧಕಗಳಾಗಬಹುದು ಎಂಬುದು ಪ್ರಾಯೋಗಿಕವಾಗಿ ತಿಳಿದಿಲ್ಲ. ಮೊದಲ ಪ್ರಯತ್ನವಾಗಿರುವುದರಿಂದ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಎದುರಾಗಿರುವ ಪ್ರಶ್ನೆಗಳು, ಗೊಂದಲಗಳ ಆಧಾರದ ಮೇಲೆ ಈ ಪರಿಹಾರ ಕಂಡುಕೊಳ್ಳಲು ಮಂಡಳಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
20 ಅಂಶಗಳಲ್ಲಿ ಏನೇನಿದೆ?: ಪ್ರಮುಖವಾಗಿ 20 ಅಂಶಗಳಲ್ಲಿ ಮಂಡಳಿಯು ಎಷ್ಟು ಪರೀಕ್ಷೆಗಳನ್ನು ನಡೆಸುತ್ತದೆ? ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳಾಗಿರುತ್ತವೆಯೇ? ಅಥವಾ 3 ಪರೀಕ್ಷೆಗಳು ಕೂಡ ವಾರ್ಷಿಕ ಪರೀಕ್ಷೆಗಳಾಗಿರುತ್ತವೆಯೇ? ವಾರ್ಷಿಕ ಮತ್ತು ಪೂರಕ ಎಂದು ಕರೆಯುವ ಬದಲಾಗಿ 3 ಪರೀಕ್ಷೆಗಳೆಂದು ಕರೆಯುವ ಉದ್ದೇಶವೇನು? ಹಾಗೂ ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಅನುಕೂಲಗಳೇನು? ಪ್ರಶ್ನೆಪತ್ರಿಕೆ ಸ್ವರೂಪ ಬದಲಾಗಿದೆಯೇ? ಅದು ಯಾವ ರೀತಿಯಲ್ಲಿರಲಿದೆ? ಎಂಬುದನ್ನು ತಿಳಿಸಲಿದೆ. ಮೊದಲನೇ ಪುಟದಿಂದ…
ಎಲ್ಲ ಪರೀಕ್ಷೆಗಳಿಗೂ ಏಕರೂಪದ ಪ್ರಶ್ನೆಪತ್ರಿಕೆ ಇರಲಿದೆಯೇ? ಮೊದಲ ಪರೀಕ್ಷೆಗೆ (ಪರೀಕ್ಷೆ-1) ಗೈರು ಹಾಜರಾದವರು, 2 ಮತ್ತು 3ನೇ ಪರೀಕ್ಷೆಗೆ ಹಾಜರಾಗಲು ಏನು ಮಾಡಬೇಕು? ಪರೀಕ್ಷೆ-1ಕ್ಕೆ ಯಾಕಾಗಿ ಹಾಜರಾಗಬೇಕು ಎಂಬ ಅಂಶಗಳನ್ನು ಹೊಂದಿದೆ.
ಪರೀಕ್ಷೆ ಬರೆಯಲು 6 ಅವಕಾಶ:ಖಾಸಗಿ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಅನುಸರಿಸಬೇಕಾದ ನಿಯಮಗಳು ಹಾಗೂ ಅವಕಾಶಗಳನ್ನು ಕೂಡ ತಿಳಿಸಿದೆ. ಒಬ್ಬ ವಿದ್ಯಾರ್ಥಿ 3 ಪರೀಕ್ಷೆಗಳಿಗೆ ಆರು ಪ್ರಯತ್ನಗಳನ್ನು ನಡೆಸಬಹುದು. ಎಲ್ಲ ಪರೀಕ್ಷೆ ಬಳಿಕವೂ ಅನುತ್ತೀರ್ಣರಾದರೆ ಯಾವ ರೀತಿಯಲ್ಲಿ ನಂತರದ ಪರೀಕ್ಷೆಗೆ ಹಾಜರಾಗಬೇಕು ಎಂಬುದರ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳಿಗೆ ಗೊಂದಲಗಳಿದ್ದವು. ಈ ಬಗ್ಗೆ ಬಹಳ ಸ್ಪಷ್ಟವಾಗಿ ಮತ್ತು ಸರಳವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದೆ. ಒಂದು ವೇಳೆ 6 ಪ್ರಯತ್ನದಲ್ಲೂ ಉತ್ತೀರ್ಣರಾಗದಿದ್ದರೆ, ಮತ್ತೆ ಹೊಸದಾಗಿ ಖಾಸಗಿ ಅಭ್ಯರ್ಥಿಯಾಗಿ ನೋಂದಣಿ ಮಾಡಿಕೊಂಡು ಉತ್ತೀರ್ಣರಾಗಲು ಕೂಡ ಅವಕಾಶವಿದೆ.
3 ಪರೀಕ್ಷೆಗಳಲ್ಲಿ ವಿವಿಧ ವಿಷಯ ಪಾಸಾದವರು ಪರಿಗಣನೆ ಹೇಗೆ?: ಪರೀಕ್ಷೆ-1ರಲ್ಲಿ ಕೆಲವು, ನಂತರದ 2-3ರಲ್ಲಿ ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳು ಪಾಸಾದರೆ ಅಂತಿಮವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ತಿಂಗಳು, ಪರೀಕ್ಷೆಯ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಆದರೆ, ಪುನರಾವರ್ತಿತವೆಂದು ಪರಿಗಣಿಸುವುದಿಲ್ಲ.
ಆಂತರಿಕ ಮೌಲ್ಯಮಾಪನಕ್ಕೆ ಒಂದೇ ಪ್ರಯತ್ನ :ಲಿಖಿತವಾಗಿ 3 ಪರೀಕ್ಷೆಗಳನ್ನು ಬರೆಸುತ್ತಿರುವುದರಿಂದ ಆಂತರಿಕ ಮೌಲ್ಯಮಾಪನಕ್ಕೂ 3 ಅವಕಾಶಗಳಿವೆಯೇ ಎಂಬುದು ಹಲವರ ಪ್ರಶ್ನೆಯಾಗಿದೆ. ಆದರೆ, ಆಂತರಿಕ ಮೌಲ್ಯಮಾಪನವು ಒಂದೇ ಬಾರಿ ನಡೆಯಲಿದೆ. ಈ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿಲ್ಲ.
ಎಲ್ಲ ಪರೀಕ್ಷೆಗಳಿಗೂ ಪರೀಕ್ಷಾ ಶುಲ್ಕ ಪಾವತಿಸುವ ಅಗತ್ಯವಿಲ್ಲ:ಪರೀಕ್ಷೆ-1ಕ್ಕೆ ಎಲ್ಲ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು. ಮೊದಲ ಪ್ರಯತ್ನದಲ್ಲಿಯೇ ವಿದ್ಯಾರ್ಥಿಗಳು ಉತ್ತೀರ್ಣರಾದರೆ, ಮತ್ತೊಂದು ಪ್ರಯತ್ನ ಮಾಡುತ್ತೇನೆಂದರೆ ಪರೀಕ್ಷಾ ಶುಲ್ಕ ಪಾವತಿಸಬೇಕು. ಅಂಕಪಟ್ಟಿಗೆ ಒಂದು ಬಾರಿ ಶುಲ್ಕ ಪಡೆಯಲಾಗುತ್ತದೆ.
ಮೂರೂ ಪರೀಕ್ಷೆ ಕಡ್ಡಾಯವಲ್ಲ
ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಮೂರೂ ಪರೀಕ್ಷೆಗಳನ್ನು ಬರೆಯುವ ಅಗತ್ಯವಿಲ್ಲ. ಮೊದಲ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಂತರ ತಮಗೆ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಬೇಕು, ಫಲಿತಾಂಶ ಸುಧಾರಿಸಿಕೊಳ್ಳಬೇಕು ಎಂದೆನಿಸಿದರೆ ಮಾತ್ರ ಉಳಿದ ಪರೀಕ್ಷೆಗಳಿಗೆ ಹಾಜರಾಗಬಹುದು.
ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3 ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳ ಗೊಂದಲಗಳನ್ನು ಸರಳವಾಗಿ ನಿವಾರಣೆ ಮಾಡುವ ಕೆಲಸ ಮಾಡಲಾಗುತ್ತಿದೆ.
| ಎನ್. ಮಂಜುಶ್ರೀ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷೆ

ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
