ಮೈಸೂರು:ಜೈ ಶ್ರೀರಾಮ್, ಜೈ ಆಂಜನೇಯ… ನಾವೆಲ್ಲರೂ ಹಿಂದೂ…‌ ನಾವೆಲ್ಲರೂ ಒಂದೇ… ಜೈ ಶ್ರೀರಾಮ್… ಎಂಬ ಘೋಷವಾಕ್ಯ ಶ್ರೀರಂಗಪಟ್ಟಣದ ಬನ್ನಿಮಂಟಪದಲ್ಲಿ ಮೊಳಗಿದೆ.
ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಕುರಿತ ವಿವಾದ ಭುಗಿಲೆದ್ದಿದ್ದು, ಶನಿವಾರ ಬೆಳಗ್ಗೆಯೇ ನೂರಾರು ಹಿಂದು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಜೈ ಶ್ರೀರಾಮ್​ ಘೋಷಣೆ ಕೂಗುತ್ತಿದ್ದಾರೆ. ವಿಶ್ವ ಹಿಂದು ಪರಿಷತ್​ ವತಿಯಿಂದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಟ್ಟಣದಾದ್ಯಂತ ಜೂ.5ರ ಮುಂಜಾನೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಮೆರವಣಿಗೆ ಕೈಬಿಟ್ಟ ಹಿಂದು ಸಂಘಟನೆಗಳು ಬನ್ನಿಮಂಟಪದ ಬಳಿ ಹನುಮಾನ್​ ಚಾಲೀಸಾ ಪಠಣ ಮಾಡುತ್ತಿವೆ. ಇಡೀ ಬನ್ನಿಮಂಟಪ ಕೇಸರಿಮಯವಾಗಿದ್ದು, ಜೈ ಶ್ರೀರಾಮ್… ಘೋಷಣೆ ಕೂಗುತ್ತಿದ್ದಾರೆ.
ಆಟೋ, ಬೈಕ್‌, ಕಾರುಗಳ ಮೂಲಕ ಏಕಕಾಲಕ್ಕೆ ನೂರಾರು ಸಂಖ್ಯೆಯಲ್ಲಿ ಬನ್ನಿಮಂಟಪದ ಬಳಿಗೆ ಕೇಸರಿ ಧ್ವಜ ಹಿಡಿದು ಹಿಂದು ಕಾರ್ಯಕರ್ತರು ಆಗಮಿಸಿದರು. ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಬನ್ನಿಮಂಟಪದಲ್ಲಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಪೂಜೆ ಮಾಡಿ ಭಜನೆ ಆರಂಭಿಸಿದರು.
ತುಮಕೂರು ಜಿಲ್ಲಾ BJP ಮುಖಂಡನ ಕೊಲೆಗೆ ಯತ್ನ: ಇಬ್ಬರು ಇಂಜಿನಿಯರ್​ ಸಸ್ಪೆಂಡ್​, ತಲೆಮರೆಸಿಕೊಂಡವನಿಗಾಗಿ ಶೋಧ

ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಮರಕ್ಕೆ ಡುಕಾಟಿ ಬೈಕ್ ಡಿಕ್ಕಿ: ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ-ಗೆಳತಿ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − six =
Remember me
