ಬೆಂಗಳೂರು:ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್​ಗೆ ಗುಡ್​ ಬೈ ಹೇಳಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಕುಣಿಗಲ್​ ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಗೊತ್ತಾ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಕೈತಪ್ಪಿತ್ತು. ಇದಕ್ಕೆ ಕಾರಣ ಡಿಕೆ ಬ್ರದರ್ಸ್​ ಕಾರಣ ಎಂದು ಪರೋಕ್ಷವಾಗಿ ಆಕ್ರೋಶವನ್ನೂ ಹೊರಹಾಕಿದ್ದರು. ಅಲ್ಲದೆ, ಕುಣಿಗಲ್​ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಕಾಂಗ್ರೆಸ್​ನಿಂದ ಟಿಕೆಟ್​ ಬಯಸಿದ್ದರಾದರೂ ಸಿಗುವ ಭರವಸೆ ಬರಲೇ ಇಲ್ಲ. ಇದರಿಂದ ಬೇಸತ್ತ ಎಸ್​ಪಿಎಂ, ಇಂದು(ಗುರುವಾರ) ಬೆಳಗ್ಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​ಪಿಎಂ, 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಆಗುವುದು ಖಚಿತ ಎನ್ನುತ್ತಲೇ ಇಂದು ಸಂಜೆಯೊಳಗೆ ಕಾಂಗ್ರೆಸ್​ಗೆ ರಾಜೀನಾಮೆ ಪತ್ರ ಕೊಡುವೆ ಎಂದು ಘೋಷಿಸಿದರು.
ಆದರೆ ಯಾವ ಪಕ್ಷ ಸೇರುವೆ ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲವಾದರೂ ಬಿಜೆಪಿ ಪಕ್ಷವನ್ನೇ ಸೇರುವ ಸಾಧ್ಯತೆ ಇದೆ. ವಿಜಯವಾಣಿ ಜತೆ ಮಾತನಾಡಿದ ಎಸ್​ಪಿಎಂ, ಶೀಘ್ರವೇ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವೆ. ಮಹಾಲಯ ಅಮಾವಸ್ಯೆ(ಪಿತೃಪಕ್ಷ)ಗೂ ಮುನ್ನವೇ ಈ ಕೆಲಸ ಆಗುತ್ತೆ. ಯಾವುದೇ ಕಾರಣಕ್ಕೂ ತಡ ಮಾಡಲ್ಲ. ನನ್ನ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದುವರಿಯುವೆ ಎಂದರು. ಆಮ್​ ಆದ್ಮಿ ಪಾರ್ಟಿಗೆ ಸೇರುತ್ತೀರಾ? ಎಂಬ ಪ್ರಶ್ನೆಗೆ ನಕ್ಕ ಎಸ್​ಪಿಎಂ, ಶೀಘ್ರವೇ ಎಲ್ಲಕ್ಕೂ ತೆರೆಬೀಳಲಿದೆ ಎಂದಷ್ಟೇ ಹೇಳಿದರು.
ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್​, ಕಾಂಗ್ರೆಸ್​, ಬಿಜೆಪಿ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆ ಇರೋದು. ಮೂರು ಪಕ್ಷದಲ್ಲೂ ಒಕ್ಕಲಿಗ ನಾಯಕರೇ ಇದ್ದು, ತ್ರಿಕೋನ ಸ್ಪರ್ಧೆ ಏರ್ಪಡುತ್ತಲೇ ಇರುತ್ತೆ. ಆದರೆ ಇದುವರೆಗೂ ಬಿಜೆಪಿಯಿಂದ ಯಾರೊಬ್ಬರೂ ಶಾಸಕರಾಗಿ ಆಯ್ಕೆಯಾಗಿಲ್ಲ. ಗೆಲುವಿನ ಸಮೀಪಕ್ಕೆ ಬಂದರೂ ವಿಜಯ ದಕ್ಕಿಲ್ಲ. ಇನ್ನು ಎಸ್​ಪಿಎಂ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇ ಆದರೆ ಕುಣಿಗಲ್​​ನ ಪ್ರಪ್ರಥಮ ಬಿಜೆಪಿ ಶಾಸಕ ಎಂಬ ಹೆಗ್ಗಳಿಕೆ ಅವರಿಗೆ ದಕ್ಕಲಿದೆ ಎಂದು ಚರ್ಚೆ ಶುರುವಾಗಿದೆ. ಅದ್ಹೇನೆ ಇರಲಿ ಮುದ್ದಹನುಮೇಗೌಡರು ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ಅಧಿಕೃತ ಘೋಷಣೆ ಆಗಿಲ್ಲವಾದರೂ ಬಿಜೆಪಿ ಸೇರುತ್ತಾರೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ.
ಕಾಂಗ್ರೆಸ್​ಗೆ ಮುದ್ದಹನುಮೇಗೌಡ ರಾಜೀನಾಮೆ! ಡಿಕೆಶಿ-ಸಿದ್ದು ಜತೆ ಮಾತುಕತೆ ನಡೆಸಿ ಮಹ್ವತ್ವದ ನಿರ್ಧಾರ ಪ್ರಕಟಿಸಿದ ಎಸ್​ಪಿಎಂ

ಅಪಘಾತದಲ್ಲಿ ಗ್ರಾಪಂ ಸದಸ್ಯ ಸಾವು: ದೀರ್ಘದಂಡ ನಮಸ್ಕಾರ ಹಾಕಿ ಗ್ರಾಮಸ್ಥರು ಪ್ರಾರ್ಥಿಸಿದರೂ ಫಲ ನೀಡಲಿಲ್ಲ ದೇವರು…

ಮೈಸೂರಲ್ಲಿ ಹಂದಿ ಜ್ವರಕ್ಕೆ ಗರ್ಭಿಣಿ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + sixteen =
Remember me
