ತಿಪಟೂರು:ಕೆರೆಗೋಡಿ-ರಂಗಾಪುರ ಸುಕ್ಷೇತ್ರದ 8ನೇ ಉತ್ತರಾಧಿಕಾರಿಯನ್ನಾಗಿ ಷಣ್ಮುಖಸ್ವಾಮಿ ಅವರನ್ನು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಆಯ್ಕೆ ಮಾಡಿದರು.
ಶ್ರೀಮಠದಲ್ಲಿ ಗುರುಸಪ್ತಾಹ ನಡೆಯುತ್ತಿರುವ ಸಂದರ್ಭದಲ್ಲಿಯೇ ಶ್ರೀಮಠದ ಮನೆ ವಂಶಸ್ಥರಾದ ದಿ.ಏಜೆಂಟ್​ ಶಿವನಂಜಪ್ಪ ಅವರ 3ನೇ ಪುತ್ರ ಶ್ರೀ ರೇಣುಕಾರಾಧ್ಯ ಹಾಗೂ ಶಂಕರಮಣಿ ದಂಪತಿಯ ಕಿರಿಯ ಪುತ್ರ, 35 ವರ್ಷದ ಷಣ್ಮುಖಸ್ವಾಮ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ ಶ್ರೀಗಳು, ಭಾನುವಾರ ಅವರ ಮನೆಗೆ ತೆರಳಿ ಸರಳವಾಗಿ ಪೂಜಾ ವಿಧಿವಿಧಾನ ಮುಗಿಸಿದರು. ನಂತರ ಮನೆಯವರೆಲ್ಲರ ಸಮ್ಮತಿಯೊಂದಿಗೆ ಷಣ್ಮುಖಸ್ವಾಮಿ ಅವರನ್ನು ಶ್ರೀ ಮಠಕ್ಕೆ ಕರೆದುಕೊಂಡು ಬಂದರು.
ಶಂಕರೇಶ್ವರ, ರಂಗನಾಥಸ್ವಾಮಿ ದೇಗುಲಗಳು ಸೇರಿ ಶ್ರೀ ಮಠದ ಹಿರಿಯ ಶ್ರೀಗಳ ಗದ್ದುಗೆಗಳಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು.
ಸ್ನೇಹಿತರು, ಸಂಬಂಧಿಗಳು ಮತ್ತು ಪಾಲಕರ ಒಪ್ಪಿಗೆ ಮೇರೆಗೆ ಉತ್ತರಾಧಿಕಾರಿ ಆಯ್ಕೆ ನಡೆದಿದೆ. ಗುರುಪರಂಪರೆ ವಂಶ ಪಾರಂಪರ್ಯವಾಗಿ ಬಂದಿದ್ದರೂ, ಇನ್ನಿವರು ಮಠಕ್ಕೆ ಸೇರಿದವರು. ಪಿತೃ ವಾತ್ಸಲ್ಯ, ಸಂಬಂಧಿ, ಸ್ನೇಹಿತ ಎಂಬ ಭಾವನೆಗಳನ್ನು ತ್ಯಜಿಸಿ, ಎಲ್ಲರೂ ಸಾಮಾನ್ಯ ಭಕ್ತರಂತೆ ಮಠಕ್ಕೆ ಬಂದು ಹೋಗಬಹುದೇ ವಿನಃ ಬಯಸಿದಾಗ ಬಂದು ಹೋಗುವಂತಿಲ್ಲ.| ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿಕೆರೆಗೋಡಿ-ರಂಗಾಪುರ ಸುಕ್ಷೇತ್ರ
ನಿಮ್ಮ ಮಸೀದಿಯಲ್ಲಿ ನಿಮ್ಗೆ ಪ್ರವೇಶವಿಲ್ಲ, ಹಕ್ಕಿಗಾಗಿ ಅಲ್ಲಿ ಧ್ವನಿ ಎತ್ತಿ… ಶಿಕ್ಷಣ ವ್ಯವಸ್ಥೆಯಲ್ಲಿ ಹೋರಾಟ ಮಾಡ್ಬೇಡಿ: ನಾಗೇಶ್

ತುಮಕೂರಲ್ಲಿ ಆರ್ಕೆಸ್ಟ್ರಾ ಕಲಾವಿದರನ್ನ ವೇಶ್ಯಾವಾಟಿಕೆ ದೂಡಲು ಯತ್ನ! ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ… ಆಡಿಯೋ ವೈರಲ್​

ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:16 − 2 =
Remember me
