ಬಳ್ಳಾರಿ:ಕರೊನಾದಂತಹ ಸಂಕಷ್ಟ ಕಾಲದಲ್ಲಿ ಜನರಿಗೆ ನೆರವಾಗುವುದನ್ನು ಬಿಟ್ಟು ಅಧಿಕಾರಕ್ಕಾಗಿ ಜನಪ್ರತಿನಿಧಿಗಳು ಕಿತ್ತಾಡುವುದು ಸರಿಯಲ್ಲ. ಇನ್ನೂ ಎರಡೂ ವರ್ಷ ಬಿ.ಎಸ್​. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಬೇಕು. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಅವಕಾಶ ಕೊಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕಲ್ಯಾಣ ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಹೇಳಬೇಕೋ, ಹೇಳಬಾರದೋ ಎನ್ನುವ ಗೊಂದಲ ಇದೆ. ಆದರೂ ಜನರ ಭಾವನೆ ಏನಿದೆ ಎಂಬುದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ. ಜನ ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ದುಸ್ಥಿತಿಯಲ್ಲಿ ನಾಯಕತ್ವಕ್ಕಾಗಿ, ಖುರ್ಚಿಗಾಗಿ ಬಡಿದಾಡುತ್ತಿರುವುದು ಸರಿಯಲ್ಲ. ಜನಪ್ರತಿನಿಧಿಗಳು ಮೊದಲು ಜನರ ನೋವುಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಇಳಿ ವಯಸ್ಸಿನಲ್ಲಿಯೂ ಕರೊನಾ ನಿರ್ವಹಣೆ ಸಲುವಾಗಿ ಯಡಿಯೂರಪ್ಪ ಅವರು ಶ್ರಮಿಸುತ್ತಿದ್ದಾರೆ. ಆರ್ಥಿಕ ತೊಂದರೆಯಿದ್ದರೂ ಬಡವರಿಗಾಗಿ ಹಲವು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇಂತಹ ಸಮಯದಲ್ಲಿ ಬಿ‌‌‌.ಎಸ್.ಯಡಿಯೂರಪ್ಪ ಅವರ ಕೆಲಸಕ್ಕೆ ಬಲ ತುಂಬಬೇಕೆ ವಿನಃ ಅಧಿಕಾರಕ್ಕಾಗಿ ಕಿತ್ತಾಡುವುದು ಸೂಕ್ತವಲ್ಲ ಎನ್ನುವುದು ಜನರ ಭಾವನೆ. ಈ ಬಗ್ಗೆ ಜನಪ್ರತಿನಿಧಿಗಳು ಅರಿಯಬೇಕು ಎಂದು ಶ್ರೀಶೈಲ ಜಗದ್ಗುರುಗಳು ಸಲಹೆ ನೀಡಿದರು.
ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ನಾಯಕತ್ವ ಬದಲಾವಣೆ ಕೂಗು ಎದ್ದಿತ್ತು. ಅದಾದ ಬಳಿಕ 2013ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈಗಲೂ ನಾಯಕತ್ವ ಬದಲಾವಣೆ ಕೂಗು ಎದ್ದಿದೆ. ಮುಂದೆ ಯಾವ ಪರಿಸ್ಥಿತಿ ತಂದೊಡ್ಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನೆರಡು ವರ್ಷ ಅವರೇ ಸಿಎಂ ಆಗಿರಬೇಕು. ಈ ಸಮಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ ಎಂದು ಶ್ರೀಗಳು ಪ್ರತಿಪಾದಿಸಿದರು.
ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿದ್ದು ನಾನೇ: ಚಂದ್ರಕಾಂತ ಬೆಲ್ಲದ​

ಸಿದ್ದರಾಮಯ್ಯ ಇಲ್ಲಾಂದ್ರೆ ಕಾಂಗ್ರೆಸ್ ಝೀರೋ, ಇಡೀ ಪಕ್ಷ ಮುಳುಗಿ ಹೋಗುತ್ತೆ: ಎಚ್​.ಡಿ.ರೇವಣ್ಣ

ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

Sign in to your account
Please enter an answer in digits:four × four =
Remember me
