| ಗಂಗಾಧರ್​ ಬೈರಾಪಟ್ಟಣರಾಮನಗರತುಮಕೂರಿನ ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಗಿಸುವ ನಿಟ್ಟಿನಲ್ಲಿ ಬಿಜೆಪಿ ಕಸರತ್ತು ಆರಂಭಿಸಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದವರ ಒಳ ಸಂಚಿನ ಕಾರಣದಿಂದಾಗಿಯೇ ತುಮಕೂರು ಕ್ಷೇತ್ರದಿಂದ ಟಿಕೆಟ್​ ತಪ್ಪಿ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಮುದ್ದಹನುಮೇಗೌಡ, ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ಜಿಲ್ಲೆಯ ಕುಣಿಗಲ್​ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಘೋಷಿಸಿದ್ದಾರೆ, ಕಾಂಗ್ರೆಸ್​ನಿಂದ ಟಿಕೆಟ್​ ಸಿಕ್ಕೇ ಸಿಗುತ್ತೆ ಎಂಬ ಅಚಲ ಭರವಸೆ ಇವರದ್ದು. ಅತ್ತ, ಉತ್ತಮ ಚಾರಿತ್ರ್ಯ ಹೊಂದಿರುವ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೆಳೆದರೆ ಸಾಕಷ್ಟು ಲಾಭ ಎಂಬುದನ್ನ ಮನಗಂಡ ಬಿಜೆಪಿ ರಾಜ್ಯ ನಾಯಕರು ಎಸ್​ಪಿಎಂ ಅವರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆಗೆ ಪ್ರಚಾರ:ಮುದ್ದಹನುಮೇಗೌಡರು ಕುಣಿಗಲ್​ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಇವರಿಗೆ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್​ನಿಂದಲೇ ಸ್ಪರ್ಧೆ ಮಾಡಬೇಕು ಎನ್ನುವ ಹಂಬಲವಿದೆ. ಈ ಕಾರಣಕ್ಕಾಗಿಯೇ ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು ಸ್ಪರ್ಧೆ ಮಾಡಬೇಕು ಎನ್ನುವ ಸಲುವಾಗಿಯೇ ಕಾಂಗ್ರೆಸ್​ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಎಸ್​ಪಿಎಂ ಮಾಡಿದ್ದಾರೆ. ಆದರೆ, ಇವರ ಆಸೆ ಈಡೇರುವ ಲಕ್ಷಣಗಳು ಬಹುತೇಕ ಕ್ಷೀಣಿಸಿವೆ. ಕಾರಣ ಹಾಲಿ ಶಾಸಕ ಡಾ. ಎಚ್​.ಡಿ. ರಂಗನಾಥ್​ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ ಹತ್ತಿರದ ಸಂಬಂಧಿ. ರಂಗನಾಥ್​ ಬೆನ್ನಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್​ ಸಹ ನಿಂತಿದ್ದಾರೆ. ಇದರ ಹೊರತಾಗಿಯೂ ಮುಂದಿನ ಚುನಾವಣೆಯಲ್ಲಿ ಕುಣಿಗಲ್​ನಿಂದ ಕಣಕ್ಕೆ ಇಳಿಯಲೇಬೇಕು ಎಂದು ಸಂಕಲ್ಪ ಮಾಡಿರುವ ಎಸ್​ಪಿಎಂ ಭರದ ಸಿದ್ಧತೆ ಮಾಡುತ್ತಿದ್ದಾರೆ.

ಬಿಜೆಪಿ ಗಾಳ?:ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ನಿಂದ ಮುದ್ದಹನುಮೇಗೌಡರಿಗೆ ಟಿಕೆಟ್​ ದೊರೆಯುವುದು ಅನುಮಾನ ಎನ್ನುವುದನ್ನು ಅರಿತ ಬಿಜೆಪಿ ನಾಯಕರು, ಎಸ್​ಪಿಎಂ ಅವರನ್ನು ಸಂಪರ್ಕಿಸಿ ಬಿಜೆಪಿಗೆ ಸೆಳೆಯುವ ಯತ್ನ ಮಾಡಿದ್ದಾರೆ. ಕುಣಿಗಲ್​ನಿಂದ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕೆ ಇಳಿಸುವುದು ಹಾಗೂ ಒಂದು ವೇಳೆ ಈ ಚುನಾವಣೆಯಲ್ಲಿ ಪರಾಭವಗೊಂಡರೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಷರತ್ತುಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಎಸ್​ಪಿಎಂಗೆ ಮಣೆ ಹಾಕಿದರೆ, ಅತ್ತ ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಡಿ.ಕೃಷ್ಣಕುಮಾರ್​ ಅವರಿಗೆ ಈ ಬಾರಿ ಟಿಕೆಟ್​ ಕೈ ತಪ್ಪಲಿದೆ.
ಟಿಕೆಟ್​ ತಪ್ಪಲೇನು ಕಾರಣ?:ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಅವರಿಗೆ ಪಕ್ಷದ ಟಿಕೆಟ್​ ನಿರಾಕರಿಸಲಾಗಿತ್ತು. ಅಂದಿನ ಮೈತ್ರಿ ಸರ್ಕಾರ ಎಚ್.ಡಿ. ದೇವೇಗೌಡ ಅವರನ್ನು ಕಣಕ್ಕೆ ಇಳಿಸಿತ್ತು. ಮೇಲ್ನೋಟಕ್ಕೆ ಇದು ಮೈತ್ರಿ ಧರ್ಮ ಪಾಲನೆ ಆದರೂ, ಎಸ್​ಪಿಎಂ ಅವರಿಗೆ ಟಿಕೆಟ್​ ತಪ್ಪಿಸಲೇಬೇಕು ಎಂದು ಮಾಡಿದ ತಂತ್ರ ಎನ್ನುವುದು ಎಸ್​ಪಿಎಂ ಅಭಿಮಾನಿಗಳ ಆರೋಪ. ಕ್ಲೀನ್​ ಇಮೇಜ್​ ಹೊಂದಿರುವ ಮುದ್ದಹನುಮೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮುದ್ದಹನುಮೇಗೌಡರು ಮತ್ತೆ ಲೋಕಸಭೆ ಪ್ರವೇಶ ಮಾಡಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​ ಕಠಿಣವಾಗಬಹುದು ಎನ್ನುವ ಕಾರಣಕ್ಕಾಗಿಯೇ ಡಿಕೆಶಿ ಸಹೋದರರು ಟಿಕೆಟ್​ ತಪ್ಪಿಸಿದರು ಎನ್ನಲಾಗುತ್ತಿದೆ. ನಂತರ ರಾಜ್ಯಸಭೆ ಮತ್ತು ವಿಧಾನ ಪರಿಷತ್​ ಚುನಾವಣೆಯಲ್ಲಿಯೂ ಇವರಿಗೆ ಟಿಕೆಟ್​ ನೀಡುವಲ್ಲಿ ಪಕ್ಷ ವಿಲವಾಗಿತ್ತು.
ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್​ಐಗೆ 20 ವರ್ಷ ಜೈಲು! 4 ವರ್ಷದ ಹಿಂದೆ ನಡೆದಿತ್ತು ಹೀನ ಕೃತ್ಯ

ತುಮಕೂರು ಲೋಕಸಭೆ ಚುನಾವಣೆಯಲ್ಲಿ ಎಸ್​ಪಿಎಂಗೆ ಟಿಕೆಟ್​ ಕೈ ತಪ್ಪಿದ್ದರ ರಹಸ್ಯ ಬಯಲು! ಡಿಕೆ ಬ್ರದರ್ಸ್​ ವಿರುದ್ಧ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
