ಮೈಸೂರು:ಮೇಣದಿಂದ ತಯಾರಿಸಿದ ತಂದೆಯ ಪ್ರತಿಮೆ ಮುಂದೆ ಮಗನೊಬ್ಬ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಕಳೆದ ವರ್ಷ ವರನ ತಂದೆ ಕರೊನಾದಿಂದ ಮೃತಪಟ್ಟಿದ್ದರು. ತನ್ನ ಮದ್ವೆಗೆ ತಂದೆಯನ್ನ ಕರೆತರಬೇಕೆಂದು ನಿರ್ಧರಿಸಿದ ಮಗ, ಮೇಣದಲ್ಲಿ ತಂದೆಯ ಪ್ರತಿಮೆ ನಿರ್ಮಿಸಿ ಮದುವೆ ಮಂಟಪದಲ್ಲಿ ಖುರ್ಚಿ ಮೇಲೆ ಕೂರಿಸಿದ್ದರು. ತಂದೆ ಮುಂದೆಯೇ ಕುಳಿತು ಮದ್ವೆ ಶಾಸ್ತ್ರದಲ್ಲಿ ಪಾಲ್ಗೊಂಡರು. ಈ ಭಾವುಕ ಕ್ಷಣಗಳ ಫೋಟೋಗಳು ವೈರಲ್​ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಜ್ಜಂಪುರ ಮೂಲದ ಡಾ.ಯತೀಶ್ ಮತ್ತು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ಡಾ.ಅಪೂರ್ವ ದಾಪಂತ್ಯಕ್ಕೆ ಕಾಲಿಟ್ಟ ಜೋಡಿ. ಮೈಸೂರಿನ ಜೆ.ಎಸ್.ಎಸ್. ಆಯುರ್ವೇದ ಕಾಲೇಜಿನಲ್ಲಿ ಡಾ.ಯತೀಶ್​ ಎಂ.ಡಿ ವ್ಯಾಸಂಗ ಮಾಡುತ್ತಿದ್ದಾರೆ.

ಡಾ.ಯತೀಶ್​ ಅವರ ತಂದೆ ರಮೇಶ್ ಕಳೆದ ವರ್ಷ ಕೋವಿಡ್​ನಿಂದ ಮೃತಪಟ್ಟಿದ್ದರು. ಮದುವೆ ಶಾಸ್ತ್ರಗಳಲ್ಲಿ ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಪೂಜೆಗೆ ವರ ಕುಳಿತಿರುವ ಫೋಟೋಗಳು ವೈರಲ್​ ಆಗಿವೆ.
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ತಾಯಿ-ಮಗು ಸೇರಿ ಮೂವರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 6 =
Remember me
