ಮಂಗಳೂರು:ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್​ ಮತ್ತು ಬೆಂಗಳೂರು ಸಿಟಿ ಜಂಕ್ಷನ್​ ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್​ 31ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ನಿರಂತರ ಮಳೆ ಮತ್ತು ಭೂಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆ ಆಗಿರುವುದರಿಂದ ಮಂಗಳೂರು- ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ರೈಲ್ವೆ ಮಂಡಳಿ ಈ ಮೂಲಕ ಸ್ಪಂದಿಸಿದೆ.
ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ..ಕೆಂಗೇರಿ- ರಾತ್ರಿ 8.49ರಾಮನಗರ- ರಾತ್ರಿ 9.13ಚನ್ನರಾಯಪಟ್ಟಣ- ರಾತ್ರಿ 9.24ಮಂಡ್ಯ- ರಾತ್ರಿ 9.54ಮೈಸೂರು ಜಂಕ್ಷನ್​- ರಾತ್ರಿ 11ಕೃಷ್ಣರಾಜನಗರ- ರಾತ್ರಿ 11.49ಹೊಳೆನರಸಿಪುರ- ರಾತ್ರಿ 12.43ಹಾಸನ- ರಾತ್ರಿ 1.35ಸಕಲೇಶಪುರ- ಬೆಳಗಿನಜಾವ 3ಸುಬ್ರಹ್ಮಣ್ಯ ರೋಡ್​- ಬೆಳಗ್ಗೆ 6.10ಕಬಕಪುತ್ತೂರು- ಬೆಳಗ್ಗೆ 7ಬಂಟ್ವಾಳ- ಬೆಳಗ್ಗೆ 7.30ಪಡೀಲ್-​ ಬೆಳಗ್ಗೆ 8.25ಮಂಗಳೂರು ಸೆಂಟ್ರಲ್- ಬೆಳಗ್ಗೆ​ 09.05
ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ…ಮಂಗಳೂರು ಜಂಕ್ಷನ್- ಸಂಜೆ​ 6.48ಪಡೀಲ್​- ಸಂಜೆ 7.10ಬಂಟ್ವಾಳ- ಸಂಜೆ 7.20ಕಬಕಪುತ್ತೂರು- ಸಂಜೆ 7.48ಸುಬ್ರಹ್ಮಣ್ಯ ರೋಡ್​- ರಾತ್ರಿ 8.40ಸಕಲೇಶಪುರ- ರಾತ್ರಿ 9.20ಹಾಸನ- ಮಧ್ಯರಾತ್ರಿ 12.25ಹೊಳೆನರಸಿಪುರ- ಮಧ್ಯರಾತ್ರಿ 1.13ಕೃಷ್ಣರಾಜನಗರ- ರಾತ್ರಿ 2.08ಮೈಸೂರು ಜಂಕ್ಷನ್​- ಬೆಳಗಿನ ಜಾವ 3ಮಂಡ್ಯ- ಬೆಳಗಿನ ಜಾವ 3.54ಚನ್ನರಾಯಪಟ್ಟಣ- ಬೆಳಗಿನಜಾವ 4.30ರಾಮನಗರ- ಬೆಳಗಿನಜಾವ 4.42ಕೆಂಗೇರಿ- ಬೆಳಗಿನಜಾವ 5.11ಬೆಂಗಳೂರು ಸಿಟಿ ಜಂಕ್ಷನ್​- ಬೆಳಗ್ಗೆ 6.15
ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಹತ್ತಿರದ ಶಿರಾಡಿ ಘಾಟ್​ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಿನಂಪ್ರತಿ ಉಭಯ ನಗರಗಳ ನಡುವೆ ತಲಾ ಒಂದು ಹಗಲು ರೈಲು ಮತ್ತು ರಾತ್ರಿ ರೈಲು ಇದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಅವಶ್ಯಕತೆ ತುಂಬಾ ಇದೆ ಎಂದು ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಯಾವ ದಿನ ಸಂಚಾರ?:ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜುಲೈ 27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರ್​ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜುಲೈ 26ರಿಂದ ಆಗಸ್ಟ್​ 30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರಿನ ರೈಲು ಸಂಚರಿಸಲಿದೆ.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಆಟವಾಡುತ್ತಲೇ ಅಪ್ಪನ ವಾಹನಕ್ಕೆ ಬಲಿಯಾದ ಕಂದಮ್ಮ! ವಾಹನ ರಿವರ್ಸ್​ ತೆಗೆದುಕೊಳ್ಳುವಾಗ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
